AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಫಿ ಸಾಕ್ಷಿಗೆ ದಿನಾಂಕ ನಿಗದಿ, ಸೆ.28ಕ್ಕೆ ದರ್ಶನ್ ಭವಿಷ್ಯ ಭಾಗಷಃ ನಿರ್ಧಾರ

ಪ್ರದೋಶ್ ಹೇಳಿಕೆಯನ್ನು ಏನಾದರೂ ಮಾಡಿ ತಡೆಯುವ ಪ್ರಯತ್ನವನ್ನು ದರ್ಶನ್ ಪರ ವಕೀಲರು ಸತತವಾಗಿ ಮಾಡುತ್ತಲೇ ಇದ್ದಾರೆ. ಆದರೆ ಹೈಕೋರ್ಟ್ ಆಗಲಿ, ವಿಚಾರಣಾ ನ್ಯಾಯಾಲಯವಾಗಲಿ ಅವರ ಅರ್ಜಿಗಳನ್ನು ಮನ್ನಿಸಿಲ್ಲ. ಇದೀಗ ಅಂತಿಮವಾಗಿ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಯು ಪ್ರಕರಣದ ದಿಕ್ಕನ್ನೇ ಬದಲಾಯಿಸುವುದು ಖಾತ್ರಿ.

ಮಾಫಿ ಸಾಕ್ಷಿಗೆ ದಿನಾಂಕ ನಿಗದಿ, ಸೆ.28ಕ್ಕೆ ದರ್ಶನ್ ಭವಿಷ್ಯ ಭಾಗಷಃ ನಿರ್ಧಾರ
Darshan
ಮಂಜುನಾಥ ಸಿ.
|

Updated on:Sep 24, 2026 | 3:25 PM

Share

ಮುಖ್ಯಾಂಶಗಳು

  • ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ಬಹುತೇಕ ಖಾತ್ರಿ
  • ಮಾಫಿ ಸಾಕ್ಷಿ ಹೇಳಿಕೆಗೆ ದಿನಾಂಕ ನಿಗದಿ
  • ಸೆಪ್ಟೆಂಬರ್ 28ಕ್ಕೆ ದರ್ಶನ್ ‘ಆಟ’ ಅಂತ್ಯ?

ಪ್ರದೋಶ್ ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿವರ್ತನೆಗೊಳ್ಳುವ ಮೂಲಕ ರೇಣುಕಾ ಸ್ವಾಮಿ ಪ್ರಕರಣಕ್ಕೆ ಅತ್ಯಂತ ಮಹತ್ವದ ತಿರುವು ದೊರೆತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರಂಭದಿಂದ ಅಂತ್ಯದ ವರೆಗೆ ಎಲ್ಲದಕ್ಕೂ ಐ ವಿಟ್ನೆಸ್ (ನೇರ ಸಾಕ್ಷಿ) ಹಾಗಾಗಿ ಪ್ರದೋಶ್ ಹೇಳಿಕೆ, ದರ್ಶನ್​​ ಮಾತ್ರವೇ ಅಲ್ಲದೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆಲ್ಲ ಉರುಳಾಗುವುದು ಖಾತ್ರಿ ಆಗಿದೆ. ಇದೇ ಕಾರಣಕ್ಕೆ, ಪ್ರದೋಶ್ ಹೇಳಿಕೆಯನ್ನು ಏನಾದರೂ ಮಾಡಿ ತಡೆಯುವ ಪ್ರಯತ್ನವನ್ನು ದರ್ಶನ್ ಪರ ವಕೀಲರು ಸತತವಾಗಿ ಮಾಡುತ್ತಲೇ ಇದ್ದಾರೆ. ಆದರೆ ಹೈಕೋರ್ಟ್ ಆಗಲಿ, ವಿಚಾರಣಾ ನ್ಯಾಯಾಲಯವಾಗಲಿ ಅವರ ಅರ್ಜಿಗಳನ್ನು ಮನ್ನಿಸಿಲ್ಲ. ಇದೀಗ ಅಂತಿಮವಾಗಿ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ ಹಾಜರಾಗಿ ಮಾಫಿ ಸಾಕ್ಷಿ ದಾಖಲಿಸುವಂತೆ ಪ್ರದೋಶ್​​ಗೆ ನ್ಯಾಯಾಲಯವು ಸಮನ್ಸ್ ನೀಡಿದೆ. 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಸಮನ್ಸ್ ಜಾರಿ ಮಾಡಿ ಆದೇಶ ಮಾಡಿದ್ದು, ಮುಂದಿನ ಸೋಮವಾರು ಪ್ರದೋಶ್ ನ್ಯಾಯಾಲಯದ ಎದುರು ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲಿದ್ದಾರೆ. ಈಗಾಗಲೇ ಕೆಲವು ಬಾರಿ ಮಾಫಿ ಸಾಕ್ಷಿ ನುಡಿಯಲು ಪ್ರದೋಶ್ ತಯಾರಾಗಿದ್ದರು. ಒಮ್ಮೆಯಂತೂ ನ್ಯಾಯಾಲಯಕ್ಕೆ ಹಾಜರಾಗಿ ಮರಳಿದ್ದರು. ಆದರೆ ಇದೀಗ ದಿನಾಂಕ ನಿಗದಿ ಆಗಿದ್ದು, ಈ ಬಾರಿ ದಿನಾಂಕ ಬದಲಾಗುವ ಸಾಧ್ಯತೆ ಅತ್ಯಂತ ವಿರಳ.

ಇಂದಿನ 59ನೇ ಸಿಸಿಹೆಚ್ ಕೋರ್ಟ್ ಆದೇಶದ ಬಳಿಕವೂ ದರ್ಶನ್ ಪರ ವಕೀಲರು ಕಾಲಾವಕಾಶಕ್ಕಾಗಿ ಮನವಿ ಮಾಡಿದರು. ‘ಸುಪ್ರೀಂಕೋರ್ಟ್​​ಗೆ ನಾವು ಮೇಲ್ಮನವಿ ಸಲ್ಲಿಸಿದ್ದೇವೆ ಹಾಗಾಗಿ ಕಾಲಾವಕಾಶ ನೀಡಬೇಕು’ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದರು. ಆದರೆ ಅದಕ್ಕೆ ಸೊಪ್ಪು ಹಾಕದ ನ್ಯಾಯಾಧೀಶರು ಸುಪ್ರೀಂ ನಿರ್ದೇಶನ ಇರುವುದರಿಂದ ಪ್ರಕರಣವನ್ನು ಮುಂದೂಡಲು ಅಥವಾ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಜೈಲಲ್ಲಿ ಕೂತು ಹೊರಗೆ ಆಟ ಆಡಿಸುತ್ತಿರುವ ಪ್ರದೋಶ್: ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ

ಸೆಪ್ಟೆಂಬರ್ 28ರಂದು ಪ್ರದೋಶ್ ಸಾಕ್ಷ್ಯ ನುಡಿಯುವುದು ಬಹುತೇಕ ಖಾತ್ರಿ ಆಗಿದ್ದು, ಆ ದಿನ ದರ್ಶನ್​​ ಅವರ ಭವಿಷ್ಯ ಭಾಗಷಃ ನಿರ್ಧಾರ ಆಗಲಿದೆ. ಈ ರೀತಿಯ ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ಬಹಳ ಮುಖ್ಯವಾಗಿದ್ದು, ಪ್ರಕರಣ ಕುರಿತಾಗಿ ತೀರ್ಪಿನ ಮೇಲೆ ಈ ಹೇಳಿಕೆ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ. ಇದೇ ಕಾರಣಕ್ಕೆ ದರ್ಶನ್ ಮತ್ತು ಅವರ ವಕೀಲರು ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ತಡೆಯಲು ನಾನಾ ಕಸರತ್ತುಗಳನ್ನು ಮಾಡುತ್ತಲೇ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Thu, 24 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More