ಈ ಫೋಟೋದಲ್ಲಿರುವ ಕನ್ನಡದ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
ಅನೇಕೆ ಸೆಲೆಬ್ರಿಟಿಗಳು ಬಾಲ್ಯದ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಕನ್ನಡದ ಖ್ಯಾತ ನಟಿಯೊಬ್ಬರ ಚೈಲ್ಡ್ಹುಡ್ ಫೋಟೋ ವೈರಲ್ ಆಗಿದೆ.
ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದಕ್ಕೆ ಕಾರಣ ಅಭಿಮಾನಿಗಳು. ಅಭಿಮಾನಿಗಳಿಗೋಸ್ಕರ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಾರೆ. ದಿನ ನಿತ್ಯ ತಮ್ಮ ಬದುಕಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಅಪ್ಡೇಟ್ ನೀಡುತ್ತಾರೆ. ಅದೇ ರೀತಿ ಅನೇಕೆ ಸೆಲೆಬ್ರಿಟಿಗಳು ಬಾಲ್ಯದ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಕನ್ನಡದ ಖ್ಯಾತ ನಟಿಯೊಬ್ಬರ ಚೈಲ್ಡ್ಹುಡ್ ಫೋಟೋ ವೈರಲ್ ಆಗಿದೆ. ಇದನ್ನು ಯಾರು ಎಂದು ಗುರುತಿಸುವಂತೆ ಅನೇಕರು ಪ್ರಶ್ನೆ ಇಡುತ್ತಿದ್ದಾರೆ. ಅಂದಹಾಗೆ, ಇದು ಬೇರಾರು ಅಲ್ಲ ಯಶ್ (Yash) ಪತ್ನಿ, ನಟಿ ರಾಧಿಕಾ ಪಂಡಿತ್ (Radhika Pandit).
ರಾಧಿಕಾ ಪಂಡಿತ್ ಅವರು ಕನ್ನಡದ ಬೇಡಿಕೆಯ ನಟಿ ಆಗಿದ್ದರು. ಕುಟುಂಬದ ಕೆಲಸದಲ್ಲಿ ಬ್ಯುಸಿ ಆದ ನಂತರದಲ್ಲಿ ಅವರು ದೊಡ್ಡ ಪರದೆಯತ್ತ ಮುಖ ಮಾಡಿಲ್ಲ. ಮದುವೆ ಬಳಿಕ ಒಂದು ಸಿನಿಮಾ ಮಾಡಿದ್ದು ಬಿಟ್ಟರೆ ಮತ್ತಾವುದೇ ಚಿತ್ರಗಳಲ್ಲಿ ಅವರು ನಟಿಸಿಲ್ಲ. ಈಗ ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ರಾಧಿಕಾ ಪಂಡಿತ್ ಅವರು ಲಂಗ-ದಾವಣಿ ಹಾಕಿ ನಿಂತಿದ್ದಾರೆ. ಕೂದಲಿಗೆ ಮೊಗ್ಗಿನ ಜಡೆ ಇದೆ. ಯಾವುದೋ ಕಾರ್ಯಕ್ರಮಕ್ಕೆ ಅವರು ರೆಡಿ ಆದಂತೆ ಕಾಣುತ್ತದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಈ ಬಟ್ಟೆಗಿಂತ ಸೀರೆಯಲ್ಲಿ ಮೊಗ್ಗಿನ ಜಡೆ ನಿಮಗೆ ಉತ್ತಮವಾಗಿ ಕಾಣುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಈಗಲೂ ನಿಮ್ಮ ಮುಖ ಬಾಲ್ಯದಲ್ಲಿ ಇದ್ದಂತೆ ಇದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ‘ನನಗೆ ವೈಯಕ್ತಿಕವಾಗಿ ಇರೋದೇ ಓರ್ವ ಫೋಟೋಗ್ರಾಫರ್’; ಹೆಸರು ರಿವೀಲ್ ಮಾಡಿದ ರಾಧಿಕಾ ಪಂಡಿತ್
ಇತ್ತೀಚೆಗೆ ರಾಧಿಕಾ ಪಂಡಿತ್ ಯಾವುದೇ ಫೋಟೋ ಹಂಚಿಕೊಂಡರೂ ಅದಕ್ಕೆ ಫ್ಯಾನ್ಸ್ ಯಶ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಎಂದು ತಿಳಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಯಶ್ ಹೊಸ ಸಿನಿಮಾ ಬಗ್ಗೆ ತಿಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಆದರೆ, ಯಶ್ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ನ ರಾಧಿಕಾ ಪಂಡಿತ್ ನೀಡಿಲ್ಲ.
ಇದನ್ನೂ ಓದಿ: ಹೇಗಿತ್ತು ರಾಕಿ-ರಾಧಿಕಾ ಪಂಡಿತ್ ಭೇಟಿ; ಹಳೆಯ ವಿಡಿಯೋ ಹಂಚಿಕೊಂಡ ಯಶ್ ಪತ್ನಿ
ರಾಧಿಕಾ ಪಂಡಿತ್ ಅವರ ಸಂಪೂರ್ಣ ಗಮನ ಕುಟುಂಬದ ಮೇಲಿದೆ. ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ ಅನ್ನೋದು ಫ್ಯಾನ್ಸ್ ಬಯಕೆ. ಆದರೆ, ಈವರೆಗೆ ರಾಧಿಕಾ ಪಂಡಿತ್ ಹೊಸ ಸಿನಿಮಾ ಘೋಷಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Wed, 26 April 23