‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು

ರವಿ ಬಸ್ರೂರು ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು
ರವಿ-ಪ್ರಶಾಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 01, 2024 | 6:25 AM

ಸಂಗೀತ ಸಂಯೋಜಕ ರವಿ ಬಸ್ರೂರು (Ravi Basrur) ಅವರು ಮಾಡಿದ ಹೆಸರು ತುಂಬಾನೇ ದೊಡ್ಡದು. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ‘ಕೆಜಿಎಫ್’ ಚಿತ್ರಕ್ಕೆ ಅವರು ಕೊಟ್ಟ ಸಂಗೀತ ಬೇರೆಯದೇ ರೀತಿ ಇತ್ತು. ‘ಕೆಜಿಎಫ್ 2’ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿ ಆದರು. ಸದ್ಯ ಅವರ ಕೈಯಲ್ಲಿ 8-10 ಸಿನಿಮಾಗಳಿವೆ. ಈ ಪೈಕಿ ‘ಮಾರ್ಟಿನ್’ ರೀತಿಯ ದೊಡ್ಡ ಬಜೆಟ್ ಚಿತ್ರ ಕೂಡ ಇದೆ. ತೆಲುಗು ಸಿನಿಮಾಗಳಿವೆ. ರವಿ ಬಸ್ರೂರು ಅವರನ್ನು ಹಿಂದಿ ಮಂದಿ ಈ ಮೊದಲು ಟೀಕಿಸುತ್ತಿದ್ದರಂತೆ. ಈಗ ಹಿಂದಿಯವರಿಗೆ ರವಿ ಬಸ್ರೂರ್ ನೀಡುತ್ತಿದ್ದ ರೀತಿಯ ಸಂಗೀತವೇ ಬೇಕಿದೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಮಾತನಾಡಿದ್ದರು.

ರವಿ ಬಸ್ರೂರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಆಗ ಅವರು ಆಲ್ಬಂ ಸಾಂಗ್ ಮಾಡಿದರು. ಅವರು ಗಾಯಕನಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. 2014ರಲ್ಲಿ ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಕೆಜಿಎಫ್ 2’ ಚಿತ್ರದಿಂದ ರವಿ ಅವರ ಖ್ಯಾತಿ ಹೆಚ್ಚಾಯಿತು. ಈ ಚಿತ್ರ ರಿಲೀಸ್ ಆಗುವ ಮೊದಲೇ ಹಿಂದಿಯಿಂದ ಅವರಿಗೆ ಆಫರ್​ಗಳು ಬಂದಿದ್ದವು. 2021ರಲ್ಲಿ ಸಲ್ಮಾನ್ ಖಾನ್ ಅವರ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರಕ್ಕೂ ರವಿ ಸಂಗೀತ ನಿಡಿದ್ದಾರೆ. ಈ ಮೊದಲು ಅವರನ್ನು ಟೀಕಿಸುತ್ತಿದ್ದವರೇ ಈಗ ಹೊಗಳುತ್ತಿದ್ದಾರೆ.

‘ಮುಂಬೈಗೆ ಹೋದಾಗ ನನ್ನನ್ನು ಗೇಲಿ ಮಾಡುತ್ತಿದ್ದರು. ನಿಮ್ಮದು ಜಂಗ್​ ಚಕರೆ ಚಕರೆ ಮ್ಯೂಸಿಕ್ ಎಂದು ಟೀಕಿಸುತ್ತಿದ್ದರು. ಈಗ ಅವರಿಗೆ ಇದೇ ಬೇಕಿದೆ. ನಮ್ಮಲ್ಲಿ ಒಂದು ಶಕ್ತಿ, ವೈಬ್ ಇದೆ. ಆ ಕಾಲಾಕ್ಕೆ ಒಂದು ಸೆಲೆಬ್ರೇಷನ್ ಎಂಬುದು ಬಂದಾಗ ಅದನ್ನು ಬಳಸುತ್ತಿದ್ದರು. ನಮ್ಮ ರಕ್ತದಲ್ಲಿ ಅದು ಬಂದಿದೆ. ಈ ಮ್ಯೂಸಿಕ್ ಬೇರೆ ವೈಬ್ ಕೊಡುತ್ತಿದೆ ಎಂಬುದು ಅವರಿಗೆ ಗೊತ್ತಾಗಿದೆ’ ಎಂದು ರವಿ ಬಸ್ರೂರು ಅವರು ಹೇಳಿದ್ದರು.

ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್; ‘ಕ್ಲಿಕ್​’ ಸಿನಿಮಾದ ವಿಶೇಷತೆ ಏನು?

ಸದ್ಯ ರವಿ ಬಸ್ರೂರು ಅವರು ‘ಮಾರ್ಟಿನ್’, ‘ಕಾಲಿಯನ್’, ‘ಅಹೋ ವಿಕ್ರಮಾರ್ಕ’, ‘ಮ್ಯಾಕ್ರೋ’ ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ಅವರು ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ