Puneeth Rajkumar: ಪುನೀತ್ ರಾಜ್ಕುಮಾರ್ಗೆ ಅವಮಾನ; ಇದನ್ನು ಸಹಿಸಲ್ಲ ಎಂದ ಕನ್ನಡಿಗರು
ಅದ್ಭುತವಾದ ಅಭಿನಯದ ಮೂಲಕ ಮೂಲಕ ಕೋಟ್ಯಂತರ ಜನ ಅಭಿಮಾನಿಗಳನ್ನು ಪುನೀತ್ ಹೊಂದಿದ್ದಾರೆ. ಪುನೀತ್ ಅವರು ಯಾವುದೇ ಪ್ರಚಾರವಿಲ್ಲದೆ ಜನಸೇವೆಯನ್ನು ಮಾಡುವುದರ ಮೂಲಕ ಕನ್ನಡ ನಾಡಿನ ಜನತೆಯ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.c
ಪುನೀತ್ ರಾಜ್‍ಕುಮಾರ್ ಅವರು ನಿಧನ ಹೊಂದಿ ಎರಡು ತಿಂಗಳು ಕಳೆಯುತ್ತ ಬಂದಿದೆ. ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ರಸ್ತೆಗಳಿಗೆ ಹಾಗೂ ಪಾರ್ಕ್ಗೆ ಪುನೀತ್ ಹೆಸರನ್ನು ಇಡುವ ಕೆಲಸ ನಡೆದಿದೆ. ಅದೇ ರೀತಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಯವರು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಗುರುವಾರ (ಡಿಸೆಂಬರ್ 23) ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ. ಈ ಮೂಲಕ ನಾಮಫಲಕದಲ್ಲಿ ಬರೆದಿರುವ ಪುನೀತ್ ರಾಜ್‍ಕುಮಾರ್ ರಸ್ತೆಯ ಹೆಸರನ್ನು ಅಳಸಿ ಅವಮಾನ ಎಸಗಿದ್ದಾರೆ. ನಾಮಫಲಕಕ್ಕೆ ಬಿಳಿ ಬಣ್ಣ ಹಚ್ಚಿ ಅವಮಾನ ಮಾಡಿರುವವರ ವಿರುದ್ಧ ಕನ್ನಡಪರ ಸಂಘಟನೆಗಳು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದ್ಭುತವಾದ ಅಭಿನಯದ ಮೂಲಕ ಮೂಲಕ ಕೋಟ್ಯಂತರ ಜನ ಅಭಿಮಾನಿಗಳನ್ನು ಪುನೀತ್ ಹೊಂದಿದ್ದಾರೆ. ಪುನೀತ್ ಅವರು ಯಾವುದೇ ಪ್ರಚಾರವಿಲ್ಲದೆ ಜನಸೇವೆಯನ್ನು ಮಾಡುವುದರ ಮೂಲಕ ಕನ್ನಡ ನಾಡಿನ ಜನತೆಯ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ನಾಮ ಫಲಕಕ್ಕೆ ಬಣ್ಣ ಹಚ್ಚಿ ಹೆಸರು ಅಳಿಸಿರುವ ಕಿಡಿಗೇಡಿಗಳ ಬಗ್ಗೆ ರಕ್ಷಣಾ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಡ್ವಾನ್ಸ್ ಹಿಂದುರುಗಿಸಿದ ಅಶ್ವಿನಿ ಪುನೀತ್
ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಏರ್ಪಟ್ಟ ಸಾಕಷ್ಟು ಉದಾಹರಣೆ ಇದೆ. ನಿರ್ಮಾಪಕರು ಸಂಭಾವನೆ ಕೊಟ್ಟಿಲ್ಲ ಎಂದು ದೂರುವ ಅನೇಕ ನಟ/ನಟಿಯರಿದ್ದಾರೆ. ನಿರ್ಮಾಪಕರೂ ಅಷ್ಟೇ, ಹೀರೋ/ಹೀರೋಯಿನ್ಗೆ ಹಣ ಕೊಟ್ಟ ಹೊರತಾಗಿಯೂ ಶೂಟಿಂಗ್ ಬಂದಿಲ್ಲ ಎಂದು ಹೇಳಿಕೊಂಡ ಹಲವಾರು ಪ್ರಕರಣಗಳು ಸಿಗುತ್ತವೆ. ಅಡ್ವಾನ್ಸ್ ಹಣ ಪಡೆದುಕೊಂಡ ನಂತರ ಸಿನಿಮಾ ಕ್ಯಾನ್ಸಲ್ ಆದರೆ, ನಿರ್ಮಾಪಕರಿಗೆ ಹಣ ಹಿಂದಿರುಗಿಸೋಕೆ ಯಾರೂ ಅಷ್ಟು ಸುಲಭವಾಗಿ ಮುಂದೆ ಬರುವುದಿಲ್ಲ. ಆದರೆ, ಪುನೀತ್ ಕುಟುಂಬದವರು ಆ ರೀತಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಪೈಕಿ ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ‘ಜೇಮ್ಸ್’ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಕಿ ಮ್ಯಾನ್’ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಭಜರಂಗಿ 2’ ಚಿತ್ರವನ್ನು ಪುನೀತ್ ರಾಜ್ಕುಮಾರ್ಗೆ ಅರ್ಪಿಸಿದ ಶಿವರಾಜ್ಕುಮಾರ್
Published On - 7:13 pm, Fri, 24 December 21