Hostel Hudugaru Bekagiddare: ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್​ ಸಾಂಗ್​ ಬಿಡುಗಡೆ; ಇನ್ನಷ್ಟು ಹೆಚ್ಚಾಯ್ತು ನಿರೀಕ್ಷೆ

| Updated By: ಮದನ್​ ಕುಮಾರ್​

Updated on: Jan 05, 2023 | 5:09 PM

Protest Song: ಹಲವು ಕಾರಣಗಳಿಂದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈಗ ಈ ಚಿತ್ರದ ಮೊದಲ ಸಾಂಗ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.

Hostel Hudugaru Bekagiddare: ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್​ ಸಾಂಗ್​ ಬಿಡುಗಡೆ; ಇನ್ನಷ್ಟು ಹೆಚ್ಚಾಯ್ತು ನಿರೀಕ್ಷೆ
ಪ್ರೊಟೆಸ್ಟ್ ಸಾಂಗ್
Follow us on

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಸೆಟ್ಟೇರಿದ ದಿನದಿಂದಲೂ ಗಮನ ಸೆಳೆಯುತ್ತಿದೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಚಿತ್ರದ ಮೊದಲ ಹಾಡು ಈ ಬಿಡುಗಡೆ ಆಗಿದೆ. ಕನ್ನಡ ಚಿತ್ರರಂಗದ (Sandalwood) ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಧ್ರುವ ಸರ್ಜಾ ಅವರು ಈ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಸ್ಟೆಲ್​ನಲ್ಲಿರುವ ಹುಡುಗರ ಕಥೆ-ವ್ಯಥೆ ಇರುವ ‘ಪ್ರೊಟೆಸ್ಟ್​ ಸಾಂಗ್’ಗೆ (Protest Song) ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಯುವ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ.

ಹಲವು ಕಾರಣಗಳಿಂದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಪ್ರೋಮೋಗಳು ಈಗಾಗಲೇ ಧೂಳೆಬ್ಬಿಸಿವೆ. ಈ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಪಾತ್ರವರ್ಗದಲ್ಲಿ ಇದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅತಿಥಿ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ
Rakshit Shetty: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ; ‘ಪರಂವಃ’ ಮೂಲಕ ರಿಲೀಸ್
Ajaneesh B Loknath: ಅಜನೀಶ್​ ಲೋಕನಾಥ್​ಗೆ ಯಾಕಿಂಥ ಸ್ಥಿತಿ; ಇದು ಹಾಸ್ಟೆಲ್​ ಹುಡುಗರ ಕಿತಾಪತಿ
Ramya: ರಮ್ಯಾ ಬೇಕು ಅಂತ ಪ್ರತಿಭಟನೆ, ಗುಡಿ ಕಟ್ಟಿಸಿ ಪೂಜೆ; ‘ಹಾಸ್ಟೆಲ್​ ಹುಡುಗರು’ ಮಾಡಿದ್ದು ಒಂದೆರಡಲ್ಲ
Kichcha Sudeep: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್​ಗೆ ಟ್ವೀಟ್​ ಮಾಡಿ ಶುಭಕೋರಿದ ಕಿಚ್ಚ ಸುದೀಪ್

ಪ್ರೊಟೆಸ್ಟ್​ ಸಾಂಗ್​ನಲ್ಲಿ ಪವನ್​ ಕುಮಾರ್​ ಮತ್ತು ರಿಷಬ್​ ಶೆಟ್ಟಿ ಅವರ ಗೆಸ್ಟ್​ ಅಪಿಯರೆನ್ಸ್ ಇದೆ. ಈ ಹಿಂದೆ ಪುನೀತ್ ರಾಜ್​ಕುಮಾರ್ ಕೂಡ ಈ ಚಿತ್ರತಂಡಕ್ಕೆ ಸಾಥ್​ ನೀಡಿದ್ದರು. ಬಳಿಕ ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಮುಂತಾದವರು ಪ್ರಚಾರದಲ್ಲಿ ಕೈ ಜೋಡಿಸಿದರು.

ಇದನ್ನೂ ಓದಿ: Rakshit Shetty: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ; ‘ಪರಂವಃ’ ಮೂಲಕ ರಿಲೀಸ್

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಈ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ ಅವರು ‘ಪರಂವಃ’ ಸ್ಟುಡಿಯೋಸ್ ಮೂಲಕ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Ramya: ರಮ್ಯಾ ಬೇಕು ಅಂತ ಪ್ರತಿಭಟನೆ, ಗುಡಿ ಕಟ್ಟಿಸಿ ಪೂಜೆ; ‘ಹಾಸ್ಟೆಲ್​ ಹುಡುಗರು’ ಮಾಡಿದ್ದು ಒಂದೆರಡಲ್ಲ

ಪರಂವಃ ಸ್ಟುಡಿಯೋಸ್ ಮೂಲಕ ರಿಲೀಸ್ ಆದ ಬಹುತೇಕ ಎಲ್ಲ ಚಿತ್ರಗಳು ಹೊಸತನವನ್ನು ಹೊಂದಿವೆ. ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ಇಷ್ಟಪಟ್ಟು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ ಎಂದರೆ ಸಿನಿಮಾದಲ್ಲಿ ಏನೋ ವಿಶೇಷತೆ ಇದೆ ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ‘ನಮ್ಮ ತುಂಟಾಟವನ್ನು ಪ್ರಸ್ತುತಪಡಿಸುತ್ತಿರುವ ಪರಂವಃ ಸ್ಟುಡಿಯೋಸ್​ಗೆ ಧನ್ಯವಾದ’ ಎಂದು ‘ಹಾಸ್ಟೆಲ್ ಹುಡುಗರು’ ತಂಡದವರು ಪೋಸ್ಟ್ ಮಾಡಿದ್ದಾರೆ. ಚಿತ್ರದ ರಿಲೀಸ್ ದಿನಾಂಕ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:09 pm, Thu, 5 January 23