ಹೊಸ ಸಿನಿಮಾ ಒಪ್ಪಿಕೊಂಡ ಶ್ರೇಯಸ್ ಮಂಜು; ಯಂಗ್ ಹೀರೋಗೆ ಜೊತೆಯಾದ ಪ್ರಿಯಾಂಕಾ ಕುಮಾರ್
ವಿಷ್ಣು ಪ್ರಿಯ’ದಲ್ಲಿ ಶ್ರೇಯಸ್ ಕೆ. ಮಂಜು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ನ ಅವರು ಎದುರುನೋಡುತ್ತಿದ್ದಾರೆ. ಹೀಗಿರುವಾಗಲೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
‘ಪಡ್ಡೆಹುಲಿ’, ‘ರಾಣಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ಕೆ. ಮಂಜು (Shreyas K Manju) ಅವರು ಹೊಸ ಸಿನಿಮಾ ಘೋಷಿಸಿದ್ದು, ಇದಕ್ಕಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರಿಯಾಂಕಾ ಕುಮಾರ್ (Priyanka Kumar) ಅವರು ಶ್ರೇಯಸ್ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಮಾರ್ಚ್ 31ರಂದು ಚಿತ್ರದ ಮುಹೂರ್ತ ನಡೆಯುತ್ತಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸಿಗೋ ನಿರೀಕ್ಷೆ ಇದೆ. ಈ ಸಿನಿಮಾ ಕಾಲೇಜ್ ಕಥಾ ಹಂದರ ಹೊಂದಿದೆ.
‘ವಿಷ್ಣು ಪ್ರಿಯ’ದಲ್ಲಿ ಶ್ರೇಯಸ್ ಕೆ. ಮಂಜು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ನ ಅವರು ಎದುರುನೋಡುತ್ತಿದ್ದಾರೆ. ಹೀಗಿರುವಾಗಲೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ದುರ್ಗ’, ‘ನೀಲಿ’ ಧಾರಾವಾಹಿ ಹಾಗೂ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೂರ್ಣಪ್ರಮಾಣದ ನಿರ್ದೇಶಕನಾಗಿ ಇದು ಮೊದಲ ಸಿನಿಮಾ.
ಮಾಸ್ ಎಂಟರ್ಟೇನ್ ಹಾಗೂ ಕಾಲೇಜು ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಶ್ರೇಯಸ್ಗೆ ಜೊತೆಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಹಾಗೂ ‘ಅದ್ದೂರಿ ಲವರ್’ ಸಿನಿಮಾದಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಇದು ಪ್ರಿಯಾಂಕಾ ಅವರಿಗೆ ಮೂರನೇ ಚಿತ್ರ. ಕಾಲೇಜ್ ಕಥೆಯಾದ್ದರಿಂದ ಪ್ರಿಯಾಂಕಾಗೆ ಸಿನಿಮಾ ಹೊಂದಿಕೆ ಆಗುತ್ತದೆ ಅನ್ನೋದು ಸಿನಿಪ್ರಿಯರ ಅಭಿಪ್ರಾಯ.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್ ನಟನೆಯ;ಬ್ಯಾಡ್ ಮ್ಯಾನರ್ಸ್; ಚಿತ್ರದ ಶೂಟಿಂಗ್ ಕಂಪ್ಲೀಟ್: ಯಾವಾಗ ಚಿತ್ರ ರಿಲೀಸ್?
ಏಷ್ಯಾನೆಟ್ ಮೂವೀ ಬ್ಯಾನರ್ನ ಅಡಿಯಲ್ಲಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ 31ರಂದು ಮುಹೂರ್ತ ನೆರವೇರಲಿದೆ. ಏಪ್ರಿಲ್ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲ್ಯಾನ್ ರೂಪಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Tue, 28 March 23