AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಆಗುವ ಅವಘಡಗಳ​ ಬಗ್ಗೆ ಆತಂಕ ಹೊರಹಾಕಿದ ಪ್ರಕಾಶ್​ ರಾಜ್​

1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ಬಗ್ಗೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬೆಳಕು ಚೆಲ್ಲುತ್ತಿದೆ. ಈ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಕೀಯ ವಲಯದಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಆಗುವ ಅವಘಡಗಳ​ ಬಗ್ಗೆ ಆತಂಕ ಹೊರಹಾಕಿದ ಪ್ರಕಾಶ್​ ರಾಜ್​
ಪ್ರಕಾಶ್ ರಾಜ್
TV9 Web
| Edited By: |

Updated on: Mar 19, 2022 | 6:26 PM

Share

ನಟ ಪ್ರಕಾಶ್ ರಾಜ್​ (Prakash Raj) ಅವರು ನಟನೆ ಜತೆಗೆ ತಮ್ಮ ಚಿಂತನೆಗಳ ವಿಚಾರದ ಮೂಲಕವೂ ಸುದ್ದಿ ಆಗುತ್ತಾರೆ. ಅವರು ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸರ್ಕಾರವನ್ನು ಟೀಕಿಸಲು ಅವರು ಎಂದಿಗೂ ಹಿಂಜರಿದಿಲ್ಲ. ಅವರ ಚಿಂತನೆಗಳನ್ನು ವ್ಯಕ್ತಪಡಿಸಿದ್ದಕ್ಕೆ ಕೆಲವೊಮ್ಮೆ ತೀವ್ರ ಟೀಕೆಗಳಿಗೆ ಗುರಿಯಾದ ಉದಾಹರಣೆ ಇದೆ. ಆದರೆ, ಇದಕ್ಕೆಲ್ಲ ಅವರು ಹೆದರಿಲ್ಲ. ಈಗ ಪ್ರಕಾಶ್​ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ವಿವೇಕ್​ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files) ಬಗ್ಗೆ ಅವರು ಆತಂಕ ಹೊರಹಾಕಿದ್ದಾರೆ. ಈ ಸಿನಿಮಾ ದ್ವೇಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.

1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ಬಗ್ಗೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬೆಳಕು ಚೆಲ್ಲುತ್ತಿದೆ. ಈ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಕೀಯ ವಲಯದಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಮೊದಲಾದ ರಾಜಕೀಯ ಧುರಿಣರು ಈ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಕೆಲವರಿಂದ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

‘ಈ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ತೋರಿಸಲಾಗಿದೆ ನಿಜ. ಆದರೆ, ಅಂದು ನಡೆದ ಈ ಘಟನೆಗೆ ಪರಿಹಾರ ಏನು ಎಂಬುದನ್ನು ಎಲ್ಲಿಯೂ ಹೇಳಿಲ್ಲ’ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ‘ಈಗ ಇರುವ ಕೋಮು ಸೌಹಾರ್ದವನ್ನು ನಾಶ ಮಾಡುವ ಕೆಲಸ ಸಿನಿಮಾದಿಂದ ಆಗುತ್ತಿದೆ’ ಎಂಬ ಮಾತುಗಳು ಕೆಲವರಿಂದ ಕೇಳಿ ಬಂದಿದೆ. ಪ್ರಕಾಶ್​ ರಾಜ್​ ಕೂಡ ಇದೇ ರೀತಿಯ ಆತಂಕ ಹೊರಹಾಕಿದ್ದಾರೆ.

ಚಿತ್ರಮಂದಿರದಲ್ಲಿ  ‘ದಿ ಕಾಶ್ಮೀರ್​ ಫೈಲ್ಸ್​’ ನೋಡಿದ ವ್ಯಕ್ತಿಯೋರ್ವ ಪ್ರಚೋದಾತ್ಮಕವಾಗಿ ಮಾತನಾಡಿದ್ದಾನೆ. ಈ ವಿಡಿಯೋವನ್ನು ಪ್ರಕಾಶ್ ರಾಜ್​ ಹಂಚಿಕೊಂಡಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​, ಇದೊಂದು ಪ್ರೊಪೋಗಾಂಡ ಸಿನಿಮಾ. ಇದು ಗಾಯವನ್ನು ವಾಸಿ ಮಾಡುತ್ತಿದೆಯೇ ಅಥವಾ ದ್ವೇಷದ ಬೀಜ ಬಿತ್ತುವ, ಮತ್ತಷ್ಟು ಗಾಯ ಮಾಡುವ ಕೆಲಸ ಮಾಡುತ್ತಿದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಪ್ರಕಾಶ್​ ರಾಜ್​ ಅವರ ಮಾತನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ನಟನ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೊದಲಿನಂತಿಲ್ಲ ಸಮಂತಾ?; ನಟಿಯ ನಡವಳಿಕೆ ಕಂಡು ನಿರ್ದೇಶಕರ ಬೇಸರ

ಕಪಾಳಮೋಕ್ಷ ಕಾಂಟ್ರವರ್ಸಿ: ಟೀಕೆ ಮಾಡಿದವರಿಗೆ ‘ಜೈ ಭೀಮ್​’ ನಟ ಪ್ರಕಾಶ್​ ರಾಜ್​ ಖಡಕ್​ ತಿರುಗೇಟು

Follow Us
Web contact
Web contact

TV9 Kannada

Read More