ದರ್ಶನ್ ಜೈಲುವಾಸ ಮುಂದುವರಿಯಲು ಪೊಲೀಸರು ಕೋರ್ಟ್ಗೆ ನೀಡಿದ ಮುಖ್ಯ ಕಾರಣಗಳು ಇಲ್ಲಿವೆ..
ನಟ ದರ್ಶನ್ ಹಾಗೂ ಗ್ಯಾಂಗ್ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಎಲ್ಲ ಪ್ರಮುಖ ಆರೋಪಿಗಳಿಗೆ ಜೈಲು ವಾಸ ಮುಂದುವರಿದಿದೆ. ಆಗಸ್ಟ್ 14ರವರೆಗೆ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ನೀಡಿದ ಮುಖ್ಯ ಕಾರಣಗಳ ಪಟ್ಟಿ ಇಲ್ಲಿದೆ.
ಕೊಲೆ ಆರೋಪಿ ಆಗಿರುವ ದರ್ಶನ್ ಇನ್ನಷ್ಟು ದಿನಗಳ ಕಾಲ ಜೈಲಿನಲ್ಲಿ ದಿನ ಕಳೆಯುವುದು ಅನಿವಾರ್ಯ ಆಗಿದೆ. ದರ್ಶನ್ ಮಾತ್ರವಲ್ಲದೇ ಅವರ ಸ್ನೇಹಿತೆ ಪವಿತ್ರಾ ಗೌಡ ಕೂಡ ಈ ಕೇಸ್ನಲ್ಲಿ ಆರೋಪ ಎದುರಿಸುತ್ತಿದ್ದು, ಅವರ ಜೊತೆ ಒಟ್ಟು 17 ಮಂದಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ. ಆ.14ರ ತನಕ ಇವರೆಲ್ಲರೂ ಜೈಲಿನಲ್ಲೇ ಇರಬೇಕಿದೆ. ಇದು ಹೈ ಪ್ರೊಫೈಲ್ ಕೇಸ್. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿರುವ ಕಾರಣದಿಂದ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟವಾಗಿದೆ. ಯಾಕೆ ಜಾಮೀನು ನೀಡಬಾರದು ಎಂಬುದಕ್ಕೆ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ಕಾರಣಗಳು ಹೀಗಿವೆ ನೋಡಿ..
- 1. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಡೆಂಜರ್.
- 2. ಸಾಕ್ಷಿದಾರರು ಆರೋಪಿಗಳ ಟಿಪಿ ಪೆರೇಡ್ ತಡೆಯುವ ಸಾಧ್ಯತೆ.
- 3. ಗುರುತು ಹಚ್ಚದಂತೆ ತಡೆದು ಬೆದರಿಕೆ ಸಾಧ್ಯತೆ.
- 4. ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ವೇಳೆ ಎಲ್ಲಾ ಆರೋಪಿಗಳ ಪಾತ್ರ ಧೃಢ.
- 5. ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷಿ ಪರಿಶೀಲನೆ ನಡೆಯುತ್ತಿದೆ.
- 6. ತಜ್ಞರ ಪರಿಶೀಲನೆಗೆ ಕಳುಹಿಸಿದ್ದು ವರದಿ ಬರಬೇಕು.
- 7. ಸೀಜ್ ಆಗಿರುವ ಸಿಡಿಆರ್ ಡಿವಿಆರ್ ಡಾಟಾ ರಿಟ್ರಿವ್ ನಡೆಯುತ್ತಿದೆ.
- 8. ಡಾಟಾ ಪಡೆದು ಆರೋಪಿಗಳ ವಿಚಾರಣೆ ಬಾಕಿ.
- 9. ನೇರವಾಗಿ ಭಾಗಿಯಾದ ಆರೋಪಿಗಳ ಸಾಕ್ಷಿ ಸಂಗ್ರಹ ಬಾಕಿ.
- 10. ಕೃತ್ಯದ ಮುಂಚೆ, ಬಳಿಕ ಅನೇಕರ ಸಂಪರ್ಕ ಇನ್ನೂ ಲಭ್ಯವಿದೆ.
- 11. ಇನ್ನೂ ಅನೇಕ ಸಾಕ್ಷಿ ಲಭ್ಯವಿದ್ದು 164 ಹೇಳಿಕೆ ದಾಖಲಿಸಬೇಕಿದೆ.
- 12. ಆರೋಪಿಗಳು ಪ್ರಭಾವಿಗಳು, ಹಣಬಲ & ಅಭಿಮಾನಿ ಬಳಗ ಹೊಂದಿದ್ದಾರೆ.
- 13. ಜಾಮೀನು ಸಿಕ್ಕರೆ ಅಭಿಮಾನಿಗಳನ್ನು ಬಳಸಿ ಸಾಕ್ಷಿ ನಾಶ ಸಾಧ್ಯತೆ.
- 14. ಎಫ್ಎಸ್ಎಲ್ ತಜ್ಞರ ವರದಿ ಬರಬೇಕಿದೆ.
- 15. ಕೃತ್ಯಕ್ಕೆ ಬಳಸಿದ ವಾಹನದಲ್ಲಿ ಫಿಂಗರ್ ಪ್ರಿಂಟ್ ಲಭ್ಯವಾಗಿದೆ. ರಿಕವರಿ ಬಾಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Thu, 1 August 24