‘ಈ ರಸ್ತೆ ನಿಮ್​ ಅಪ್ಪಂದಾ?’.. ಹಾಗೆ ಕ್ಯಾಮೆರಾ ತಿರುಗಿದ್ರೆ; ಇದು ಶಿವಣ್ಣನ ಸಿನಿಮಾದ ಗೂಸ್​ಬಂಪ್ಸ್ ದೃಶ್ಯ  

ಇಂದು (ಮೇ 24) ರಾಜ್​ಕುಮಾರ್ ಜನ್ಮದಿನ. ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಬೆಳಿಗ್ಗೆ ಕುಟುಂಬದವರು ಬಂದು ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದ ಒಂದು ದೃಶ್ಯ ವೈರಲ್ ಆಗಿದೆ .

‘ಈ ರಸ್ತೆ ನಿಮ್​ ಅಪ್ಪಂದಾ?’.. ಹಾಗೆ ಕ್ಯಾಮೆರಾ ತಿರುಗಿದ್ರೆ; ಇದು ಶಿವಣ್ಣನ ಸಿನಿಮಾದ ಗೂಸ್​ಬಂಪ್ಸ್ ದೃಶ್ಯ  
ರಾಜ್​​ಕುಮಾರ್

Updated on: Apr 24, 2025 | 2:06 PM

ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್ (Puneeth Rajkumar) ಸಿನಿಮಾಗಳಲ್ಲಿ ಅವರ ಕುಟುಂಬದ ಪರಂಪರೆ ಹೇಳುವ ಅನೇಕ ಡೈಲಾಗ್​ಗಳಿವೆ. ಈ ರೀತಿಯ ಡೈಲಾಗ್​ ಅಭಿಮಾನಿಗಳು ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕೆ ನಿರ್ದೇಶಕರು ಕೂಡ ಈ ರೀತಿಯ ಡೈಲಾಗ್​ನ ಇಡಲು ಪ್ರಯತ್ನಿಸುತ್ತಾರೆ. ಅನೇಕ ಸಿನಿಮಾಗಳಲ್ಲಿ ಈ ರೀತಿಯ ಘಟನೆಗಳು ಇವೆ. ಶಿವರಾಜ್​ಕುಮಾರ್ ನಟನೆಯ ಸಿನಿಮಾ ಒಂದರ ದೃಶ್ಯ ಈಗ ವೈರಲ್ ಆಗಿದೆ. ಇದರಲ್ಲಿ ಬರೋ ಗೂಸ್​ಬಂಪ್ಸ್ ದೃಶ್ಯ ಅನೇಕರಿಗೆ ಇಷ್ಟ. ಆ ಬಗ್ಗೆ ಇಲ್ಲಿದೆ ವಿವರ.

ಶಿವರಾಜ್​ಕುಮಾರ್ ಅವರು ‘ಕಡ್ಡಿಪುಡಿ’ ಸಿನಿಮಾದಲ್ಲಿ ನಟಿಸಿದ್ದರು. ರಾಧಿಕಾ ಪಂಡಿತ್ ಅವರು ಈ ಚಿತ್ರಕ್ಕೆ ನಾಯಕಿ. ರಂಗಾಯಣ ರಘು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆರಂಭದಲ್ಲಿ ರೌಡಿ ಆಗಿರೋ ಕಥಾ ನಾಯಕ ನಂತರ ಬದಲಾಗುತ್ತಾನೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. 2013ರಲ್ಲಿ ರಿಲೀಸ್ ಆದ ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?

ರೌಡಿಸಂ ಕಥೆ ಹೇಳಲು ದುನಿಯಾ ಸೂರಿ ಎತ್ತಿದ ಕೈ. ಈ ಚಿತ್ರದಲ್ಲೂ ಅಂಥದ್ದೇ ಕಥೆ ಹೇಳಲಾಗಿತ್ತು. ಇದರಲ್ಲಿ ಬರೋ ದೃಶ್ಯ ಒಂದು ಗಮನ ಸೆಳೆದಿತ್ತು. ಕಡ್ಡಿಪುಡಿ (ಶಿವಣ್ಣ) ಹಾಗೂ ಜಿಂಕೆ (ರಂಗಾಯಣ ರಘು) ಕಾರಲ್ಲಿ ಹೋಗುತ್ತಾ ಇರುತ್ತಾರೆ. ಈ ವೇಳೆ ಕೆಲವರು ಬೈಕ್​ನಲ್ಲಿ ಅಡ್ಡ ಆಗುತ್ತಾರೆ.

‘ಗಾಡಿ ಓಡ್ಸೋಕೆ ಬರಲ್ವ’ ಎಂದು ಬೈಕ್​ನವರು ಕೇಳುತ್ತಾರೆ. ‘ನೋಡ್ಕಂಡು ಹೋಗು’ ಎಂದು ಕಡ್ಡಿಪುಡಿ ಹೇಳುತ್ತಾನೆ. ‘ನಿಮ್ ಅಪ್ಪಂದಾ ರೋಡು’ ಎಂದು ಕೇಳಿ ಹೋಗುತ್ತಾರೆ. ಈ ವೇಳೆ ಕ್ಯಾಮೆರಾ ‘ಡಾ ||ರಾಜ್​ಕುಮಾರ್ ರಸ್ತೆ’ ಎಂಬ ಕಡೆ ತಿರುಗುತ್ತದೆ. ಈ ದೃಶ್ಯಕ್ಕೆ ಭರ್ಜರಿ ಸಿಳ್ಳೆ ಬಿದ್ದಿದ್ದವು.

ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್​ಕುಮಾರ್

ಇಂದು (ಏಪ್ರಿಲ್ 24) ರಾಜ್​ಕುಮಾರ್ ಜನ್ಮದಿನ. ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಬೆಳಿಗ್ಗೆ ಕುಟುಂಬದವರು ಬಂದು ರಾಜ್​ಕುಮಾರ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:50 pm, Thu, 24 April 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us