ಸಂದರ್ಶನಗಳಲ್ಲಿ ಆಡಿದ ಮಾತಿನಿಂದ ಹಿಗ್ಗಾ ಮುಗ್ಗಾ ಟ್ರೋಲ್ ಆದ ಬುಲೆಟ್ ಪ್ರಕಾಶ್ ಮಗ ರಕ್ಷಕ್

ಯೂಟ್ಯೂಬ್ ಚಾನೆಲ್​ಗಳಿಗೆ ರಕ್ಷಕ್ ಸಂದರ್ಶನ ನೀಡುತ್ತಿದ್ದಾರೆ ರಕ್ಷಕ್. ಇವುಗಳ ಪೈಕಿ ಕೆಲವು ಕ್ಲಿಪ್​ಗಳನ್ನು ಕಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಈ ಸಂದರ್ಭದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೋಲ್ ಆಗುತ್ತಿದೆ. ನಟಿಸಿದ್ದು ಕೇವಲ ಒಂದು ಸಿನಿಮಾ ಆದರೂ ಸಾಕಷ್ಟು ಬಿಲ್ಡಪ್ ಕೊಡುತ್ತಿದ್ದಾರೆ.

ಸಂದರ್ಶನಗಳಲ್ಲಿ ಆಡಿದ ಮಾತಿನಿಂದ ಹಿಗ್ಗಾ ಮುಗ್ಗಾ ಟ್ರೋಲ್ ಆದ ಬುಲೆಟ್ ಪ್ರಕಾಶ್ ಮಗ ರಕ್ಷಕ್
ರಕ್ಷಕ್

Updated on: Feb 12, 2024 | 8:47 AM

ಬುಲೆಟ್ ಪ್ರಕಾಶ್ (Bullet Prakash) ಮಗ ರಕ್ಷಕ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿದ್ದರು. ಅವರು ಕೇವಲ ಒಂದೇ ತಿಂಗಳಿಗೆ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಬಿಗ್ ಬಾಸ್ ಮುಗಿದು ಎರಡು ವಾರ ಕಳೆದಿದೆ. ಅವರ ಎಲಿಮಿನೇಷನ್ ನಡೆದು ಅದೆಷ್ಟೋ ವಾರಗಳು ಕಳೆದು ಹೋಗಿವೆ. ಆದಾಗ್ಯೂ ರಕ್ಷಕ್​ಗೆ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಸಂದರ್ಶನಗಳಲ್ಲಿ ಈಗಲೂ ಆ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಸಂದರ್ಶನ ನೀಡುವ ಕೆಲಸವನ್ನು ಅವರು ಮುಂದುವರಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್​ಗಳ ಮೂಲಕ ಸಂದರ್ಶನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ರೀತಿಯ ಯೂಟ್ಯೂಬ್ ಚಾನೆಲ್​ಗಳಿಗೆ ರಕ್ಷಕ್ ಸಂದರ್ಶನ ನೀಡುತ್ತಿದ್ದಾರೆ. ಇವುಗಳ ಪೈಕಿ ಕೆಲವು ಕ್ಲಿಪ್​ಗಳನ್ನು ಕಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಈ ಸಂದರ್ಭದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಸಂದರ್ಶನ ಒಂದರಲ್ಲಿ ರಕ್ಷಕ್ ಅವರು 16ನೇ ವಯಸ್ಸಿಗೆ 6 ಪ್ಯಾಕ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು. ಇದನ್ನು ಕೆಲವರು ಟೀಕಿಸಿದ್ದಾರೆ. ‘ಬಿಗ್ ಬಾಸ್ ಒಟಿಟಿ’ ಸೀಸನ್​ಗೆ ಬಂದ ನವಾಜ್ ಹಾಗೂ ರೀಲ್ಸ್​ಗಳ ಮೂಲಕ ಫೇಮಸ್ ಆದ ಕಾಫಿ ನಾಡ ಚಂದು ಅವರು ಹೇಳೋ ‘ಅಣ್ಣಾ..’ ಎಂಬ ಡೈಲಾಗ್​ಗಳನ್ನು ರಕ್ಷಕ್ ಡೈಲಾಗ್​ಗಳ ಮುಂದೆ ಸೇರಿಸಲಾಗಿದೆ.

ವೈರಲ್ ವೊಡಿಯೋಗಳು..

ರಕ್ಷಕ್ ಅವರು ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ್ದರು. ಥಿಯೇಟರ್​ಗೆ ಹೋದಾಗ ಅನೇಕರು ರಕ್ಷಕ್​ಗೋಸ್ಕರ ಸಿನಿಮಾ ವೀಕ್ಷಣೆ ಮಾಡಿದ್ದರಂತೆ. ‘ಸಿನಿಮಾದಲ್ಲಿ ಹೀರೋ ಯಾರು ಎಂದು ಕೇಳಿದರು. ಶರಣ್ ಅಂಕಲ್ ಎಂದು ನಾನು ಹೇಳಿದೆ. ಎಲ್ಲರೂ ನನಗೋಸ್ಕರ ಸಿನಿಮಾ ನೋಡೋಕೆ ಬಂದಿದ್ದರು’ ಎಂದಿದ್ದಾರೆ ರಕ್ಷಕ್. ಈ ವಿಡಿಯೋ ಕೂಡ ಟ್ರೋಲ್ ಆಗುತ್ತಿದೆ.

ಇದನ್ನೂ ಓದಿ: BBK 10: ‘ಬಿಗ್ ಬಾಸ್ ಕನ್ನಡ’ ಫಿನಾಲೆಗೆ ಸಿಕ್ಕ ಟಿಆರ್​ಪಿ ಎಷ್ಟು? ಇಲ್ಲಿದೆ ಸಂಪೂರ್ಣ

ಬಿಗ್ ಬಾಸ್ ಶೋ​ ಬಗ್ಗೆ ನೆಗೆಟಿವ್ ಟಾಕ್ ಮಾಡುತ್ತಿದ್ದಾರೆ ರಕ್ಷಕ್.  ‘ಬಿಗ್ ಬಾಸ್’ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಕ್​ಗೆ ಈ ಬಗ್ಗೆ ಕಿವಿ ಮಾತು ಹೇಳಿದ್ದರು. ಆದರೂ ಅವರು ಬದಲಾಗಿಲ್ಲ. ರಕ್ಷಕ್ ಅವರು ಸಂದರ್ಶನ ನೀಡುತ್ತಾ ಟ್ರೋಲ್ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ