Rashmika Mandanna Birthday: ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನ; ಅವರ ಯಶಸ್ಸಿನ ಗುಟ್ಟಿದು
ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಿಂದ ಯಶಸ್ಸು ಕಂಡ ಅವರು, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಟ್ರೋಲ್ಗಳಿಗೆ ಅವರು ಕಿವಿಗೊಡದಿರುವುದು ಮತ್ತು ಕೆಲಸದ ಬಗ್ಗೆ ಅವರ ಬದ್ಧತೆಯೇ ಅವರ ಯಶಸ್ಸಿನ ಮೂಲ.

ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಎನ್ನುವುದಕ್ಕಿಂತ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಎಂಬುದು ಹೆಚ್ಚು ಸೂಕ್ತ. ಅವರು ಕನ್ನಡ ಚಿತ್ರರಂಗ ತೊರೆದು ಬಹಳ ವರ್ಷಗಳಾಗಿವೆ. ಅವರು ಮತ್ತೆ ಕನ್ನಡಕ್ಕೆ ಮರಳುತ್ತಾರಾ? ಅದು ಸದ್ಯಕ್ಕಂತೂ ಅನುಮಾನವೇ. ಇಲ್ಲಿ ಅವರನ್ನು ಪ್ರೀತಿಸುವಷ್ಟೇ ದ್ವೇಷಿಸುವವರೂ ಇದ್ದಾರೆ. ರಶ್ಮಿಕಾಗೆ ಇಂದು (ಏಪ್ರಿಲ್ 5) ಜನ್ಮದಿನ. ಅವರಿಗೆ 28 ವರ್ಷ ಮುಗಿದು 29 ತುಂಬಿದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ರಶ್ಮಿಕಾ ಅವರು ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಹಾಗಾದರೆ ಅವರ ಯಶಸ್ಸಿನ ಗುಟ್ಟೇನು? ಟ್ರೋಲ್ಗಳಿಗೆ ಕಿವಿ ಕೊಡದೇ ಇರೋದು ಹಾಗೂ ಕೆಲಸದ ಬಗ್ಗೆ ಬದ್ಧತೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’. ಇದು ಅವರ ವೃತ್ತಿ ಜೀವನದ ಮೊದಲ ಚಿತ್ರವೂ ಆಗಿತ್ತು. ಅವರ ಬದುಕನ್ನು ಸಿನಿಮಾ ಇಷ್ಟೊಂದು ಮಟ್ಟಕ್ಕೆ ಬದಲಾಯಿಸುತ್ತದೆ ಎಂದು ಸ್ವತಃ ಅವರೂ ಊಹಿಸಿರಲಿಲ್ಲ. ಆ ಬಳಿಕ ತೆಲುಗಿನಲ್ಲಿ ‘ಚಲೋ’, ‘ಗೀತ ಗೋವಿಂದಂ’ ಮಾಡಿ ಫೇಮಸ್ ಆದರು. ಆ ಬಳಿಕ ಕಾಲಿವುಡ್ ಹಾಗೂ ಬಾಲಿವುಡ್ಗೂ ಅವರಿಗೆ ಟಿಕೆಟ್ ಸಿಕ್ಕವು. ರಶ್ಮಿಕಾ ಬದುಕು ಈಗ ಸಂಪೂರ್ಣ ಬದಲಾಗಿದೆ.
ರಶ್ಮಿಕಾ ಅವರು ಭಾರತ ಚಿತ್ರರಂಗದ ಹಲವು ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರೋದು ಅವರ ವ್ಯಕ್ತಿತ್ವ. ಅವರು ಟ್ರೋಲ್ಗಳಿಗೆ ಕಿವಿ ಕೊಡೋದು ಕಡಿಮೆ. ಆದಷ್ಟು ಪಾಸಿಟಿವಿಟಿ ಹಾಗೂ ಪ್ರೀತಿ ಹರಡಿ ಎಂದು ಕೇಳಿಕೊಳ್ಳುತ್ತಲೇ ಇರುತ್ತಾರೆ. ಯಾರಾದರೂ ಅಭಿಮಾನಿಗಳು ಬಂದು ರಶ್ಮಿಕಾ ಅವರ ಬಳಿ ಸೆಲ್ಫಿ ಕೇಳಿದರೆ ಅದನ್ನು ಅವರು ನಿರಿಕಾರಿಸಿದ್ದೇ ಇಲ್ಲ.
ಇದನ್ನೂ ಓದಿ: ಸಲ್ಮಾನ್ ಖಾನ್-ರಶ್ಮಿಕಾ ನಡುವಿನ 31 ವರ್ಷ ವಯಸ್ಸಿನ ಅಂತರ ಸಮರ್ಥಿಸಿಕೊಂಡ ಅಮೀಶಾ ಪಟೇಲ್
ರಶ್ಮಿಕಾ ಅವರ ಬದ್ಧತೆ ಕೂಡ ಯಶಸ್ಸಿನ ಹಿಂದಿರೋ ಗುಟ್ಟು. ರಶ್ಮಿಕಾ ಕಾರ್ಯಕ್ಷಮತೆ ಬಗ್ಗೆ ಈ ಮೊದಲು ಸಲ್ಮಾನ್ ಖಾನ್ ಅವರು ಮಾತನಾಡಿದ್ದರು. ‘ರಶ್ಮಿಕಾ ಮಂದಣ್ಣ ಒಳ್ಳೆಯ ನಟಿ. ಅವರು ಬೆಳಿಗ್ಗೆ ಸಿಕಂದರ್ ಶೂಟ್ ಮಾಡಿದರೆ ರಾತ್ರಿ ಪುಷ್ಪ 2 ಶೂಟ್ ಮಾಡುತ್ತಿದ್ದರು. ಪ್ರಯಾಣ ಮಾಡುವ ಸಮಯದಲ್ಲಿ ಮಾತ್ರ ಅವರಿಗೆ ನಿದ್ದೆ. ಇದನ್ನು ನಾವು ಅಂದು ಮಾಡಿದ್ದೆವು’ ಎಂದು ಸಲ್ಮಾನ್ ಖಾನ್ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Sat, 5 April 25