ದಿಗ್ಗಜ ರಾಮೋಜಿ ರಾವ್ ನಿರ್ಮಿಸಿದ್ದ ಕನ್ನಡ ಸಿನಿಮಾಗಳು ಇವು

ಆಂಧ್ರದ ದಿಗ್ಗಜ ಉದ್ಯಮಿ ರಾಮೋಜಿ ರಾವ್ ನಿನ್ನೆ (ಜೂನ್ 08) ನಿಧನ ಹೊಂದಿದ್ದಾರೆ. ರಾಮೋಜಿ ರಾವ್ ಕನ್ನಡದ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇಲ್ಲಿದೆ ರಾಮೋಜಿ ರಾವ್ ನಿರ್ಮಿಸಿದ ಕನ್ನಡ ಸಿನಿಮಾಗಳ ಪಟ್ಟಿ.

ದಿಗ್ಗಜ ರಾಮೋಜಿ ರಾವ್ ನಿರ್ಮಿಸಿದ್ದ ಕನ್ನಡ ಸಿನಿಮಾಗಳು ಇವು
Follow us
|

Updated on: Jun 09, 2024 | 10:59 AM

ಯಶಸ್ವಿ ಸಿನಿಮಾ ನಿರ್ಮಾಪಕ, ಮಾಧ್ಯಮ ಲೋಕದ ದಿಗ್ಗಜ, ಕ್ರಿಯಾಶೀಲ ಉದ್ಯಮಿ ರಾಮೋಜಿ ರಾವ್ (Ramoji Rao) ನಿನ್ನೆ ಅಂದರೆ ಜೂನ್ 8ಕ್ಕೆ ನಿಧನ ಹೊಂದಿದ್ದಾರೆ. ತೆಲುಗು ಚಿತ್ರರಂಗದ (Tollywood) ದಿಗ್ಗಜರು ಸೇರಿದಂತೆ ಇತರೆ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ರಾಮೋಜಿ ರಾವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆಂಧ್ರ ಕಂಡ ಅದ್ಭುತ ಉದ್ಯಮಿ ರಾಮೋಜಿ ರಾವ್. ಅವರು ಹಲವಾರು ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲದೆ, ತೆಲುಗು ಚಿತ್ರರಂಗ ಇಂದು ವಿಶ್ವಮಟ್ಟದಲ್ಲಿ ಹೆಸರು ಗಳಿಸಲು ಮೂಲ ಕಾರಣರಲ್ಲಿ ಒಬ್ಬರು ಸಹ ಆಗಿದ್ದಾರೆ ರಾಮೋಜಿ ರಾವ್. ಅಂದಹಾಗೆ ರಾಮೋಜಿ ರಾವ್ ಕೆಲವು ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

ರಾಮೋಜಿ ರಾವ್ ಅವರು 1983 ರಲ್ಲಿ ಉಷಾಕಿರಣ್ ಮೂವೀಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭ ಮಾಡಿದರು. ರಾಮೋಜಿ ರಾವ್ ನಿರ್ಮಿಸಿದ ಮೊದಲ ಸಿನಿಮಾ 1984 ರಲ್ಲಿ ಬಿಡುಗಡೆ ಆದ ‘ಶ್ರೀವಾರಿಕಿ ಪ್ರೇಮಲೇಖ’. ಅದಾದ ಬಳಿಕ ನಾಲ್ಕು ದಶಕಗಳ ಕಾಲ ರಾಮೋಜಿ ರಾವ್ ಸಿನಿಮಾ ನಿರ್ಮಾಣ ಮಾಡುತ್ತಲೇ ಬಂದರು. ಹಲವಾರು ಸೂಪರ್-ಡೂಪರ್ ಹಿಟ್ ತೆಲುಗು ಸಿನಿಮಾಗಳ ನಿರ್ಮಿಸಿದ ರಾಮೋಜಿ ರಾವ್, ಕೆಲವು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

ಕನ್ನಡದಲ್ಲಿ ರಾಮೋಜಿ ರಾವ್ ಅವರು ಮೊದಲಿಗೆ ನಿರ್ಮಿಸಿದ್ದು ಪ್ರಭುದೇವ ಸಹೋದರ ಪ್ರಸಾದ್ ನಾಯಕನಾಗಿ ನಟಿಸಿದ ‘ಚಿತ್ರ’ ಸಿನಿಮಾ. ಈ ಸಿನಿಮಾ ತೆಲುಗಿನ ‘ಚಿತ್ರಂ’ ರೀಮೇಕ್. ತೆಲುಗಿನಲ್ಲಿಯೂ ಸಹ ಉಷಾಕಿರಣ್ ಮೂವೀಸ್​ನಿಂದಲೇ ಈ ಸಿನಿಮಾ ನಿರ್ಮಿಸಲಾಗಿತ್ತು. ತೆಲುಗು, ಕನ್ನಡ ಎರಡರಲ್ಲೂ ಸೂಪರ್ ಹಿಟ್ ಆಯ್ತು ಈ ಸಿನಿಮಾ. ಅದಾದ ಬಳಿಕ 2002 ರಲ್ಲಿ ‘ನಿನಗಾಗಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದರೆ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿ ಇಬ್ಬರೂ ಸ್ಟಾರ್​ಗಳಾದರು.

ಇದನ್ನೂ ಓದಿ:ರಾಮೋಜಿ ರಾವ್ ನಿಧನಕ್ಕೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಸಂತಾಪ

‘ನಿನಗಾಗಿ’ ಸಿನಿಮಾ ಸಹ ಅವರದ್ದೇ ನಿರ್ಮಾಣದ ತೆಲುಗು ಸಿನಿಮಾ ‘ನುವ್ವೆ ಕಾವಾಲಿ’ ರೀಮೇಕ್. ಆ ಸಿನಿಮಾದಲ್ಲಿಯೂ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ರಾಮೋಜಿ ರಾವ್. ಅದರ ಮುಂದಿನ ವರ್ಷವೇ ‘ಆನಂದ’ ಸಿನಿಮಾ ನಿರ್ಮಾಣ ಮಾಡಿದರು. ಇದು ತೆಲುಗಿನ ‘ಆನಂದಂ’ ಸಿನಿಮಾದ ರೀಮೇಕ್ ಆಗಿತ್ತು. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ‘ಆನಂದ’ ಸಿನಿಮಾ ಆಗಿ ನಾಲ್ಕು ವರ್ಷಗಳ ಬಳಿಕ ‘ಸಿಕ್ಸರ್’ ಹೆಸರಿನ ನಿರ್ಮಾಣ ಮಾಡಿದರು. ಪ್ರಜ್ವಲ್ ದೇವರಾಜ್ ಅವರ ಮೊದಲ ಸಿನಿಮಾ ಅದಾಗಿತ್ತು. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ರಾಮೋಜಿ ರಾವ್​​ ನಿರ್ಮಾಣ ಮಾಡಿದ ಏಕೈಕ ಒರಿಜಿನಲ್ ಕನ್ನಡ ಸಿನಿಮಾ ಇದಾಗಿತ್ತು.

2009 ರಲ್ಲಿ ‘ಸವಾರಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾ ಸಹ ತೆಲುಗಿನ ‘ಗಮ್ಯಂ’ ಸಿನಿಮಾ ರೀಮೇಕ್ ಆಗಿತ್ತು. ‘ಸವಾರಿ’ ಬಳಿಕ ಇನ್ಯಾವುದೇ ಕನ್ನಡ ಸಿನಿಮಾವನ್ನು ರಾಮೋಜಿ ರಾವ್ ನಿರ್ಮಾಣ ಮಾಡಲಿಲ್ಲ. ಅಲ್ಲದೆ 2015 ರ ಬಳಿಕ ಯಾವುದೇ ತೆಲುಗು ಸಿನಿಮಾವನ್ನು ಸಹ ನಿರ್ಮಾಣ ಮಾಡಲಿಲ್ಲ ರಾಮೋಜಿ ರಾವ್ ಅವರು. ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿದ್ದಂತೆ ರಾಮೋಜಿ ರಾವ್ ಅವರು ಸಿನಿಮಾ ನಿರ್ಮಾಣ ನಿಲ್ಲಿಸಿ ಬೇರೆ ಉದ್ಯಮಗಳ ಕಡೆಗೆ ಗಮನ ಹರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್