ಎಸ್​ಪಿಬಿಗೆ ಕನ್ನಡದ ಮೇಲಿತ್ತು ವಿಶೇಷ ಪ್ರೀತಿ; ವಿವರಿಸಿದ್ದ ಗಾಯಕ

SP Balasubrahmanyam Birthday: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲಿನ ಅಪಾರ ಪ್ರೀತಿಯನ್ನು ಈ ಲೇಖನ ವಿವರಿಸುತ್ತದೆ. ಅವರ ಕನ್ನಡ ಸಿನಿಮಾ ಹಾಡುಗಳು, ಕನ್ನಡದಲ್ಲಿ "ಎದೆ ತುಂಬು ಹಾಡುವೆನು" ಕಾರ್ಯಕ್ರಮ ನಿರ್ವಹಣೆ ಮತ್ತು ಅವರ ಅಭಿಮಾನಿಗಳೊಂದಿಗಿನ ಬಾಂಧವ್ಯವನ್ನು ಇಲ್ಲಿ ಚರ್ಚಿಸಲಾಗಿದೆ. ಅವರ ಅಪ್ರತಿಮ ಸಂಗೀತ ಕೊಡುಗೆ ಮತ್ತು ಕನ್ನಡ ಭಾಷೆಯ ಮೇಲಿನ ಅಪಾರ ಪ್ರೀತಿಯನ್ನು ನಾವು ನೆನಪಿಸಿಕೊಳ್ಳೋಣ.

ಎಸ್​ಪಿಬಿಗೆ ಕನ್ನಡದ ಮೇಲಿತ್ತು ವಿಶೇಷ ಪ್ರೀತಿ; ವಿವರಿಸಿದ್ದ ಗಾಯಕ
ಎಸ್​ಪಿಬಿ
Edited By:

Updated on: Jun 04, 2025 | 9:52 AM

ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಕೊವಿಡ್ ಸಮಯದಲ್ಲಿ ನಿಧನ ಹೊಂದಿದರು. ಅವರನ್ನು ಕಳೆದುಕೊಂಡು ಸಂಗೀತ ಲೋಕ ಬಡವಾಯಿತು. ಬಾಲಸುಬ್ರಹ್ಮಣ್ಯಂ ಅವರು ಚಿತ್ರರಂಗಕ್ಕೆ ಹಾಗೂ ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಇಂದು (ಜೂನ್ 4) ಜನ್ಮದಿನ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಬಾಲಸುಬ್ರಹ್ಮಣ್ಯಂ ಅವರು ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ತೆಲುಗು ರಾಜ್ಯದಲ್ಲೂ ಕನ್ನಡ ನಾಡಿನ ಬಗ್ಗೆ ಹೆಮ್ಮೆ ಹೊರಹಾಕಿದ್ದರು.

‘ಕನ್ನಡದಲ್ಲಿ ನನಗೆ ಜಾಸ್ತಿ ಅಭಿಮಾನಿಗಳು ಇದ್ದಾರೆ. ಇದನ್ನು ಹೇಳಿದರೆ ಯಾರಾದರೂ ಏನಾದರೂ ಅಂದುಕೊಳ್ಳುತ್ತಾರೋ ಎನಿಸುತ್ತಿತ್ತು. ಮನುಷ್ಯರು ನೆಗೆಟಿವಿಟಿ ಸಿಗುತ್ತದೆಯೇ ಎಂದು ಕಾಣುತ್ತಾ ಇರುತ್ತಾರೆ. ಆದರೆ, ನಾನು ಸಾಕಷ್ಟು ವಿಶಾಲಾವಾಗಿ ಆಲೋಚಿಸುತ್ತೇನೆ. ಎಲ್ಲಾ ಭಾಷೆಯವರು ನನ್ನನ್ನು ಪ್ರೀತಿಸುತ್ತಾರೆ. ಆದರೆ, ಕನ್ನಡದವರು ಹೆಚ್ಚು ಪ್ರೀತಿಸುತ್ತಾರೆ. ಅವರು ಎಲ್ಲಾದರೂ ಸಿಕ್ಕರೆ ನಮಸ್ಕರಿಸುತ್ತಾರೆ’ ಎಂದು ಹೇಳಿದ್ದರು.

‘ಭಾಷೆ ಬಗ್ಗೆ ಕನ್ನಡಿಗರಿಗೆ ವಿಶೇಷ ಪ್ರೀತಿ ಇದೆ. ರಾಜ್​ಕುಮಾರ್ ರೀತಿ ನನಗೂ ಗೌರವ ಸಿಕ್ಕಿದೆ. ರಾಜ್​ಕುಮಾರ್ ಸಿನಿಮಾದಲ್ಲಿ ನಾನು ಹಾಡಿದ್ದೇನೆ ಅನ್ನೋದು ಖುಷಿಯ ವಿಚಾರ. ರಾಜ್​ಕುಮಾರ್ ಅವರು ತರಬೇತಿ ಪಡೆದ ಹಾಡುಗಾರ. ಅವರು ನನ್ನ ಸಿನಿಮಾಗೆ ಹಾಡಿದ್ದರು ಅನ್ನೋದು ಮತ್ತೊಂದು ವಿಶೇಷ’ ಎಂದಿದ್ದರು ಎಸ್​ಪಿಬಿ.

ಇದನ್ನೂ ಓದಿ
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ
‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
ಒಟಿಟಿಯಲ್ಲಿ ರಿಲೀಸ್ ಆದ ಈ ಕಾಮಿಡಿ ಚಿತ್ರವನ್ನು ಮಿಸ್ ಮಾಡಲೇಬೇಡಿ
ಹೈ-ಟೀ ಸಮಾರಂಭದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಂತ್ ನಾಗ್​

ಎಸ್​ಪಿಬಿ ಅವರು ಹಲವು ಭಾಷೆಗಳನ್ನು ಅನಾಯಾಸವಾಗಿ ಮಾತನಾಡುತ್ತಿದ್ದರು. ಅವರು ಕನ್ನಡದಲ್ಲಿ ಇ-ಟಿವಿ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ‘ಎದೆ ತುಂಬು ಹಾಡುವೆನು’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ವೇದಿಕೆ ಮೂಲಕ ಹಲವರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಈಗ ಅವರು ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಎಸ್​ಪಿಬಿ ಜನ್ಮದಿನ; ಒಂದೇ ದಿನ 21 ಹಾಡುಗಳನ್ನು ರೆಕಾರ್ಡ್​ ಮಾಡಿ ದಾಖಲೆ ಮಾಡಿದ್ದ ಗಾಯಕ

ಹಲವು ಭಾಷೆಗಳನ್ನು ಕಷ್ಟಪಟ್ಟಾದರೂ ಕಲಿತು ಮಾತನಾಡಬಹುದು. ಆದರೆ, ಬೇರೆ ಭಾಷೆಯ ಸೊಗಡನ್ನು ಅರ್ಥ ಮಾಡಿಕೊಂಡು ಹಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಎಸ್​ಪಿಬಿಗೆ ಅದು ನೀರು ಕುಡಿದಷ್ಟೇ ಸುಲಭದ ಮಾತಾಗಿತ್ತು. ಅವರು 16 ಭಾಷೆಗಳಲ್ಲಿ ಹಾಡಿ ಭೇಷ್​ ಎನಿಸಿಕೊಂಡರು. ಒಂದೇ ದಿನ ಅವರು 21 ಹಾಡುಗಳನ್ನು ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Wed, 4 June 25