Vikaram Ravichandran: ಪುತ್ರನ ಎರಡನೇ ಸಿನಿಮಾಕ್ಕೆ ಭಿನ್ನ ಹೆಸರು ಕೊಟ್ಟ ರವಿಚಂದ್ರನ್

|

Updated on: Apr 26, 2023 | 9:47 PM

Vikram Ravichandran: ಪುತ್ರ ಎರಡನೇ ಸಿನಿಮಾಕ್ಕೆ ಭಿನ್ನವಾದ ಹೆಸರನ್ನು ರವಿಚಂದ್ರನ್ ಸೂಚಿಸಿದ್ದಾರೆ. ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದೆ.

Vikaram Ravichandran: ಪುತ್ರನ ಎರಡನೇ ಸಿನಿಮಾಕ್ಕೆ ಭಿನ್ನ ಹೆಸರು ಕೊಟ್ಟ ರವಿಚಂದ್ರನ್
ವಿಕ್ರಂ ರವಿಚಂದ್ರನ್
Follow us on

ಹಿರಿಯ ನಟ ರವಿಚಂದ್ರನ್ (Ravichandran) ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಎರಡನೇ ಸಿನಿಮಾದ ಟೈಟಲ್ ಹಾಗೂ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮಧೋಳ್ ಎಂದು ಹೆಸರಿಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ರಮ್​ನ ಹೊಸ ಚಿತ್ರದ ಶೀರ್ಷಿಕೆ ಹಾಗೂ ಟೈಟಲ್ ಟೀಸರ್ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ”ಮೊದಲ ಸಿನಿಮಾ ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ನಂತರ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜೆ, ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ” ಎಂದರು.

ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ”ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಅಂತ ಆಸೆ ಪಡ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಅಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

ಇದನ್ನೂ ಓದಿ:ಬೈದು ಕಳಿಸಿದರೂ ಡಾಲಿ ಧನಂಜಯ್ ಪ್ರಗತಿಯಲ್ಲಿ ರವಿಚಂದ್ರನ್​ಗೆ ವಿಶೇಷ ಸ್ಥಾನ

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಮೊದಲ ಸಿನಿಮಾ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:46 pm, Wed, 26 April 23