AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿಂಗ್ ಸ್ಟಾರ್ ಯಶ್ ಅಂದು ಹೇಳಿದ ಮಾತು ನಿಜಮಾಡಿದ ರಾಜ್ ಬಿ. ಶೆಟ್ಟಿ, ಜೆಪಿ

‘ಸು ಫ್ರಮ್ ಸೋ’ ಚಿತ್ರದ ಅಭೂತಪೂರ್ವ ಯಶಸ್ಸು ರಾಕಿಂಗ್ ಸ್ಟಾರ್ ಯಶ್ ಅವರ ಮಾತಿನ ಸತ್ಯತೆಯನ್ನು ಸಾಬೀತುಪಡಿಸಿದೆ. ಯಶ್ ಅವರು ಒಳ್ಳೆಯ ಕಥಾವಸ್ತುವಿನ ಚಿತ್ರಗಳು ಯಶಸ್ವಿಯಾಗುತ್ತವೆ ಎಂದು ಹೇಳಿದ್ದರು. ‘ಸು ಫ್ರಮ್ ಸೋ’ ಚಿತ್ರದ ಯಶಸ್ಸು ಪ್ರಚಾರಕ್ಕಿಂತ ಉತ್ತಮ ಕಥೆ ಮತ್ತು ನಿರೂಪಣೆ ಮುಖ್ಯ ಎಂಬುದನ್ನು ತೋರಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಂದು ಹೇಳಿದ ಮಾತು ನಿಜಮಾಡಿದ ರಾಜ್ ಬಿ. ಶೆಟ್ಟಿ, ಜೆಪಿ
ಯಶ್
ರಾಜೇಶ್ ದುಗ್ಗುಮನೆ
|

Updated on: Jul 30, 2025 | 8:58 AM

Share

ರಾಕಿಂಗ್ ಸ್ಟಾರ್ ಯಶ್ ಅವರು ವೇದಿಕೆ ಏರಿದಾಗ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಬಹುತೇಕವು ಅವರ ಅನುಭವದ ಮಾತು. ಇಂಡಸ್ಟ್ರಿಯ ಏಳ್ಗೆ ಬಗೆಗಿನ ಮಾತುಗಳೇ ಆಗಿರುತ್ತವೆ.  2025ರಲ್ಲಿ ರಿಲೀಸ್ ಆದ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಈವೆಂಟ್​ಗೆ ಯಶ್ ಅತಿಥಿಯಾಗಿ ತೆರಳಿದ್ದರು. ಈ ವೇದಿಕೆ ಮೇಲೆ ಯಶ್ ಒಂದು ಮಾತನ್ನು ಹೇಳಿದ್ದರು. ರಾಜ್ ಬಿ. ಶೆಟ್ಟಿ ಹಾಗೂ ಜೆಪಿ ತುಮಿನಾಡ ‘ಸು ಫ್ರಮ್ ಸೋ’ (Su From So Movie) ಚಿತ್ರದ ಮೂಲಕ ಇದನ್ನು ನಿಜ ಎಂದು ತೋರಿಸಿದ್ದಾರೆ.

‘ಸು ಫ್ರಮ್ ಸೋ’ ಸಕ್ಸಸ್

ರಾಜ್ ಬಿ. ಶೆಟ್ಟಿ ಮೊದಲಾದವರು ನಿರ್ಮಿಸಿದ, ಜೆಪಿ ತುಮಿನಾಡ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ವಾರದ ದಿನಗಳಲ್ಲೂ ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ. ‘ಜನರು ಥಿಯೇಟರ್​ಗೆ ಬರುತ್ತಿಲ್ಲ ಎಂಬ ಸ್ಥಿತಿಯಿಂದ ವಾರದ ದಿನದಲ್ಲೂ ಟಿಕೆಟ್ ಸಿಗುತ್ತಿಲ್ಲ’ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ
Image
ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
Image
ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕನಸು ಭಗ್ನ
Image
ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ತಡೆಯೋರೆ ಇಲ್ಲ
Image
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ

‘ಸು ಫ್ರಮ್ ಸೋ’ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇಲ್ಲ. ರಾಜ್ ಬಿ. ಶೆಟ್ಟಿ ಅವರು ಸೆಲೆಬ್ರಿಟಿಗಳಿಂದ ಸಿನಿಮಾ ಪ್ರಚಾರ ಮಾಡಿಸಿಲ್ಲ. ಪೋಸ್ಟರ್ ಅಂಟಿಸಿಲ್ಲ. ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಕೊಟ್ಟರು. ಇದು ಸಿನಿಮಾಗೆ ಸಹಕಾರಿ ಆಗಿದೆ. ಸಿನಿಮಾನ ಜನರು ಮರಳಿ ಮರಳಿ ವೀಕ್ಷಿಸುತ್ತಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ವಿಚಾರ ಚಿತ್ರದ ಹೈಲೈಟ್. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅನೇಕರು ಯಶ್ ಮಾತನ್ನು ನೆನಪಿಸಿಕೊಂಡಿದ್ದಾರೆ.

ಯಶ್ ಮಾತನಾಡಿದ ಪೋಸ್ಟ್

ಯಶ್ ಮೊದಲೇ ಹೇಳಿದ್ದರು..

‘ಜನರು ಕನ್ನಡ ಸಿನಿಮಾ ನೋಡಲ್ಲ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ. ಒಳ್ಳೆಯ ಕೆಲಸ ಮಾಡಿ, ಒಳ್ಳೆಯ ಚಿತ್ರ ಕೊಟ್ಟರೆ ಕನ್ನಡಿಗರು ಯಾವತ್ತಿಗೂ ಕೈ ಬಿಟ್ಟಿಲ್ಲ ಎಂದು ಒಂದು ದಿನ ನನಗೇ ಅನ್ನಿಸಿತು. ಹೊಸಬರಿಗೆ ಲಾಂಚ್ ಮಾಡಿ ಎಂದು ಕೇಳ್ತಾರೆ. ಆ ರೀತಿಯ ಈವೆಂಟ್​ಗಳಿಂದ ಗಮನ ಸೆಳೆಯಬಹುದೇ ಹೊರತು, ಗೆಲುವು ಸಿಗಲ್ಲ. ಅದು ಸಿಗೋದು ನಮ್ಮ ಕೆಲಸದಿಂದ’ ಎಂದಿದ್ದರು ಯಶ್.

ಇದನ್ನೂ ಓದಿ: ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ಚಿತ್ರವನ್ನು ತಡೆಯೋರೆ ಇಲ್ಲ

‘ಕೆಲಸ ಕಲಿಯೋಣ. ಗುರಿ ಇಟ್ಟುಕೊಳ್ಳೋಣ. ಬೇಡೋದು ಬೇಡ, ತಲೆ ತಗ್ಗಿಸೋದು ಬೇಡ. ಬೇರೆಯವರು ಗೌರವ ಕೊಡುವ ರೀತಿ ದುಡಿಯೋಣ’ ಎಂದಿದ್ದರು ಯಶ್. ಆ ಮಾತು ಈಗ ನಿಜವಾಗಿದೆ. ಜನರು ಒಳ್ಳೆಯ ಚಿತ್ರವನ್ನು ಗೆಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.