‘200 ನಟಿಯರ ಜತೆ ನಟಿಸಿದ್ದೇನೆ, ಒಬ್ಬರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರಾ ಕೇಳಿ’; ನರೇಶ್ ಚಾಲೆಂಜ್

ಪವಿತ್ರಾ ಲೋಕೇಶ್ ಅವರು ಎಂಟ್ರಿ ಕೊಟ್ಟಿದ್ದಕ್ಕೆ ಮೂರನೇ ಪತ್ನಿಗೆ ನರೇಶ್ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನರೇಶ್ ಮಾತನಾಡಿದ್ದಾರೆ.

‘200 ನಟಿಯರ ಜತೆ ನಟಿಸಿದ್ದೇನೆ, ಒಬ್ಬರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರಾ ಕೇಳಿ’; ನರೇಶ್ ಚಾಲೆಂಜ್
ಪವಿತ್ರಾ-ನರೇಶ್
Updated By: ರಾಜೇಶ್ ದುಗ್ಗುಮನೆ

Updated on: Jun 30, 2022 | 6:55 PM

ನಟ ನರೇಶ್ (Naresh) ಅವರು ಹೆಣ್ಣುಬಾಕ ಎನ್ನುವ ಶಬ್ದವನ್ನು ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಬಳಕೆ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನರೇಶ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಟಿವಿ9 ಕನ್ನಡದ ಜತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ ಅವರು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಯಾರಿಗೂ ಕಿರುಕುಳ ನೀಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಪವಿತ್ರಾ ಲೋಕೇಶ್ ಹಾಗೂ ತಮ್ಮ ನಡುವೆ ಇರುವ ಸಂಬಂಧ ಎಂತಹದ್ದು ಎಂಬುದನ್ನು ಅವರು ವಿವರಿಸಿದ್ದಾರೆ.

ನನ್ನದು ಕ್ಲೀನ್ ಹ್ಯಾಂಡ್

ನರೇಶ್ ಅನೇಕರ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ರಮ್ಯಾ ರಘುಪತಿ ಅವರೇ ಆರೋಪ ಮಾಡಿದ್ದರು. ಈ ಬಗ್ಗೆ ನರೇಶ್ ಸ್ಪಷ್ಟನೆ ನೀಡಿದ್ದಾರೆ. ‘ನಾನು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. 200ಕ್ಕೂ ಅಧಿಕ ನಟಿಯರ ಜತೆ ತೆರೆ ಹಂಚಿಕೊಂಡಿದ್ದೇನೆ. ಅವರಲ್ಲಿ ಒಬ್ಬರು ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳುತ್ತಾರಾ? ಅವರಲ್ಲಿ ಯಾರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರಾ ಕೇಳಿ?’ ಎಂದು ನರೇಶ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ
‘ನಮ್ಮಿಬ್ಬರ ನಡುವೆ ಗೆಳೆತನ ಇರುವುದು ನಿಜ’; ಪವಿತ್ರಾ ಲೋಕೇಶ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ನರೇಶ್​
‘ನನಗೂ-ನರೇಶ್​​ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
Pavitra Lokesh: ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ನರೇಶ್​ 3ನೇ ಪತ್ನಿ ರಮ್ಯಾ ರಘುಪತಿ ಮೊದಲ ಪ್ರತಿಕ್ರಿಯೆ
Pavitra Lokesh: ಸೈಬರ್​ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್​; ಗಾಸಿಪ್​ ಹಬ್ಬಿಸಿದವರ ವಿರುದ್ಧ ಕಾನೂನು ಸಮರ

ನಾನು 8 ವರ್ಷದ ಹಿಂದೆಯೇ ರಮ್ಯಾನ ಬಿಟ್ಟಿದ್ದೇನೆ

ಪವಿತ್ರಾ ಲೋಕೇಶ್ ಅವರು ಎಂಟ್ರಿ ಕೊಟ್ಟಿದ್ದಕ್ಕೆ ಮೂರನೇ ಪತ್ನಿಗೆ ನರೇಶ್ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನರೇಶ್ ಮಾತನಾಡಿದ್ದಾರೆ. ‘ನಾನು ರಮ್ಯಾ ರಘುಪತಿ ಅವರನ್ನು ಬಿಟ್ಟಿದ್ದು 8 ವರ್ಷಗಳ ಹಿಂದೆ. ಪವಿತ್ರಾ ಲೋಕೇಶ್ ಭೇಟಿ ಆಗಿದ್ದು 4 ವರ್ಷಗಳ ಹಿಂದೆ. ನಮ್ಮ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ರಮ್ಯಾ ರಘುಪತಿ ಬೇರೆಯವರ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ. ನಾನು  ಆ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನನಗೆ ಇಷ್ಟವಾಗುವುದಿಲ್ಲ’ ಎಂದಿದ್ದಾರೆ ನರೇಶ್.

ಐದು ಹಕ್ಕಿ ಹೊಡೆಯುವ ಪ್ಲ್ಯಾನ್

‘ಒಂದೇ ಏಟಿಗೆ ಐದು ಹಕ್ಕಿ ಹೊಡೆಯುವ ಪ್ಲ್ಯಾನ್​ ರಮ್ಯಾ ರಘುಪತಿ ರೂಪಿಸಿದ್ದಾಳೆ. ಅವಳು ನೋಡೋಕೆ ಸರಿ ಇದ್ದ ಹಾಗೆ ಕಾಣುತ್ತಾಳೆ. ಆದರೆ, ಅವಳಿಗೆ ಮಾನಸಿಕವಾಗಿ ತೊಂದರೆ ಇದೆ. ಐದು ವರ್ಷದ ಹಿಂದೆ ಅವಳು ಮನೋ ವೈದ್ಯರ ಬಳಿ ತೆರಳಿದ್ದಳು. ಅವಳು ಸಾಲ ಮಾಡಿಕೊಂಡಿದ್ದಾಳೆ. ಈಗ ಅದು ನನ್ನ ತಲೆಯಮೇಲೆ ಬಂದು ಕೂತಿದೆ. ಇದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಹಣ ಪಡೆದುಕೊಳ್ಳುವುದೇ ಆಕೆಗೆ ಗೀಳಾಗಿ ಮಾರ್ಪಟ್ಟಿದೆ’ ಎಂಬುದು ನರೇಶ್ ಮಾತು.

ಇದನ್ನೂ ಓದಿ: ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು

Pavitra Lokesh: ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ನರೇಶ್​ 3ನೇ ಪತ್ನಿ ರಮ್ಯಾ ರಘುಪತಿ ಮೊದಲ ಪ್ರತಿಕ್ರಿಯೆ

 

 

Published On - 5:26 pm, Thu, 30 June 22