AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ; ಸತ್ಯ ಬಿಚ್ಚಿಟ್ಟ ನಟಿ ಮೇಘನಾ ರಾಜ್

ಅರ್ಜುನ್ ಸರ್ಜಾ ಪುತ್ರಿ ಅಂಜನಾ ಅವರ ವಿದೇಶಿ ಮದುವೆಗೆ ನಟಿ ಮೇಘನಾ ರಾಜ್ ಗೈರಾಗಿದ್ದಕ್ಕೆ ಕೊನೆಗೂ ಕಾರಣ ಸಿಕ್ಕಿದೆ. ‘ನನ್ನನ್ನು ಮದುವೆಗೆ ಕರೆದಿರಲಿಲ್ಲ, ಕರೆದಿದ್ದ ಧ್ರುವ-ಪ್ರೇರಣಾ ಹೋಗಿದ್ದರು’ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದು, ಆಹ್ವಾನ ನೀಡದಿರುವ ಬಗ್ಗೆ ಅರ್ಜುನ್ ಸರ್ಜಾ ಕುಟುಂಬವನ್ನೇ ಕೇಳಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ; ಸತ್ಯ ಬಿಚ್ಚಿಟ್ಟ ನಟಿ ಮೇಘನಾ ರಾಜ್
ಮೇಘನಾ ಹಾಗೂ ಅರ್ಜುನ್ ಮಗಳ ಮದುವೆ ಫೋಟೋ
ರಾಜೇಶ್ ದುಗ್ಗುಮನೆ
|

Updated on: Nov 03, 2026 | 1:13 PM

Share

ಮುಖ್ಯಾಂಶಗಳು

  • ಅರ್ಜುನ್ ಸರ್ಜಾ ಮಗಳ ಮದುವೆಗೆ ಬಾರದ ಮೇಘನಾ ರಾಜ್
  • ಕೊನೆಗೂ ಸತ್ಯ ಬಿಚ್ಚಿಟ್ಟ ನಟಿ
  • ಆಹ್ವಾನ ಇರಲಿಲ್ಲ ಎಂದ ಮೇಘನಾ

ದಕ್ಷಿಣ ಭಾರತದ ಖ್ಯಾತ ನಟ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುಟುಂಬದಲ್ಲಿ ಇತ್ತೀಚೆಗೆ ವಿವಾಹ ಸಂಭ್ರಮ ಕಳೆಗಟ್ಟಿತ್ತು. ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ವಿದೇಶದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತೀರ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಅದ್ದೂರಿ ಮದುವೆ ನೆರವೇರಿತ್ತು. ಈ ಮದುವೆ ಬಗ್ಗೆ ಮೇಘನಾ ರಾಜ್ ಮಾತನಾಡಿದ್ದಾರೆ.

ಈ ಅಪರೂಪದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಧರ್ಮಪತ್ನಿ ಪ್ರೇರಣಾ ವಿದೇಶಕ್ಕೆ ತೆರಳಿದ್ದರು. ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ, ಈ ಶುಭ ಕಾರ್ಯಕ್ರಮದಲ್ಲಿ ನಟಿ ಮೇಘನಾ ರಾಜ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ಸರ್ಜಾ ಕುಟುಂಬ ಹಾಗೂ ಅಭಿಮಾನಿ ವಲಯದಲ್ಲಿ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಕಾರಣವಾಗಿತ್ತು.

ಮೇಘನಾ ರಾಜ್ ಅವರು ಈ ಮದುವೆಗೆ ಏತಕ್ಕಾಗಿ ತೆರಳಲಿಲ್ಲ ಎಂಬ ಪ್ರಶ್ನೆಗೆ ಸ್ವತಃ ಅವರೇ ಉತ್ತರಿಸುವ ಮೂಲಕ ಬಿಸಿಬಿಸಿ ಚರ್ಚೆಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಆ ಮದುವೆಗೆ ಆಹ್ವಾನಿಸಲೇ ಇರಲಿಲ್ಲ. ಧ್ರುವ ಹಾಗೂ ಪ್ರೇರಣಾ ಅವರಿಗೆ ಆಹ್ವಾನವಿತ್ತು, ಹೀಗಾಗಿ ಅವರು ಹೋಗಿದ್ದರು’ ಎಂದು ಸತ್ಯವನ್ನು ನೇರವಾಗಿ ಬಿಚ್ಚಿಟ್ಟಿದ್ದಾರೆ.

ಅರ್ಜುನ್ ಸರ್ಜಾ ಕುಟುಂಬದಿಂದ ನಿಮಗೆ ಮದುವೆಯ ಆಹ್ವಾನ ಏತಕ್ಕಾಗಿ ಬರಲಿಲ್ಲ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೂ ಮೇಘನಾ ರಾಜ್ ಖಡಕ್ ಆಗಿಯೇ ಉತ್ತರಿಸಿದ್ದಾರೆ. ‘ನನಗೆ ಏಕೆ ಆಹ್ವಾನ ನೀಡಲಿಲ್ಲ ಎಂಬ ಈ ಪ್ರಶ್ನೆಯನ್ನು ನೀವು ಅವರಿಗೆ ಕೇಳಬೇಕು, ನನಗೆ ಕೇಳಬಾರದು’ ಎಂದು ಹೇಳುವ ಮೂಲಕ ಸಾಕಷ್ಟು ಪ್ರಶ್ನೆಗಳು ಏಳುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ಜನ್ಮದಿನಕ್ಕೆ ಭಾವುಕ ಪೋಸ್ಟ್ ಹಾಕಿದ ಮೇಘನಾ ರಾಜ್

ಇನ್ನು ನಟಿ ಮೇಘನಾ ರಾಜ್ ಪ್ರಸ್ತುತ ತಮ್ಮ ಸಿನಿಮಾಗಳಲ್ಲಿ ಬ್ಯಸಿಯಾಗಿದ್ದು, ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಅವರು ಇತ್ತೀಚೆಗೆ ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಮೇಲೆ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಗಳಿವೆ. ತಮ್ಮ ವೃತ್ತಿಜೀವನದತ್ತ ಗಮನಹರಿಸಿರುವ ಮೇಘನಾ, ಸಾಲು ಸಾಲು ಸಿನಿಮಾಗಳ ಮೂಲಕ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲು ತಯಾರಾಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More