ಪೂರ್ಣಚಂದ್ರ, ಸಂಗೀತಾ ನಟನೆಯ ‘ನಿಮಿತ್ತ ಮಾತ್ರ’ ಸಿನಿಮಾ ನೋಡಿ ಜನ ಹೇಳ್ತಿರೋದೇನು?
‘ನಿಮಿತ್ತ ಮಾತ್ರ’ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು, ಸಂಗೀತಾ ರಾಜೀವ್, ಅರವಿಂದ್ ಕುಪ್ಲಿಕರ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಎರಡನೇ ವಾರ ಇನ್ನಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗುತ್ತಿದೆ. ಭಿನ್ನವಾದ ಕಥಾಹಂದರ ಈ ಸಿನಿಮಾದಲ್ಲಿ ಇದೆ. ರೋಷನ್ ಡಿಸೋಜ ಅವರ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರತಿ ಸಿನಿಮಾದಲ್ಲೂ ನಟ ಪೂರ್ಣಚಂದ್ರ ಮೈಸೂರು ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿಭಾಯಿಸುತ್ತಾರೆ. ಈಗ ಅವರು ‘ನಿಮಿತ್ತ ಮಾತ್ರ’ ಸಿನಿಮಾದಲ್ಲಿ ನಟಿಸಿದ್ದು ಫೆಬ್ರವರಿ 14ರಂದು ಬಿಡುಗಡೆ ಆಯಿತು. ಒಂದು ಡಿಫರೆಂಟ್ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಚಿತ್ರ ನೋಡಿದ ಪ್ರೇಕ್ಷಕರು ಮೆಚ್ಚುಗೆ ನೀಡಿರುವುದು ಸಿನಿಮಾ ತಂಡಕ್ಕೆ ಖುಷಿ ನೀಡಿದೆ. ಎಲ್ಲ ವರ್ಗದ ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುದನ್ನು ‘ನಿಮಿತ್ತ ಮಾತ್ರ’ ಚಿತ್ರತಂಡ ಹಂಚಿಕೊಂಡಿದೆ.
ಮಂಗಳೂರಿನಲ್ಲಿ ಒಂದಷ್ಟು ವರ್ಷಗಳ ಹಿಂದೆ ನಡೆದ ಒಂದು ಭಯಾನಕ ಘಟನೆಯ ಕುರಿತು ಈ ‘ನಿಮಿತ್ತ ಮಾತ್ರ’ ಸಿನಿಮಾ ಮೂಡಿಬಂದಿದೆ. ರಹಸ್ಯ ಮತ್ತು ಕ್ರೂರ ಪ್ರಯೋಗಗಳ ಕುರಿತು ಇದರಲ್ಲಿ ತೋರಿಸಲಾಗಿದೆ. ಪ್ರೇಕ್ಷಕರಿಗೆ ಕ್ಲೈಮಾಕ್ಸ್ ತುಂಬ ಇಷ್ಟ ಆಗಿದೆ ಎಂಬುದು ತಂಡಕ್ಕೆ ಸಂತಸ ತಂದಿದೆ. ಟ್ರೇಲರ್ ನೋಡಿದವರು ಕೂಡ ಯೂಟ್ಯೂಬ್ನಲ್ಲಿ ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಈ ರೀತಿಯ ಕಂಟೆಂಟ್ ಇರುವ ಸಿನಿಮಾಗಳು ಹೆಚ್ಚು ಬರಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ.
View this post on Instagram
ರೋಷನ್ ಡಿಸೋಜ ಅವರು ‘ನಿಮಿತ್ತ ಮಾತ್ರ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ಸಿನಿಮಾ ಪದವಿ ಪಡೆದ ಅವರು ನಿರ್ದೇಶನದ ಜೊತೆಗೆ ಕಥೆ ಬರೆದು ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾದ ಹಿನ್ನಲೆ ಸಂಗೀತಕ್ಕೆ ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸಂಗೀತಾ ರಾಜೀವ್ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಸಂಗೀತ ಸಂಯೋಜನೆ ಕೂಡ ಅವರೇ ಮಾಡಿದ್ದಾರೆ ಎಂಬುದು ವಿಶೇಷ.
ಇದನ್ನೂ ಓದಿ: ದರ್ಶನ್ ಮತ್ತೆ ಮೈಸೂರಿಗೆ ತೆರಳಲು ಅನುಮತಿ ನೀಡಿದ ನ್ಯಾಯಾಲಯ
2ನೇ ವಾರಕ್ಕೆ ಚಿತ್ರಮಂದಿರಗಳನ್ನು ಹೆಚ್ಚಿಸುವುದಾಗಿ ‘ನಿಮಿತ್ತ ಮಾತ್ರ’ ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಅವರು ತನಿಖಾ ಪತ್ರಕರ್ತನ ಪಾತ್ರ ಮಾಡಿದ್ದಾರೆ. ಅರವಿಂದ್ ಕುಪ್ಲಿಕರ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
‘ಸಿನಿಮಾ ಚೆನ್ನಾಗಿದೆ. ಕಲಾವಿದರ ನಟನೆ ಇಷ್ಟ ಆಯಿತು’ ಎಂದು ಹೊಸ ತಲೆಮಾರಿನ ಪ್ರೇಕ್ಷಕರು ಅನಿಸಿಕೆ ತಿಳಿಸಿದ್ದು ‘ನಿಮಿತ್ತ ಮಾತ್ರ’ ಬಳಗದ ಹುಮ್ಮಸ್ಸನ್ನು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.