Rashmika Mandanna: ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ ಹೇಗಿತ್ತು ನೋಡಿ; ಇಲ್ಲಿದೆ ವಿಡಿಯೋ

ರಶ್ಮಿಕಾ ಮಂದಣ್ಣ ಅವರ ಮೊದಲ ಆಡಿಷನ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಕನ್ನಡದಲ್ಲಿ ಮಾತನಾಡಲು ಹೆಣಗಾಡುತ್ತಿರುವುದು ಕಂಡುಬರುತ್ತದೆ. 'ಕಿರಿಕ್ ಪಾರ್ಟಿ' ಚಿತ್ರಕ್ಕೂ ಮೊದಲು ಅವರು ಇನ್ನೊಂದು ಚಿತ್ರದ ಆಡಿಷನ್ ನೀಡಿದ್ದರು. ಆದರೆ ಆ ಚಿತ್ರ ನಿರ್ಮಾಣವಾಗಲಿಲ್ಲ ಅನ್ನೋದು ಬೇಸರದ ವಿಚಾರ.

Rashmika Mandanna: ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ ಹೇಗಿತ್ತು ನೋಡಿ; ಇಲ್ಲಿದೆ ವಿಡಿಯೋ
ರಶ್ಮಿಕಾ
Updated By: ರಾಜೇಶ್ ದುಗ್ಗುಮನೆ

Updated on: Apr 05, 2025 | 7:53 AM

ರಶ್ಮಿಕಾ ಮಂದಣ್ಣ (Rashmika Mandanna) ಅವರು ಸ್ಟಾರ್ ಹೀರೋಯಿನ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. ತೆಲುಗು ಮಾತ್ರವಲ್ಲ ಬಾಲಿವುಡ್​ನಲ್ಲೂ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ರಶ್ಮಿಕಾ ಅವರ ನಟನೆಯಲ್ಲಿ ಈಗ ಏಳ್ಗೆ ಕಂಡಿದೆ. ಇದಕ್ಕೆ ಅವರು ಹಾಕಿದ ಶ್ರಮ ಕಾರಣ. ಇಂದು ರಶ್ಮಿಕಾಗೆ ಜನ್ಮದಿನ. ಈ ವೇಳೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಇದರಲ್ಲಿ ಅವರು ಕನ್ನಡದಲ್ಲಿ ಮಾತನಾಡಲು ತುಂಬಾನೇ ಕಷ್ಟಪಟ್ಟಿದ್ದರು. ಜನ್ಮದಿನದ ವೇಳೆ ಈ ವಿಡಿಯೋನ ವೈರಲ್ ಮಾಡಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಡಿಗ್ರೀ ಓದುವಾಗಲೇ ‘ಕಿರಿಕ್ ಪಾರ್ಟಿ’ ಆಫರ್ ಬಂತು. ಮಾಡೆಲ್ ಕೂಡ ಆಗಿದ್ದ ಅವರು ಸಾನ್ವಿ ಪಾತ್ರಕ್ಕೆ ಆಯ್ಕೆ ಆದರು. ಇದಕ್ಕೂ ಮೊದಲು ಮತ್ತೊಂದು ಸಿನಿಮಾನ ಅವರು ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಿಲ್ಲ. ಹೀಗಾಗಿ, ‘ಕಿರಿಕ್ ಪಾರ್ಟಿ’ ಸಿನಿಮಾ ಅವರ ಮೊದಲ ಚಿತ್ರ ಆಯಿತು. ಅವರು ಮೊದಲು ನೀಡಿದ ಒಂದು ಆಡಿಷನ್ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಡೈಲಾಗ್​ ಹೇಳಲು ಕಷ್ಟಪಡುತ್ತಿರುವುದು ಕಂಡು ಬಂದಿದೆ. ಅದರಲ್ಲೂ ಕನ್ನಡದಲ್ಲಿ ಮಾತನಾಡಲು ಅವರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಕಾರಣಕ್ಕೆ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಆದಾಗ್ಯೂ ಅವರು ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಅವರೇ ಡಬ್ ಮಾಡಿದ್ದರು.

ಇದನ್ನೂ ಓದಿ
ರಶ್ಮಿಕಾ ಮಂದಣ್ಣ ನಟಿಸಿದ ಸ್ಟಾರ್ ಹೀರೋಗಳ ಪಟ್ಟಿ ಬಹುದೊಡ್ಡದಿದೆ
ಒಮನ್​​ನಲ್ಲಿ ಜಿಮ್ ಟ್ರೇನರ್​ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನ; ಅವರ ಯಶಸ್ಸಿನ ಗುಟ್ಟಿದು
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ

ರಶ್ಮಿಕಾ ಮಂದಣ್ಣ ಅವರು ಕನ್ನಡ ಮಾತನಾಡಲು ಅನೇಕ ಬಾರಿ ಕಷ್ಟಪಟ್ಟಿದ್ದು ಇದೆ. ನನಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂದು ಪರಭಾಷೆಯ ಸಂದರ್ಶನದಲ್ಲಿ ಹೇಳಿ ಟೀಕೆಗೆ ಒಳಗಾಗಿದ್ದೂ ಇದೆ. ಕರ್ನಾಟಕದಲ್ಲಿ ಇದ್ದುಕೊಂಡೇ ಅವರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಅಂದರೆ ಹೇಗೆ ಎಂದು ಅನೇಕರು ಪ್ರಶ್ನೆ ಮಾಡಿದ್ದೂ ಇದೆ. ಆದರೆ, ಇದಕ್ಕೆ ರಶ್ಮಿಕಾ ಮಂದಣ್ಣ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ಒಮನ್​​ನಲ್ಲಿ ಜಿಮ್ ಟ್ರೇನರ್​ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ

ಈಗ ರಶ್ಮಿಕಾ ಹಾಗೂ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದಿಂದ ರಶ್ಮಿಕಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋಕೆ ಸಾಧ್ಯವಾಗಿಲ್ಲ. ಆದಾಗ್ಯೂ ರಶ್ಮಿಕಾ ಖ್ಯಾತಿ ಈ ಚಿತ್ರದಿಂದ ಹೆಚ್ಚಿರೋದಂತೂ ಸತ್ಯ. ಹಲವು ಬಾಲಿವುಡ್​ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.