ನಿನ್ನೆ ಮದ್ವೆ, ಇಂದು ಫ್ಯಾನ್ಸ್ಗಾಗಿ ಆಕ್ಷನ್ ಪ್ರಿನ್ಸ್ ಧ್ರುವ ರಿಸೆಪ್ಷನ್! ಎಲ್ಲಿ?
ಬೆಂಗಳೂರು: ನಿನ್ನೆ ಬಹುದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅದ್ಧೂರಿಯಾಗಿ ಕುಟುಂಬಸ್ಥರ ಸಂಮುಖದಲ್ಲಿ ಸಪ್ತಪದಿ ತುಳಿದರು. ಇಂದು ತಮ್ಮ ನೆಚ್ಚಿನ ಅಭಿಮಾನಿಗಳನ್ನು ಸಂತೃಪ್ತಿ ಪಡಿಸಲು ಭರ್ಜರಿ ರಿಸೆಪ್ಷನ್ ಏರ್ಪಡಿಸಿದ್ದಾರೆ. ಎಲ್ಲಿ ಗೊತ್ತಾ? ಮದುವೆ ಮುಂಚೇನೆ ಫ್ಯಾನ್ಸ್ ಗಾಗಿ ರಿಸೆಪ್ಷನ್ ಮಾಡ್ತಿವಿ ಅಂದಿದ್ದ ಧ್ರುವ ಸರ್ಜಾ ಇಂದು ಜೆ. ಪಿ. ನಗರದ ಸಂಸ್ಕೃತ ಬೃಂದಾವನ ಹಾಲ್ ನಲ್ಲಿ ರೆಸೆಪ್ಷನ್ ಏರ್ಪಡಿಸಿದ್ದಾರೆ. ಫ್ಯಾನ್ಸ್ ಗಾಗಿಯೇ ನಡೆಯುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣ ರಿಸೆಪ್ಷನ್ನಲ್ಲಿ ಧ್ರುವ ಸರ್ಜಾ […]
ಬೆಂಗಳೂರು: ನಿನ್ನೆ ಬಹುದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅದ್ಧೂರಿಯಾಗಿ ಕುಟುಂಬಸ್ಥರ ಸಂಮುಖದಲ್ಲಿ ಸಪ್ತಪದಿ ತುಳಿದರು. ಇಂದು ತಮ್ಮ ನೆಚ್ಚಿನ ಅಭಿಮಾನಿಗಳನ್ನು ಸಂತೃಪ್ತಿ ಪಡಿಸಲು ಭರ್ಜರಿ ರಿಸೆಪ್ಷನ್ ಏರ್ಪಡಿಸಿದ್ದಾರೆ. ಎಲ್ಲಿ ಗೊತ್ತಾ?
ಮದುವೆ ಮುಂಚೇನೆ ಫ್ಯಾನ್ಸ್ ಗಾಗಿ ರಿಸೆಪ್ಷನ್ ಮಾಡ್ತಿವಿ ಅಂದಿದ್ದ ಧ್ರುವ ಸರ್ಜಾ ಇಂದು ಜೆ. ಪಿ. ನಗರದ ಸಂಸ್ಕೃತ ಬೃಂದಾವನ ಹಾಲ್ ನಲ್ಲಿ ರೆಸೆಪ್ಷನ್ ಏರ್ಪಡಿಸಿದ್ದಾರೆ. ಫ್ಯಾನ್ಸ್ ಗಾಗಿಯೇ ನಡೆಯುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣ ರಿಸೆಪ್ಷನ್ನಲ್ಲಿ ಧ್ರುವ ಸರ್ಜಾ ಅಭಿಮಾನಿಗಳನ್ನ ವಿಐಪಿ ಅಂತ ಕರೆದಿದ್ದಾರೆ.
ಇನ್ನು ಧ್ರುವ ಸರ್ಜಾ ಮತ್ತು ಪ್ರೇರಣರವರನ್ನು ನೋಡಲು ಅಭಿಮಾನಿಗಳು ಬೆಳಗ್ಗೆಯಿಂದಲೇ ಕಾಯುತ್ತಿದ್ದಾರೆ. ನಿನ್ನೆ ಬೆಳಗ್ಗೆ ವೃಶ್ಚಿಕ ಶುಭ ಲಗ್ನದಲ್ಲಿ ಧ್ರುವ ಪ್ರೇರಣ ಸತಿಪತಿ ಆಗಿದ್ದರು. ಇಂದು ಹೂಗುಚ್ಛ ನೀಡಿ ನೆಚ್ಚಿನ ನಟನಿಗೆ ಶುಭ ಹಾರೈಸಲು ನೂರಾರು ಅಭಿಮಾನಿಗಳು ಬಂದಿದ್ದು, ವಿಶೇಷವಾಗಿ ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತರಾಗಿರುವುದರಿಂದ ಕೆಲವು ಅಭಿಮಾನಿಗಳು ಆಂಜನೇಯ ರೂಪಧಾರಿಗಳಾಗಿ ಬಂದಿದ್ದಾರೆ.
Published On - 12:14 pm, Mon, 25 November 19