
‘ಕಾಂತಾರ’ ಚಿತ್ರದ ಬಳಿಕ ರಿಷಬ್ ಶೆಟ್ಟಿ (Rishab Shetty) ಮಾರುಕಟ್ಟೆ ಗಗನಕ್ಕೇರಿದೆ. ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆ. ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು, ತೆಲುಗು ಮೂಲ ಭಾಷೆಯಾಗಿದೆ. ರಿಷಬ್ ಕರ್ನಾಟಕದವರಾಗಿರುವುದರಿಂದ ಕನ್ನಡದಲ್ಲೂ ಸಿನಿಮಾ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆ ಇದೆ. ಈ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ರಾಜಮೌಳಿ ಗರಡಿಯಲ್ಲಿ ಪಳಗಿದ ಅಶ್ವಿನ್ ಗಂಗರಾಜು ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಅಶ್ವಿನ್ ಗಂಗರಾಜು ಅವರು ಈ ಮೊದಲು ರಾಜಮೌಳಿ ನಿರ್ದೇಶನದ ‘ಈಗ’ ಹಾಗೂ ‘ಬಾಹುಬಲಿ’ ಚಿತ್ರದ ಒಂದು ಹಾಗೂ ಎರಡನೇ ಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ರಾಜಮೌಳಿ ಅವರಿಂದ ಸಾಕಷ್ಟು ವಿಚಾರಗಳನ್ನು ಅಶ್ವಿನ್ ಕಲಿತಿದ್ದಾರೆ. ಅವರು ಈ ಮೊದಲು ‘ಆಕಾಶವಾಣಿ’ ಹೆಸರಿನ ಸಿನಿಮಾ ಮಾಡಿದ್ದರು. ಈಗ ಅವರಿಂದ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಗೆದ್ದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿಗೆ ಪ್ರೀತಿಯ ಸಂದೇಶ ಕೊಟ್ಟ ರಿಷಬ್
ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಅವರು ಬಂಡುಕೋರನಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖಕ್ಕೆ ಬಟ್ಟೆ ಕಟ್ಟಲಾಗಿದೆ. ಹಿಂಭಾಗದಲ್ಲಿ ಎರಡು ಕತ್ತಿಗಳಿವೆ. ಎದುರು ಭಾಗದಲ್ಲಿ ಸೈನಿಕರು ಹಾಗೂ ಫಿರಂಗಿ ಕಾಣಿಸುತ್ತದೆ. ಈ ಚಿತ್ರವನ್ನು ಸಿತಾರಾ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯ 38ನೇ ಚಿತ್ರ ಇದಾಗಿದೆ.
ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ 😊
Not all Rebels are forged in Battle. ⚔️
Some are chosen by Destiny
And this is that story of a Rebel..💥💥Directed by @AshwinGangaraju
Produced by @SitharaEnts @vamsi84 & #SaiSoujanya@Fortune4Cinemas #SrikaraStudios pic.twitter.com/rhZUcTcrxU
— Rishab Shetty (@shetty_rishab) July 30, 2025
My NEXT.
Starring, the finest, @shetty_rishab Grateful for the trust all along sir.
Produced by unwavering @vamsi84 garu.
Honored to Collaborate.
Together, We REBEL ⚔️🔥@SitharaEnts @Fortune4Cinemas #SrikaraStudios pic.twitter.com/J1NYcaY50H
— Ashwin Gangaraju (@AshwinGangaraju) July 30, 2025
ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ’ ಎಂದು ರಿಷಬ್ ಕೋರಿದ್ದಾರೆ. ‘ಎಲ್ಲಾ ಬಂಡುಕೋರರು ಯುದ್ಧದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ. ಇದು ಬಂಡುಕೋರನ ಕಥೆ’ ಎಂದು ರಿಷಬ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Wed, 30 July 25