Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಪಲ್​ ಆಗಿ ಮದುವೆ ಆಗಲಿದ್ದಾರಾ ಪೂಜಾ ಗಾಂಧಿ? ‘ಮುಂಗಾರು ಮಳೆ’ ನಟಿಗೆ ಕಂಕಣ ಭಾಗ್ಯ

ಸ್ಯಾಂಡಲ್​ವುಡ್​ನ ಜನಪ್ರಿಯ ನಟಿ ಪೂಜಾ ಗಾಂಧಿ ಅವರ ಮದುವೆ ಬಗ್ಗೆ ಸುದ್ದಿ ಹಬ್ಬಿದೆ. ಉದ್ಯಮಿಯೊಬ್ಬರ ಜೊತೆ ಅವರು ವೈವಾಹಿಕ ಜೀವನ ಆರಂಭಿಸಲಿದ್ದಾರೆ. ನ.29ರಂದು ಅವರು ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ಮದುವೆ ಆಗಲಿದ್ದಾರೆ. ಪೂಜಾ ಮತ್ತು ವಿಜಯ್​ ಪರಸ್ಪರ ಪ್ರೀತಿಸಿ ವಿವಾಹ ಆಗುತ್ತಿದ್ದಾರೆ ಎಂಬ ಮಾಹಿತಿ ಇದೆ.

ಸಿಂಪಲ್​ ಆಗಿ ಮದುವೆ ಆಗಲಿದ್ದಾರಾ ಪೂಜಾ ಗಾಂಧಿ? ‘ಮುಂಗಾರು ಮಳೆ’ ನಟಿಗೆ ಕಂಕಣ ಭಾಗ್ಯ
ಪೂಜಾ ಗಾಂಧಿ
Follow us
Mangala RR
| Updated By: ಮದನ್​ ಕುಮಾರ್​

Updated on: Nov 27, 2023 | 9:24 PM

ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ (Pooja Gandhi) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಲಿದೆ. ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನವೆಂಬರ್​ 29ರಂದು ಸರಳವಾಗಿ ಮದುವೆ (Pooja Gandhi Marriage) ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅವರಿನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ (Mantra Mangalya) ಪದ್ಧತಿ ಮೂಲಕ ಪೂಜಾ ಗಾಂಧಿ ಅವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ.

ಪೂಜಾ ಗಾಂಧಿ ಮದುವೆ ಆಗುವ ಹುಡುಗ ಯಾರು?

ಉದ್ಯಮಿಯೊಬ್ಬರ ಜೊತೆ ನಟಿ ಪೂಜಾ ಗಾಂಧಿ ಮದುವೆ ನಡೆಯಲಿದೆ. ಬೆಂಗಳೂರಿನಲ್ಲಿ ಲಾಜಿಸ್ಟಿಕ್​ ಕಂಪನಿ ಹೊಂದಿರುವ ವಿಜಯ್​ ಎಂಬುವವರ ಜೊತೆ ಅವರು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ವಿಜಯ್​ ಮತ್ತು ಪೂಜಾ ಗಾಂಧಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಅವರಿಬ್ಬರೂ ಮದುವೆ ಆಗುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಕನ್ನಡಿಗರೂ ಅಭಿಮಾನ ಪಡುವಂತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ

ಕನ್ನಡ ಕಲಿಸಿದ ಹುಡುಗ

ನಟಿ ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದವರು. ಅವರ ಮಾತೃಭಾಷೆ ಹಿಂದಿ. ಆದರೆ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕನ್ನಡ ಭಾಷೆ ಕಲಿಯುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಇರುವ ಪರಭಾಷಿಕರೂ ಕನ್ನಡ ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡಲು ಆರಂಭಿಸಿದ್ದಾರೆ. ಮದುವೆ ಆಗಲಿರುವ ವಿಜಯ್​ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಪೂಜಾ ಗಾಂಧಿ ಅವರು ಕರ್ನಾಟಕದ ಸೊಸೆ ಆಗುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಪೂಜಾ ಗಾಂಧಿ; ಇಲ್ಲಿದೆ ವಿಡಿಯೋ

ಕನ್ನಡ ಚಿತ್ರರಂಗದಲ್ಲಿ ಪೂಜಾ ಗಾಂಧಿ ನಟಿಸಿದ ಮೊದಲ ಸಿನಿಮಾ ‘ಮುಂಗಾರು ಮಳೆ’ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಗಣೇಶ್​ ಜೊತೆ ತೆರೆಹಂಚಿಕೊಂಡಿದ್ದ ಪೂಜಾ ಗಾಂಧಿ ಅವರು ರಾತ್ರೋರಾತ್ರಿ ಸ್ಟಾರ್​ ನಟಿಯಾದರು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದವು. ಪುನೀತ್​ ರಾಜ್​ಕುಮಾರ್​ ಅವರಂತಹ ಸ್ಟಾರ್​ ಕಲಾವಿದರ ಜೊತೆ ನಟಿಸಿ ಇನ್ನಷ್ಟು ಜನಪ್ರಿಯತೆ ಪಡೆದರು. ವೈಯಕ್ತಿಕ ಬದುಕಿನಲ್ಲಿ ಪೂಜಾ ಗಾಂಧಿ ಅವರು ಕೆಲವು ಏಳು-ಬೀಳುಗಳನ್ನು ಕಂಡಿದ್ದಾರೆ. 2012ರಲ್ಲಿ ಅವರ ನಿಶ್ಚಿತಾರ್ಥ ನಡೆದಿತ್ತು. ಉದ್ಯಮಿ ಆನಂದ್​ ಗೌಡ ಜೊತೆ ಅವರು ಮದುವೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಲೂಚ್ ದಂಗೆಕೋರರು ಪಾಕ್ ರೈಲನ್ನು ಹೈಜಾಕ್ ಮಾಡಿದ್ದು ಹೇಗೆಂದು ನೋಡಿ
ಬಲೂಚ್ ದಂಗೆಕೋರರು ಪಾಕ್ ರೈಲನ್ನು ಹೈಜಾಕ್ ಮಾಡಿದ್ದು ಹೇಗೆಂದು ನೋಡಿ
ಸಿಎಂ ಅಧಿಕಾರ ಹಂಚಿಕೆ: ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿ ಸಿದ್ದರಾಮಯ್ಯ ಮಾತು
ಸಿಎಂ ಅಧಿಕಾರ ಹಂಚಿಕೆ: ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿ ಸಿದ್ದರಾಮಯ್ಯ ಮಾತು
ಗೃಹ ಸಚಿವ ಪರಮೇಶ್ವರ್ ಸಮಜಾಯಿಷಿ ನೀಡುವ ಬದಲು ಖಡಕ್ ಕ್ರಮ ಜರುಗಿಸುವ ಸಮಯ
ಗೃಹ ಸಚಿವ ಪರಮೇಶ್ವರ್ ಸಮಜಾಯಿಷಿ ನೀಡುವ ಬದಲು ಖಡಕ್ ಕ್ರಮ ಜರುಗಿಸುವ ಸಮಯ
ಮಹಾರಾಷ್ಟ್ರದಲ್ಲಿ ಲಾಡ್ಲೀ ಬಹೆನಾ ಸ್ಕೀಮ್ ಬಂದ್ ಆಗಿದೆ: ಹೆಬ್ಬಾಳ್ಕರ್
ಮಹಾರಾಷ್ಟ್ರದಲ್ಲಿ ಲಾಡ್ಲೀ ಬಹೆನಾ ಸ್ಕೀಮ್ ಬಂದ್ ಆಗಿದೆ: ಹೆಬ್ಬಾಳ್ಕರ್
ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ವಿಪಕ್ಷ ನಾಯಕರು
ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ವಿಪಕ್ಷ ನಾಯಕರು
ಬಂಡೀಪುರ ಸಫಾರಿ: ಪ್ರವಾಸಿಗರ ಕಣ್ಣಿಗೆ ಬಿತ್ತು ಹುಲಿ ಮರಿ ತುಂಟಾಟದ ದೃಶ್ಯ
ಬಂಡೀಪುರ ಸಫಾರಿ: ಪ್ರವಾಸಿಗರ ಕಣ್ಣಿಗೆ ಬಿತ್ತು ಹುಲಿ ಮರಿ ತುಂಟಾಟದ ದೃಶ್ಯ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್​ಗಳದ್ದೇ ದರ್ಬಾರು: ಸಿಟಿ ರವಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್​ಗಳದ್ದೇ ದರ್ಬಾರು: ಸಿಟಿ ರವಿ
ಜೋಷ್ ಹೇಜೆಲ್​ವುಡ್ ಗಾಯಗೊಂಡಿರುವುದು ಬೌಲಿಂಗ್ ವಿಭಾಗಕ್ಕೆ ಭಾರೀ ಪೆಟ್ಟು
ಜೋಷ್ ಹೇಜೆಲ್​ವುಡ್ ಗಾಯಗೊಂಡಿರುವುದು ಬೌಲಿಂಗ್ ವಿಭಾಗಕ್ಕೆ ಭಾರೀ ಪೆಟ್ಟು
ಒಂಬತ್ತು ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ದರ್ಶನ್, ಶೂಟಿಂಗ್ ಎಲ್ಲಿ?
ಒಂಬತ್ತು ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ದರ್ಶನ್, ಶೂಟಿಂಗ್ ಎಲ್ಲಿ?
ತನಿಖಾ ಏಜೆನ್ಸಿಗಳು ಕೇಂದ್ರದ ಅಧೀನದಲ್ಲಿವೆ, ತನಿಖೆ ಮಾಡಿಸಲಿ: ಸೋಮಶೇಖರ್
ತನಿಖಾ ಏಜೆನ್ಸಿಗಳು ಕೇಂದ್ರದ ಅಧೀನದಲ್ಲಿವೆ, ತನಿಖೆ ಮಾಡಿಸಲಿ: ಸೋಮಶೇಖರ್