ರನ್ಯಾ ಕಾರಣಕ್ಕೆ ಸುದೀಪ್​ಗೆ ಆದ ಕಷ್ಟ ಒಂದೆರಡಲ್ಲ: ಶಾಕಿಂಗ್ ವಿಚಾರ ತಿಳಿಸಿದ ರವಿ ಶ್ರೀವತ್ಸ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿದ್ದಾರೆ. ‘ಮಾಣಿಕ್ಯ’ ಸಿನಿಮಾದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ‘ಮಾಣಿಕ್ಯ’ ಸಿನಿಮಾಗೆ ರನ್ಯಾ ಅವರನ್ನು ಆಯ್ಕೆ ಮಾಡಿದ್ದರಿಂದ ಸುದೀಪ್ ಅವರಿಗೆ ತುಂಬಾ ಕಷ್ಟ ಆಗಿತ್ತು ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

ರನ್ಯಾ ಕಾರಣಕ್ಕೆ ಸುದೀಪ್​ಗೆ ಆದ ಕಷ್ಟ ಒಂದೆರಡಲ್ಲ: ಶಾಕಿಂಗ್ ವಿಚಾರ ತಿಳಿಸಿದ ರವಿ ಶ್ರೀವತ್ಸ
Ranya Rao, Kichcha Sudeep, Ravi Srivatsa
Updated By: ಮದನ್​ ಕುಮಾರ್​

Updated on: Mar 11, 2025 | 7:22 PM

ನಟಿ ರನ್ಯಾ ರಾವ್ (Ranya Rao) ಅವರು ಚಿತ್ರರಂಗದಿಂದ ದೂರಾಗಿದ್ದಾರೆ. ಕನ್ನಡದಲ್ಲಿ ಅವರು ಮಾಡಿದ್ದು ಎರಡು ಸಿನಿಮಾ ಮಾತ್ರ. ಸುದೀಪ್ (Kichcha Sudeep) ಜೊತೆ ‘ಮಾಣಿಕ್ಯ’, ಗಣೇಶ್ ಜೊತೆ ‘ಪಟಾಕಿ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಬಣ್ಣದ ಲೋಕದಲ್ಲಿ ಅವರು ಆ್ಯಕ್ಟೀವ್ ಆಗಿ ಇರಲಿಲ್ಲ. ಈಗ ಮತ್ತೆ ರನ್ಯಾ ಹೆಸರು ಪ್ರಚಲಿತಕ್ಕೆ ಬಂದಿದೆ. ಆದರೆ ಕೆಟ್ಟ ಕಾರಣಕ್ಕೆ ಅವರು ಸುದ್ದಿ ಆಗುತ್ತಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ಅವರು ಅರೆಸ್ಟ್ ಆಗಿದ್ದಾರೆ. ಈ ಕುರಿತಂತೆ ನಿರ್ದೇಶಕ ರವಿ ಶ್ರೀವತ್ಸ ಅವರು ಮಾತನಾಡಿದ್ದಾರೆ. ‘ಮಾಣಿಕ್ಯ’ ಸಿನಿಮಾಗೆ ರವಿ ಶ್ರೀವತ್ಸ (Ravi Srivatsa) ಅವರು ಸಂಭಾಷಣೆ ಬರೆದಿದ್ದರು. ತೆರೆ ಹಿಂದೆ ಹಲವು ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದರು. ಆ ದಿನಗಳನ್ನು ಈಗ ಅವರು ನೆನಪು ಮಾಡಿಕೊಂಡಿದ್ದಾರೆ.

ರನ್ಯಾ ಅವರಿಗೆ ‘ಮಾಣಿಕ್ಯ’ ಮೊದಲ ಸಿನಿಮಾ. ಆಗ ಅವರಿಗೆ ಸರಿಯಾಗಿ ನಟನೆ ಬರುತ್ತಿರಲ್ಲಿ. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಸುದೀಪ್ ಅವರೇ ರನ್ಯಾಗೆ ಎಲ್ಲವನ್ನೂ ಹೇಳಿಕೊಡಬೇಕಿತ್ತು. ಅದರಿಂದ ಅವರಿಗೆ ತುಂಬ ಕಷ್ಟ ಆಗುತ್ತಿತ್ತು. ಈ ವಿಚಾರಗಳನ್ನು ರವಿ ಶ್ರೀವತ್ಸ ಅವರು ಮೆಲುಕು ಹಾಕಿದ್ದಾರೆ.

‘ನಾವು ಇಷ್ಟು ದಿನ ರನ್ಯಾ ಅವರನ್ನು ಮರೆತೆಬಿಟ್ಟಿದ್ದೆವು. ಈಗ ಈ ರೀತಿ ಸುದ್ದಿ ಕೇಳಿಬಂದಿದ್ದು ನಮಗೆ ಶಾಕಿಂಗ್. ಒಬ್ಬಳು ಹೆಣ್ಮಗಳು ಇಂಥ ಕೇಸ್​ನಲ್ಲಿ ಸಿಕ್ಕಿಕೊಂಡಿದ್ದು ಬೇಸರ ಆಯಿತು. ಮಾಣಿಕ್ಯ ಸಿನಿಮಾಗೆ ನಾನು ಕೆಲಸ ಮಾಡಿದ್ದೇನೆ. ಕ್ಯಾಮೆರಾಮ್ಯಾನ್ ಚಂದ್ರು ಅವರು ರನ್ಯಾ ಫೋಟೋಗಳನ್ನು ತಂದಿದ್ದರು. ಆ ಫೋಟೋಗಳನ್ನು ಸುದೀಪ್ ಅವರು ನನಗೆ ತೋರಿಸಿದರು. ಹಾಗೆ ಅವರು ಆಯ್ಕೆ ಆಗಿದ್ದರು’ ಎಂದಿದ್ದಾರೆ ರವಿ ಶ್ರೀವತ್ಸ.

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

‘ಆ ಸಿನಿಮಾದಲ್ಲಿ ರಮ್ಯಾ ನಟಿಸಬೇಕಿತ್ತು. ಆದರೆ ಅವರ ಬದಲಿಗೆ ರನ್ಯಾ ನಟಿಸಿದರು. ಆ ಸಿನಿಮಾ ಬಳಿಕ ರನ್ಯಾ ಅವರಿಗೆ ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರು ಮಿಂಚಲಿಲ್ಲ. ಚಿತ್ರರಂಗ ಕೆಲವರನ್ನು ಮಾತ್ರ ಮಡಿಲಲ್ಲಿ ಇಟ್ಟುಕೊಳ್ಳುತ್ತದೆ. ಸಾಂಗ್ ಶೂಟಿಂಗ್ ವೇಳೆ ಸುದೀಪ್ ಸರ್ ಜೊತೆ ನಾನು ಮೂರು ದಿನ ಇದ್ದೆ. ಆ ಸಮಯದಲ್ಲಿ ರನ್ಯಾ ಅವರನ್ನು ನೋಡಿದೆ. ಒಂದಷ್ಟು ವಿಷಯಗಳನ್ನು ಸುದೀಪ್ ಸರ್ ಹೇಳಿಕೊಡಬೇಕಿತ್ತು. ಕಲಿಯುವಿಕೆಯಲ್ಲಿ ಅವರು ಚುರುಕಾಗಿ ಇರಲಿಲ್ಲ. 5-6 ಬಾರಿ ಸುದೀಪ್ ಸರ್ ತಿದ್ದುತ್ತಿದ್ದರು’ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

ಇದನ್ನೂ ಓದಿ: ಚಿನ್ನ ಕಳ್ಳ ಸಾಗಣೆ ಕೇಸ್: ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿ ವ್ಯಕ್ತಿಗಳು

‘ಅಲ್ಲಿಗೆ ಸುದೀಪ್ ಮತ್ತು ರನ್ಯಾ ಅವರ ಸಂಪರ್ಕ ಅಂತ್ಯವಾಯಿತು. ನಮ್ಮ ಚಿತ್ರರಂಗದಲ್ಲಿ ಅವಕಾಶ ಸಿಗುತ್ತದೆ. ಆದರೆ ತುಂಬ ಹೇಳಿಕೊಟ್ಟು ಇಟ್ಟುಕೊಳ್ಳೋಕೆ ಆಗಲ್ಲ. ತುಂಬ ಜನ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂಥದ್ದರಲ್ಲಿ ಸುದೀಪ್ ಸರ್ ಪಟ್ಟಂತಹ ಪಾಡು ಪ್ರಪಂಚಕ್ಕೆ ಗೊತ್ತಾಗಿಹೋಗಿತ್ತು. ನಾಲ್ಕು-ಐದು ಸಾರಿ ತಿದ್ದುವುದು ಕಷ್ಟ. ಈಗ ಸಿನಿಮಾ ಮೇಕಿಂಗ್ ಬದಲಾಗಿದೆ. ಬೇಗ ಸಿನಿಮಾ ಮುಗಿಸಬೇಕಾದಾಗ ಇಂಥ ಹೆಣ್ಮಗಳನ್ನು ಇಟ್ಟುಕೊಂಡು ಕೆಲಸ ಮಾಡೋದು ಕಷ್ಟ’ ಎಂದಿದ್ದಾರೆ ರವಿ ಶ್ರೀವತ್ಸ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.