AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?

Rangitharanga Movie: ಕನ್ನಡ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’. ಈ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಯ್ತು. ಸಿನಿಮಾ ಅನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದರು, ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. ಸಾಯಿಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅಸಲಿಗೆ ಈ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಬೇಕಿತ್ತಂತೆ. ಆದರೆ ನಟಿಸಲಿಲ್ಲ ಏಕೆ?

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?
Rangitharanga
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 03, 2025 | 3:26 PM

Share

2015ರಲ್ಲಿ ಬಿಡುಗಡೆ ಕಂಡಿದ್ದ ‘ರಂಗಿ ತರಂಗ’ ಇಂದು (ಜುಲೈ 4) ರೀ-ರಿಲೀಸ್ ಆಗಿದೆ. ಈ ಚಿತ್ರವನ್ನು ಥಿಯೇಟರ್​ನಲ್ಲಿ ಮಿಸ್​​ ಮಾಡಿಕೊಂಡವರು ಥಿಯೇಟರ್​ನಲ್ಲಿಯೇ ನೋಡುವ ಅವಕಾವನ್ನು ಕಲ್ಪಿಸಲಾಗಿದೆ ಎಂಬುದು ವಿಶೇಷ. ‘ರಂಗಿ ತರಂಗ’ ಸಿನಿಮಾಗೆ ನಿರೂಪ್ ಭಂಡಾರಿ ಹೀರೋ ಆದರೆ, ಅವರ ಸಹೋದರ ಅನುಪ್ ಭಂಡಾರಿ ನಿರ್ದೇಶನ ಇತ್ತು. ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ ಆಗಿ ನಟಿಸಬೇಕಿತ್ತು. ಈ ವಿಚಾರವನ್ನು ಅನುಪ್ ಹೇಳಿಕೊಂಡಿದ್ದಾರೆ.

ಅನುಪ್ ಭಂಡಾರಿ ಅವರು ನಿರ್ದೇಶನದಲ್ಲಿ ಮೊದಲ ಅನುಭವ. ಈ ಸಿನಿಮಾಗೆ ಅವರು ನಿರ್ದೇಶನ ಮತ್ತು ಸಹೋದರ ಎಂದಾಗ ಅಂಜಿಕೆ ಆಯಿತು. ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುಪ್, ‘ಮೊದಲು ಈ ಸಿನಿಮಾಗೆ ನಿರೂಪ್ ಅವರೇ ಹೀರೋ ಆಗಿ ಆಯ್ಕೆ ಆದರು. ಆದರೆ, ನಾನು ನಿರ್ದೇಶನ ತಮ್ಮ ನಟನೆ ಎಂದಾಗ ಯಾರದರೂ ಸಿಗುತ್ತಾರಾ ಎನ್ನುವ ಪ್ರಶ್ನೆ ಮೂಡಿತು. ಆಗ ನಿರೂಪ್ ರಕ್ಷಿತ್ ಶೆಟ್ಟಿ ಬಗ್ಗೆ ಹೇಳಿದ’ ಎಂದಿದ್ದಾರೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್ ಸಿನಿಮಾ

‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮಾಡಿದ್ದಾರೆ. ನಮ್ಮ ರೀತಿಯದ್ದೇ ಆಲೋಚನೆ ಅನಿಸುತ್ತದೆ ಎಂದು ರಕ್ಷಿತ್ ಬಗ್ಗೆ ನಿರೂಪ್ ಹೇಳಿದ. ಆಗ ನಾನು ಅವರನ್ನು ಸಂಪರ್ಕಿಸಿದೆ. ಆ ಸಂದರ್ಭದಲ್ಲಿ ಅವರು ಉಳಿದವರು ಕಂಡಂತೆ ಸಿನಿಮಾ ಮಾಡುತ್ತಿದ್ದರು. ಅದು ಮುಗಿದ ಬಳಿಕವೇ ಈ ಚಿತ್ರವನ್ನು ಅವರು ಮಾಡಬೇಕಿತ್ತು. ಅದಾದ ಮೇಲೂ ಭೇಟಿ ಮಾಡಿದ್ದೆ’ ಎಂದಿದ್ದಾರೆ ಅನುಪ್.

ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಈ ಸಿನಿಮಾ ಮಾಡಲಿಲ್ಲ. ‘ಕಪಾಲಿ ಥಿಯೇಟರ್​ನಲ್ಲಿ ಜನರು ಸಿನಿಮಾ ನೋಡಿ ಚೆನ್ನಾಗಿಲ್ಲ ಎಂದು ಹೇಳುತ್ತಾ ಬರುತ್ತಿದ್ದರು. ಆದರೆ, ರಕ್ಷಿತ್ ಅವರು ಸಿನಿಮಾ ನೋಡಿ ಹೊಗಳಿದ್ದರು’ ಎಂದಿದ್ದಾರೆ ಅನುಪ್. ರಕ್ಷಿತ್ ಅವರ ಜಡ್ಜ್​ಮೆಂಟ್ ಸರಿ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಂದರ್ಭದಲ್ಲಿ ರಿಲೀಸ್ ಆದ ‘ಬಾಹುಬಲಿ’ ಚಿತ್ರಕ್ಕೆ ಈ ಚಿತ್ರವು ಸ್ಪರ್ಧೆ ನೀಡಿತು ಮತ್ತು ಗೆಲುವು ಕಂಡಿತು. ಈ ಚಿತ್ರ ಜುಲೈ 4ರಂದು ಮತ್ತೆ ಥಿಯೇಟರ್​ಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Thu, 3 July 25

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್