Rishab Shetty: 6ನೇ ದಿನವೂ ಹೌಸ್​ಫುಲ್ ಆಯ್ತು ‘ಕಾಂತಾರ’; ರಿಷಬ್​ ಶೆಟ್ಟಿಗೆ ಅಭಿಮಾನಿಗಳ ಜೈಕಾರ

Kantara Movie: ‘ಕಾಂತಾರ’ ಚಿತ್ರ ಸೂಪರ್​ ಹಿಟ್​ ಆಗಿದೆ. ರಿಷಬ್​ ಶೆಟ್ಟಿ ಅವರ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಈ ಚಿತ್ರ ಆಕರ್ಷಿಸುತ್ತಿದೆ.

Rishab Shetty: 6ನೇ ದಿನವೂ ಹೌಸ್​ಫುಲ್ ಆಯ್ತು ‘ಕಾಂತಾರ’; ರಿಷಬ್​ ಶೆಟ್ಟಿಗೆ ಅಭಿಮಾನಿಗಳ ಜೈಕಾರ
ರಿಷಬ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Oct 05, 2022 | 12:11 PM

ಚಂದನವನದ ಯಶಸ್ವಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಅವರ ಪ್ರತಿಭೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತರ’ (Kantara) ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರ ಬಹುತೇಕ ಕಡೆಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಕರಾವಳಿ ನೆಲೆದ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಮಾಡಿರುವ ಪಾತ್ರ ಎಲ್ಲರನ್ನೂ ಸೆಳೆಯುತ್ತಿದೆ. ಸತತ 6ನೇ ದಿನವೂ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯ. ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗುತ್ತಿದೆ.

ಸೆಪ್ಟೆಂಬರ್​ 30ರಂದು ‘ಕಾಂತಾರ’ ಚಿತ್ರ ಬಿಡುಗಡೆ ಆಯಿತು. ಅದಕ್ಕೂ ಒಂದು ದಿನ ಮುನ್ನ ಹಲವು ಕಡೆಗಳಲ್ಲಿ ಪ್ರೀಮಿಯರ್​ ಶೋ ಮಾಡಲಾಗಿತ್ತು. ಆ ಶೋಗಳು ಕೂಡ ಹೌಸ್​ಫುಲ್​​ ಪ್ರದರ್ಶನ ಕಂಡಿದ್ದವು. ಅದನ್ನೂ ಸೇರಿಸಿದರೆ ಒಟ್ಟು 7 ದಿನಗಳ ಕಾಲ ಹೌಸ್​ಫುಲ್​ ಆದಂತೆ ಆಗಲಿದೆ. ವೀಕೆಂಡ್​ನಲ್ಲಿ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ದಸರಾ ಹಬ್ಬದ ರಜಾ ದಿನಗಳು ಬಂದಿರುವುದು ಕೂಡ ಪ್ಲಸ್​ ಪಾಯಿಂಟ್​ ಆಗಿದೆ.

ಇದನ್ನೂ ಓದಿ
Image
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?
Image
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ

ಮೊದಲ ದಿನ ‘ಕಾಂತಾರ’ ಸಿನಿಮಾ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಯ್ತು. ರಿಷಬ್​ ಶೆಟ್ಟಿ ಅವರ ನಟನೆಯನ್ನು ಎಲ್ಲರೂ ಕೊಂಡಾಡಿದರು. ರಕ್ಷಿತ್​ ಶೆಟ್ಟಿ, ರಮ್ಯಾ, ಪ್ರಭಾಸ್​ ಮುಂತಾದ ಸ್ಟಾರ್​ ಕಲಾವಿದರು ಭೇಷ್​ ಎಂದರು. ಎಲ್ಲದರ ಪರಿಣಾಮವಾಗಿ ‘ಕಾಂತಾರ’ ಚಿತ್ರಕ್ಕೆ ಉತ್ತಮ ಹೈಪ್​ ಸಿಕ್ಕಿತು. ಮುಖ್ಯವಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಈ ಚಿತ್ರ ಆಕರ್ಷಿಸುತ್ತಿದೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್​ ಶೆಟ್ಟಿ ಜೊತೆ ಸಪ್ತಮಿ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಅರಣ್ಯಾಧಿಕಾರಿ ಪಾತ್ರದಲ್ಲಿ ಕಿಶೋರ್ ಅಬ್ಬರಿಸಿದ್ದಾರೆ. ಅಚ್ಯುತ್ ಕುಮಾರ್​ ಮಾಡಿರುವ ಪಾತ್ರ ಕೂಡ ಹೆಚ್ಚು ಹೈಲೈಟ್​ ಆಗಿದೆ. ಪ್ರಮೋದ್​ ಶೆಟ್ಟಿ, ಪ್ರಕಾಶ್​ ತುಮ್ಮಿನಾಡ್​ ಮುಂತಾದವರು ಸಹ ಶೈನ್​ ಆಗಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ.

ಸೆಪ್ಟೆಂಬರ್​ 30ರಂದು ತಮಿಳಿನ ‘ಪೊನ್ನಿಯಿನ್​ ಸೆಲ್ವನ್​’ ಹಾಗೂ ಹಿಂದಿಯ ‘ವಿಕ್ರಮ್​ ವೇದ’ ಚಿತ್ರಗಳು ಕೂಡ ಬಿಡುಗಡೆ ಆದವು. ಆದರೆ ಆ ಚಿತ್ರಗಳಿಗೆ ಸೆಡ್ಡು ಹೊಡೆದು ‘ಕಾಂತಾರ’ ಅಬ್ಬರಿಸುತ್ತಿದೆ. ಇಂದು (ಅಕ್ಟೋಬರ್​ 5) ತೆಲುಗಿನ ‘ಗಾಡ್​ ಫಾದರ್​’ ಹಾಗೂ ‘ದಿ ಘೋಸ್ಟ್​’ ಚಿತ್ರಗಳು ರಿಲೀಸ್​ ಆಗಿವೆ. ಹಾಗಿದ್ದರೂ ಕೂಡ ‘ಕಾಂತಾರ’ದ ಹವಾ ಕಮ್ಮಿ ಆಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:11 pm, Wed, 5 October 22