ಫ್ರೆಂಡ್ಗಾಗಿ ನಿಧಿ ಸುಬ್ಬಯ್ಯ ಮನೆ ಎದುರು ದೊಡ್ಡ ಅವಾಂತರ ಮಾಡಿದ್ದ ಯಶ್; ಇಲ್ಲಿದೆ ವಿವರ
Yash: ಯಶ್ ಮೈಸೂರಿನಲ್ಲಿ ಓದಿದ್ದು. ಕಾಲೇಜ್ನಲ್ಲಿ ಇರುವಾಗ ಸಾಕಷ್ಟು ಎಂಜಾಯ್ಮೆಂಟ್ ಮಾಡಿದ್ದಾರೆ. ಮುಖ್ಯವಾಗಿ ಅವರು ಸಾಕಷ್ಟು ಫನ್ ಆ್ಯಕ್ಟಿವಿಟಿ ಕೂಡ ಮಾಡಿದ್ದರು ಎಂಬುದಾಗಿ ಅವರೇ ಹೇಳಿಕೊಂಡಿದ್ದರು. ಅವರ ಸಂದರ್ಶನದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಾಕಿಂಗ್ ಸ್ಟಾರ್ ಯಶ್ (Yash) ಎಂದರೆ ಇಡೀ ವಿಶ್ವಕ್ಕೆ ತಿಳಿಯುತ್ತದೆ. ಅವರು ಅಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಪಕ್ಕಾ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರು ಈಗ ಶ್ರೀಮಂತ ಜೀವನ ನಡೆಸುತ್ತಿದ್ದಾರೆ. ಯಶ್ ಅವರು ಕಾಲೇಜು ದಿನಗಳಲ್ಲಿ ಸಾಕಷ್ಟು ತರಲೆ ಮಾಡಿಕೊಂಡಿದ್ದರು. ಅವರು ಈ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ನಿಧಿ ಸುಬ್ಬಯ್ಯ ಮನೆ ಎದುರು ಯಶ್ ಪಟಾಕಿ ಸಿಡಿಸಿದ್ದರಂತೆ. ಇದು ಅಚ್ಚರಿ ಎನಿಸಿದರೂ ಸತ್ಯ. ನಿಧಿ ಸುಬ್ಬಯ್ಯ ಆಗಿನ್ನೂ ಹೀರೋಯಿನ್ ಆಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಯಶ್ ಮೈಸೂರಿನಲ್ಲಿ ಓದಿದ್ದು. ಕಾಲೇಜ್ನಲ್ಲಿ ಇರುವಾಗ ಸಾಕಷ್ಟು ಎಂಜಾಯ್ಮೆಂಟ್ ಮಾಡಿದ್ದಾರೆ. ಮುಖ್ಯವಾಗಿ ಅವರು ಸಾಕಷ್ಟು ಫನ್ ಆ್ಯಕ್ಟಿವಿಟಿ ಕೂಡ ಮಾಡಿದ್ದರು ಎಂಬುದಾಗಿ ಅವರೇ ಹೇಳಿಕೊಂಡಿದ್ದರು. ಅವರ ಸಂದರ್ಶನದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಯಶ್ ಎದುರು ಪ್ರಿಯಾಮಣಿ ಕುಳಿತಿದ್ದರು. ಅವರು ಪ್ರಿಯಾಮಣಿಗೆ ತಮ್ಮ ಹಳೆಯ ಕಥೆ ಹೇಳುತ್ತಿದ್ದರು. ‘ಹುಡುಗಿ ಮನೆಗೆ ಪಟಾಕಿ ಹಚ್ಚಿದ್ದೆ’ ಎಂದು ಯಶ್ ಮಾತು ಆರಂಭಿಸಿದರು. ‘ಆ ಹುಡುಗಿ ಈಗ ನಟಿ ಆಗಿದ್ದಾರೆ. ಅವರು ನಿಧಿ ಸುಬ್ಬಯ್ಯ’ ಎಂದರು ಯಶ್. ‘ನಿಧಿ ಸುಬ್ಬಯ್ಯ ನಮ್ಮ ಕಾಲೇಜ್ನಲ್ಲಿ ಓದಿದ್ದು. ನನ್ನ ಫ್ರೆಂಡ್ ನಿಧಿಯನ್ನು ಪ್ರೀತಿಸುತ್ತಿದ್ದ. ಅವನಿಗೆ ನಾವು ಸಹಾಯ ಮಾಡುತ್ತಿದ್ದವು. ಈ ಹುಡುಗರು ಸರಿ ಇಲ್ಲ ಎಂದು ಆಗ ನಿಧಿ ಸುಬ್ಬಯ್ಯಗೆ ಯಾರೋ ಫಿಟ್ಟಿಂಗ್ ಇಟ್ಟಿದ್ದರು. ಆಗ ನಾನು ಹಾಗೂ ನನ್ನ ಗೆಳೆಯರು ಹೋಗಿ ಅವರ ಮನೆಯ ಗೇಟ್ಗೆ ಪಟಾಕಿ ಹಚ್ಚಿದ್ದೆವು. ಬರುವಾಗ ಲೈಟ್ ಎಲ್ಲಾ ಆನ್ ಆಗಿತ್ತು. ಜಸ್ಟ್ ಮಿಸ್’ ಎಂದು ಯಶ್ ಹೇಳಿದ್ದರು.
View this post on Instagram
ಆ ಬಳಿಕ ಸುಮಾರು ವರ್ಷಗಳ ನಂತರ ನಿಧಿ ಸುಬ್ಬಯ್ಯ ಅವರು ಸಿಕ್ಕರಂತೆ. ಕಾಲೇಜು ಓದಿದ್ದ ದಿನದಂದು ಈ ರೀತಿ ಆಗಿತ್ತಲ್ಲ ಎಂದು ಅವರಿಗೆ ಯಶ್ ಹೇಳಿದ್ದರಂತೆ. ಆ ಬಳಿಕ ಅದನ್ನು ಮಾಡಿದ್ದು ತಾವೇ ಎಂಬುದಾಗಿ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ನೋಡಿ ಯಶ್, ರಾಧಿಕಾ ಹೇಳಿದ್ದು ಹೀಗೆ
ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗಲಿದೆ. ನಿಧಿ ಸುಬ್ಬಯ್ಯ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈ ಮೊದಲು ಬಿಗ್ ಬಾಸ್ಗೆ ಅವರು ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



