ನಟ ರಮೇಶ್ ಅರವಿಂದ್ಗೆ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ
ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಈ ಬಾರಿ ರಮೇಶ್ ಅರವಿಂದ್ಗೆ ನೀಡುವ ಬಗ್ಗೆ ಘೋಷಣೆ ಮಾಡಿದೆ.
ರಮೇಶ್ ಅರವಿಂದ್ (Ramesh Aravind) ಅವರು ನಟನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 35 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಹಲವು ಚಿತ್ರಗಳು ಈಗಲೂ ಗಮನ ಸೆಳೆಯುವಂತಿವೆ. ಸಮಾಜಕ್ಕೆ ಅವರ ಕೊಡಗೆಯನ್ನು ಪರಿಗಣಿಸಿ ಈ ಸಾಲಿನ ‘ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ’ಯನ್ನು ಅವರಿಗೆ ನೀಡಲು ನಿರ್ಧರಿಸಲಾಗಿದೆ.
ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಈ ಬಾರಿ ರಮೇಶ್ ಅರವಿಂದ್ಗೆ ನೀಡುವ ಬಗ್ಗೆ ಘೋಷಣೆ ಮಾಡಿದೆ. ಕಳೆದ 17 ವರ್ಷಗಳಿಂದ ಸಮಾಜದ ವಿವಿಧ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ. ಈ ಬಾರಿ ರಮೇಶ್ ಅರವಿಂದ್ಗೆ ಸಿಕ್ಕಿರುವುದು ಅನೇಕರ ಖುಷಿಗೆ ಕಾರಣವಾಗಿದೆ. ರಮೇಶ್ ಅರವಿಂದ್ ಫ್ಯಾನ್ಸ್ ಈ ಬಗ್ಗೆ ಸಂತಸ ಹೊರಹಾಕಿದ್ದಾರೆ.
ನಟನಾಗಿ ಹಲವು ಸಿನಿಮಾಗಳಲ್ಲಿ ರಮೇಶ್ ಅರವಿಂದ್ ನಟಿಸಿದ್ದಾರೆ. ಇನ್ನು, ಹಲವು ಚಿತ್ರಗಳನ್ನು ನಿರ್ದೇಶನ ಮಾಡಿಯೂ ಭೇಷ್ ಎನಿಸಿಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿ ಆಗಿಯೂ ರಮೇಶ್ ಅರವಿಂದ್ ಗುರುತಿಸಿಕೊಂಡಿದ್ದಾರೆ. ಅಕ್ಟೋಬರ್ 10ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಾಹಿತ್ಯ ಲೋಕಕ್ಕೆ ಶಿವರಾಮ ಕಾರಂತರ ಕೊಡುಗೆ ತುಂಬಾ ದೊಡ್ಡದು. ಹಲವು ದಶಕಗಳ ಕಾಲ ಸಾಹಿತ್ಯ ಲೋಕದಲ್ಲಿ ಅವರು ಶ್ರಮಿಸಿದ್ದಾರೆ. ಹಲವು ಪ್ರಶಸ್ತಿಗಳು ಶಿವರಾಮ ಕಾರಂತರಿಗೆ ಸಿಕ್ಕಿದೆ. ಅಕ್ಟೋಬರ್ 10 ಅವರ ಜನ್ಮದಿನ. ಈ ವಿಶೇಷ ದಿನದಂದೇ ಈ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ನಟ ರಮೇಶ್ ಅರವಿಂದ್ ಹಾಗೂ ರವಿಚಂದ್ರನ್ಗೆ ಸಿಕ್ತು ಗೌರವ ಡಾಕ್ಟರೇಟ್
ಈ ಮೊದಲು ಅನೇಕ ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತಿ ಎಸ್.ಎಲ್. ಭೈರಪ್ಪ, ತೂಗು ಸೇತುವೆ ಹರಿಕಾರ ಗಿರೀಶ್ ಭಾರದ್ವಾಜ್, ಗೀತ ಸಾಹಿತಿ ಜಯಂತ್ ಕಾಯ್ಕಿಣಿ, ಡಾ. ಬಿ.ಎಂ. ಹೆಗ್ಡೆ ಸೇರಿ ಅನೇಕ ಗಣ್ಯರು ಈ ಮೊದಲು ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪಡೆದುಕೊಂಡಿದ್ದರು.
Published On - 3:39 pm, Sat, 24 September 22