ಟಫ್ ಟಾಸ್ಕ್​ನಲ್ಲಿ ಮೋಕ್ಷಿತಾ ಎದುರು ಸೋತ ಮಂಜು; ಮುಖಭಂಗದಿಂದ ಮಾಡಿದ್ದೇನು?

ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಫಿನಾಲೆಗೆ ಹೋಗಲು ಸ್ಪರ್ಧಿಗಳು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಟಾಸ್ಕ್​ಗಳು ಸಹ ಕಠಿಣ ಆಗುತ್ತಲೇ ಸಾಗುತ್ತಿವೆ. ಇದೀಗ ಕಠಿಣವಾದ ಟಾಸ್ಕ್ ಒಂದನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ. ಸತತವಾಗಿ ನೀರು ತುಂಬುತ್ತಿರುವ ತೊಟ್ಟಿಯಲ್ಲಿ ಒಬ್ಬ ಸ್ಪರ್ಧಿ ಮಲಗಬೇಕು, ಮತ್ತೊಬ್ಬ ಸ್ಪರ್ಧಿ ಆ ತೊಟ್ಟಿಯಿಂದ ನೀರನ್ನು ತೆಗೆದುಕೊಂಡು ಹೋಗಿ ದೂರದಲ್ಲಿ ಇರಿಸಿರುವ ಟ್ಯಾಂಕ್​ಗೆ ಸುರಿಯಬೇಕು. ಇದರಲ್ಲಿ ಗೌತಮಿ ಗೆದ್ದಿದ್ದಾರೆ.

ಟಫ್ ಟಾಸ್ಕ್​ನಲ್ಲಿ ಮೋಕ್ಷಿತಾ ಎದುರು ಸೋತ ಮಂಜು; ಮುಖಭಂಗದಿಂದ ಮಾಡಿದ್ದೇನು?
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Jan 10, 2025 | 7:31 AM

‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವ ರೀತಿಯಲ್ಲಿ ಆಟ ಆಡುತ್ತಾರೆ ಎಂದು ಊಹಿಸೋದು ಕಷ್ಟ. ಟಫ್ ಸ್ಪರ್ಧಿ ಎನಿಸಿಕೊಂಡವರು ಆಟ ಆಡುವಾಗ ವೀಕ್ ಎನಿಸಿಕೊಳ್ಳಬಹುದು. ವೀಕ್ ಸ್ಪರ್ಧಿಗಳು ಟಫ್ ಕಾಂಪಿಟೇಟರ್ ಆಗಬಹುದು. ಈಗ ಬಿಗ್ ಬಾಸ್​ನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಮೋಕ್ಷಿತಾ ಅವರಿಗೆ ಹೋಲಿಸಿದರೆ ಮಂಜು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಳ್ಳುತ್ತಾರೆ. ಆದರೆ, ಮೋಕ್ಷಿತಾ ಅವರೇ ಮಂಜುನ ಸೋಲಿಸಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಗೌತಮಿ ಅತ್ತಿದ್ದಾರೆ. ಅವರಿಗೆ ಫಿನಾಲೆ ಟಿಕೆಟ್ ಸಿಗದ ಕಾರಣ ಬೇಸರ ಆಗಿದೆ.

ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಟಬ್ ಮಾದರಿಯ ಆಕೃತಿಯನ್ನು ಗಾರ್ಡನ್ ಏರಿಯಾದಲ್ಲಿ ಇಡಲಾಗಿತ್ತು. ಮೇಲೆ ಅದನ್ನು ಕಂಬಿಗಳಿಂದ ಮುಚ್ಚಲಾಗಿತ್ತು. ಇದರ ಒಳಗೆ ಸ್ಪರ್ಧಿಗಳು ಇಳಿಯಬೇಕು. ಇದರಲ್ಲಿ ನಿರಂತರವಾಗಿ ನೀರು ಬರುತ್ತಾ ಇರುತ್ತದೆ. ತಂಡದ ಮತ್ತೋರ್ವ ಸ್ಪರ್ಧಿ ನೀರನ್ನು ಎತ್ತಿ ಹಾಕಬೇಕು. ಮಂಜು ಅವರು ಟಬ್​ನಲ್ಲಿ ಮಲಗಿದರೆ, ಗೌತಮಿ ನೀರನ್ನು ಎತ್ತಿ ಹಾಕಿದರು. ಅತ್ತ ಭವ್ಯಾ ಅವರು ನೀರನ್ನು ತೆಗೆಯುವ ಕಾಯಕದಲ್ಲಿ ತೊಡಗಿದರೆ ಮೋಕ್ಷಿತಾ ಟಬ್​ನಲ್ಲಿ ಮಲಗಿದರು.

ನೀರು ತುಂಬುತ್ತಾ ಬಂದಂತೆ ಮಂಜು ಅವರಿಗೆ ಉಸಿರುಗಟ್ಟಲು ಆರಂಭ ಆಯಿತು. ಅವರು ಟಾಸ್ಕ್​ನ ಬಿಟ್ಟೇ ಬಿಟ್ಟರು. ಮೋಕ್ಷಿತಾ ಅವರು ಟಾಸ್ಕ್​ನ ಗೆದ್ದರು. ಇದನ್ನು ಭವ್ಯಾ ಸಂಭ್ರಮಿಸಿದರು. ಮೋಕ್ಷಿತಾ ಕೂಡ ಮಹತ್ವದ ಘಟ್ಟದಲ್ಲಿ ಮಂಜು ಎದುರು ಗೆದ್ದೆನಲ್ಲ ಎನ್ನುವ ಖುಷಿಯಲ್ಲಿ ಕುಣಿದರು. ಅವರಿಗೆ ಆನಂದ ಭಾಷ್ಪವೇ ಬಂತು.

ಇದನ್ನೂ ಓದಿ: ‘ಆಗಿದ್ದು ಆಗಿ ಹೋಯ್ತು, ಅದನ್ನು ಬಿಟ್ಟುಬಿಡು’; ಹಳೆಯ ಘಟನೆಯ ಬಗ್ಗೆ ಮೋಕ್ಷಿತಾಗೆ ಧೈರ್ಯ ತುಂಬಿದ ತಾಯಿ

ಈ ಮೊದಲು ಗೌತಮಿ ಅವರು ಮಂಜು ಬಳಿ ‘ನಾನು ಮಲಗುತ್ತೇನೆ. ನೀವು ನೀರನ್ನು ಎತ್ತು ಹಾಕಿ. ನೀರನ್ನು ತೆಗೆಯೋದು ಈ ಟಾಸ್ಕ್​ನಲ್ಲಿ ಮುಖ್ಯವಾಗುತ್ತದೆ’ ಎಂದಿದ್ದರು. ಆದರೆ, ಇದಕ್ಕೆ ಮಂಜು ಒಪ್ಪಲೇ ಇಲ್ಲ. ಇದು ಕೂಡ ಟಾಸ್ಕ್ ಸೋಲಲು ಕಾರಣ ಆಯಿತು ಎಂಬುದು ಗೌತಮಿ ಅಭಿಪ್ರಾಯ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಸೋತ ಮಂಜು ಅವರು ಗೌತಮಿಯನ್ನು ಸಮಾಧಾನ ಮಾಡುವ ಪ್ರಯತ್ನದಲ್ಲೇ ಕಳೆದು ಹೋದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ