ಕಲಾವಿದರಾದ ಪೂಜಾ ಗಾಂಧಿ, ಗಣೇಶ್ (Ganesh) ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ವೃತ್ತಿ ಜೀವನವನ್ನೇ ಬದಲಿಸಿದ್ದು ‘ಮುಂಗಾರು ಮಳೆ’ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ನಟಿಸಿದ್ದ ಪೂಜಾ ಗಾಂಧಿ ಅವರು ಈಗ ‘ಮಜಾ ಟಾಕೀಸ್’ ವೇದಿಕೆಗೆ ಬಂದಿದ್ದಾರೆ. ಪೂಜಾ ಗಾಂಧಿ ಅವರು ಈ ವೇಳೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಹೇಳಿದ ಮಾತನ್ನು ಅವರು ಹೇಳಿದ್ದಾರೆ. ಇದನ್ನು ಅವರು ಕಾಂಪ್ಲಿಮೆಂಟ್ ಎಂದು ಕರೆದಿದ್ದಾರೆ.
ಪೂಜಾ ಗಾಂಧಿ ಮೂಲತಃ ಉತ್ತರ ಪ್ರದೇಶದ ಮೀರತ್ನವರು. ಅವರು ನಟಿಸಿದ ಮೊದಲ ಸಿನಿಮಾ ‘ಮುಂಗಾರು ಮಳೆ’. ಈ ಸಿನಿಮಾ 2006ರಲ್ಲಿ ರಿಲೀಸ್ ಆಯಿತು. ನಂದಿನಿ ಹೆಸರಿನ ಪಾತ್ರವನ್ನು ಇದರಲ್ಲಿ ಮಾಡಿದರು. ಈ ಚಿತ್ರದಿಂದ ಅವರ ಬದುಕು ಬದಲಾಯಿತು. ಇತ್ತೀಚೆಗೆ ಪೂಜಾ ಗಾಂಧಿ ಅವರು ಯಾವುದೇ ನಾಯಕಿಯಾಗಿ ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಸಂಸಾರದಲ್ಲಿ ಬ್ಯುಸಿ ಇರೋ ಅವರು, ರಿಯಾಲಿಟಿ ಶೋಗಳಿಗೆ ಅತಿಥಿ ಆಗಿ ಬರುತ್ತಾ ಇರುತ್ತಾರೆ.
‘ಯೋಗರಾಜ್ ಭಟ್ ಹೇಳಿದ ಒಂದು ಕಾಂಪ್ಲಿಮೆಂಟ್ ಈಗಲೂ ನೆನಪಿದೆ. ಫ್ರೇಮ್‌ಗೆ ಹೋರೋಯಿನ್ ಬರೋ ಮೊದಲು ಅವರ ಮೂಗು ಬರುತ್ತದೆ ಎಂದು ಹೇಳಿದ್ದರು. ಆಗ ನಾನು ತೆಳ್ಳಗೆ ಇದ್ದೆ. ಹೀಗಾಗಿ, ಮೂಗು ಎದ್ದು ಕಾಣುತ್ತಿತ್ತು’ ಎಂದು ಪೂಜಾ ಗಾಂಧಿ ಅವರು ಹೇಳಿದ್ದಾರೆ.
‘ಮುಂಗಾರು ಮಳೆ’ ಸಿನಿಮಾದಲ್ಲಿ ಪದ್ಮಜಾ ರಾವ್ ಹಾಗೂ ಸುಧಾ ಬೆಳವಾಡಿ ಅವರು ತಾಯಂದಿರ ಪಾತ್ರ ಮಾಡಿದ್ದರು. ಸುಧಾ ಅವರು ಗಣೇಶ್ ತಾಯಿಯಾಗಿ, ಪದ್ಮಜಾ ಅವರು ಪೂಜಾ ಗಾಂಧಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡರು. ‘ಕನ್ನಡ ಚಿತ್ರರಂಗಕ್ಕೆ ಎರಡು ಮುದ್ದಾದ ತಾಯಂದಿರನ್ನು ಕೊಟ್ಟಿದ್ದು ಮುಂಗಾರು ಮಳೆ’ ಸಿನಿಮಾ ಎಂದು ಸೃಜನ್ ಲೋಕೇಶ್ ಅವರು ಬಾಯ್ತುಂಬ ಹೊಗಳಿದರು.
ಇದನ್ನೂ ಓದಿ: ಮತ್ತದೇ ಶೈಲಿಯಲ್ಲಿ ಮೂಡಿಬಂದ ಯೋಗರಾಜ್ ಭಟ್ ಸಿನಿಮಾ ‘ಮನದ ಕಡಲು’
ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರವೂ ಈ ವೇದಿಕೆ ಮೇಲೆ ಆಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Sat, 29 March 25