ರಶ್ಮಿಕಾ ಸಸ್ಯಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಅವರಿಗೆ ಆಗುವುದೇ ಇಲ್ಲ

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಒಮನ್ ಪ್ರವಾಸದ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ವೈರಲ್ ವಿಡಿಯೋದಲ್ಲಿ, ಅವರು ತಮ್ಮ ಶುದ್ಧ ಸಸ್ಯಾಹಾರ ಆಹಾರ ಮತ್ತು ಕೆಲವು ತರಕಾರಿಗಳಿಗೆ ಅಲರ್ಜಿ ಇರುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರು 'ಕುಬೇರ' ಮತ್ತು 'ಗರ್ಲ್‌ಫ್ರೆಂಡ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ .

ರಶ್ಮಿಕಾ ಸಸ್ಯಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಅವರಿಗೆ ಆಗುವುದೇ ಇಲ್ಲ
ರಶ್ಮಿಕಾ
Updated By: ರಾಜೇಶ್ ದುಗ್ಗುಮನೆ

Updated on: Apr 16, 2025 | 7:49 AM

ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಸಿನಿಮಾಗಳು, ಅವರ ಬರ್ತ್​ಡೇ ಹಾಗೂ ಒಮನ್ ಟ್ರಿಪ್. ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಒಮನ್​ಗೆ ತೆರಳಿ ಅಲ್ಲಿ ಸಮಯ ಕಳೆದು ಬಂದಿದ್ದರು. ಆಗ ಅವರ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಕೂಡ ಇದ್ದರಂತೆ. ಈ ಎಲ್ಲ ಕಾರಣದಿಂದ ರಶ್ಮಿಕಾ ಸುದ್ದಿ ಆಗಿದ್ದರು. ರಶ್ಮಿಕಾ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹೇಳಿದ ಮಾತು ಅನೇಕರಿಗೆ ಅಚ್ಚರಿ ಮೂಡಿಸಿದೆ.

ರಶ್ಮಿಕಾ ಅವರು ಫುಡ್ಡಿ. ಅವರಿಗೆ ಆಹಾರದ ಬಗ್ಗೆ ಸಖತ್ ಕ್ರೇಜ್. ಅವರು ಸಮಯ ಸಿಕ್ಕಾಗಲೆಲ್ಲ ವಿವಿಧ ರೀತಿಯ ಊಟ ಟ್ರೈ ಮಾಡುತ್ತಾರೆ. ವಿದೇಶಕ್ಕೆ ಹೋದಾಗ ಅಲ್ಲಿನ ಫುಡ್ ಟ್ರೈ ಮಾಡಿದರೆ, ಊರಿಗೆ ಹೋದಾಗ ಅಮ್ಮ ಮಾಡಿದ ಅಡುಗೆ ಊಟ ಮಾಡುತ್ತಾರೆ. ಹಾಗಾದರೆ ಅವರು ಸಸ್ಯಹಾರಿಯೋ ಅಥವಾ ಮಾಂಸಾಹಾರಿಯೋ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಅವರೇ ಉತ್ತರ ನೀಡಿದ್ದರು.

ಇದನ್ನೂ ಓದಿ
ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; 5 ಕೋಟಿಗೆ ಡಿಮ್ಯಾಂಡ್
ಸೋತು ಸುಣ್ಣವಾದ ‘ಅಪ್ಪು’ ನಿರ್ದೇಶಕನಿಗೆ ವಿಜಯ್ ಅವಕಾಶ ಕೊಟ್ಟಿದ್ದೇಕೆ?
ಮಗನನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗಿ ಟ್ರೋಲ್ ಆದ ನತಾಶಾ
‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?

ರಶ್ಮಿಕಾ ಮಂದಣ್ಣ ಅವರು ಶುದ್ಧ ಸಸ್ಯಾಹಾರಿ. ಅವರು ಮಾಂಸ ಸೇವನೆ ಮಾಡುವುದಿಲ್ಲ. ಇಲ್ಲೊಂದು ಅಚ್ಚರಿಯ ವಿಚಾರ ಇದೆ. ಅವರು ಸಸ್ಯಾಹಾರಿ ಆದರೂ ಅನೇಕ ತರಕಾರಿಗಳು ಅವರಿಗೆ ಇಷ್ಟ ಆಗುವುದೇ ಇಲ್ಲ. ಈ ಬಗ್ಗೆ ರಶ್ಮಿಕಾ ಅವರು ಮಾತನಾಡಿದ್ದರು.

‘ನಾನು ಸಸ್ಯಾಹಾರಿ. ನನಗೆ ಟೊಮ್ಯಾಟೊ, ಆಲೂಗಡ್ಡೆ, ಡೊಳ್ಳು ಮೆಣಸು ಹೀಗೆ ಹಲವು ತರಕಾರಿ ತಿಂದರೆ ಅಲರ್ಜಿ. ತಿನ್ನಲು ಏನು ಉಳಿದುಕೊಂಡಿದೆ ಎಂದು ನನ್ನ ಫ್ರೆಂಡ್ಸ್ ಕೇಳುತ್ತಾರೆ. ನನ್ನ ಫ್ರೆಂಡ್ಸ್ ಪಿಜ್ಜಾ ಆರ್ಡರ್ ಮಾಡಿದ್ದರು. ಅದರಲ್ಲಿ ಟೊಮ್ಯಾಟೋ ಸಾಸ್ ಇತ್ತು.  ಟೊಮ್ಯಾಟೋ, ಆಲೂಗಡ್ಡೆ, ಕ್ಯಾಪ್ಸಿಕಂ ನನಗೆ ಅಲರ್ಜಿ ಎಂದು ಹೇಳಿದೆ. ನಿನಗೆ ತಿನ್ನಲು ಏನೂ ಇಲ್ಲ. ಹೋಗಿ ಸಿಹಿ ತಿನ್ನು ಎಂದಿದ್ದರು’ ಎಂಬುದಾಗಿ ರಶ್ಮಿಕಾ ವಿವರಿಸಿದ್ದರು. ಇತ್ತೀಚೆಗೆ ಒಮನ್​ಗೆ ತೆರಳಿದ್ದಾಗ ಅಲ್ಲಿನ ಊಟ ಪ್ರಯತ್ನಿಸಿದ್ದರು.

ಇದನ್ನೂ ಓದಿ: ಹಾರರ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ, ಗೆಲ್ಲುವ ನಿರೀಕ್ಷೆಯಲ್ಲಿ ನಟಿ

ರಶ್ಮಿಕಾ ಮಂದಣ್ಣ ಅವರು ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರು ಹೀರೋ. ಈ ಸಿನಿಮಾ ಸಾಧಾರಾಣ ಗೆಲುವು ಕಂಡಿದೆ. ರಶ್ಮಿಕಾ ಅವರು ಸದ್ಯ ತಮಿಳಿನಲ್ಲಿ ‘ಕುಬೇರ’ ಹೆಸರಿನ ಸಿನಿಮಾ ಮಾಡುತ್ತಿದ್ದು, ಧನುಷ್ ಈ ಚಿತ್ರಕ್ಕೆ ಹೀರೋ. ‘ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇನ್ನೂ ಕೆಲವು ಚಿತ್ರಗಳು ಅವರ ಕೈಯಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Wed, 16 April 25