ದಚ್ಚುಗೆ ಫ್ಯಾನ್ಸ್ ಡಿಮ್ಯಾಂಡ್.. ಸಿನಿಮಾದಲ್ಲಿ ಕುದುರೆ ರೇಸಿಂಗ್ ಮಾಡ್ತಾರಾ ಡಿ ಬಾಸ್!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೆಸರು ಕೇಳಿದ್ರೆ ಸಾಕು ಫ್ಯಾನ್ಸ್ ಓ… ಅಂತಾ ಮನಬಿಚ್ಚಿ ಕೂಗ್ತಾರೆ. ‘ನಮ್ಮ ದಚ್ಚು ಅಣ್ಣಾ’ ಅಂತಾ ಮುಗಿಬೀಳ್ತಾರೆ. ಇದೀಗ ಅದೇ ಅಭಿಮಾನಿಗಳು ದರ್ಶನ್ ಎದುರು ಡಿಮ್ಯಾಂಡ್ವೊಂದನ್ನ ಇಟ್ಟಿದ್ದಾರೆ. ‘ನಿಮ್ಮನ್ನ ಆ ಸೀನ್ನಲ್ಲಿ ನೋಡೋಕೆ ಕಾತರರಾಗಿದ್ದೇವೆ’ ಅಂತಾ ಮನದಾಳ ಬಿಚ್ಚಿಟ್ಟಿದ್ದಾರೆ. ಸ್ಕ್ರೀನ್ ಮೇಲೆ ಡೈಲಾಗ್ ಮೇಲೆ ಡೈಲಾಗ್ ಹೊಡಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಲನ್ಗಳನ್ನ ಚಚ್ಚಿ ಹಾಕ್ತಿದ್ರೆ, ಫ್ಯಾನ್ಸ್ಗೆ ಪುಳಕ. ‘ಏನ್ ಖದರ್.. ಏನ್ ಫೈಟು.. ಏನ್ ಌಕ್ಟಿಂಗ್’ ಅಂತಾ ಸಿಳ್ಳೆ ಹೊಡಿತಾರೆ. […]
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೆಸರು ಕೇಳಿದ್ರೆ ಸಾಕು ಫ್ಯಾನ್ಸ್ ಓ… ಅಂತಾ ಮನಬಿಚ್ಚಿ ಕೂಗ್ತಾರೆ. ‘ನಮ್ಮ ದಚ್ಚು ಅಣ್ಣಾ’ ಅಂತಾ ಮುಗಿಬೀಳ್ತಾರೆ. ಇದೀಗ ಅದೇ ಅಭಿಮಾನಿಗಳು ದರ್ಶನ್ ಎದುರು ಡಿಮ್ಯಾಂಡ್ವೊಂದನ್ನ ಇಟ್ಟಿದ್ದಾರೆ. ‘ನಿಮ್ಮನ್ನ ಆ ಸೀನ್ನಲ್ಲಿ ನೋಡೋಕೆ ಕಾತರರಾಗಿದ್ದೇವೆ’ ಅಂತಾ ಮನದಾಳ ಬಿಚ್ಚಿಟ್ಟಿದ್ದಾರೆ.
ಸ್ಕ್ರೀನ್ ಮೇಲೆ ಡೈಲಾಗ್ ಮೇಲೆ ಡೈಲಾಗ್ ಹೊಡಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಲನ್ಗಳನ್ನ ಚಚ್ಚಿ ಹಾಕ್ತಿದ್ರೆ, ಫ್ಯಾನ್ಸ್ಗೆ ಪುಳಕ. ‘ಏನ್ ಖದರ್.. ಏನ್ ಫೈಟು.. ಏನ್ ಌಕ್ಟಿಂಗ್’ ಅಂತಾ ಸಿಳ್ಳೆ ಹೊಡಿತಾರೆ. ‘ದಚ್ಚಣ್ಣನ್ನ ಮೀರಿಸೋರು ಯಾರು ಇಲ್ಲ’ ಅಂತಾ ಗುಣಗಾನ ಮಾಡ್ತಾರೆ. ಹೀಗೆ ದರ್ಶನ್ ಌಕ್ಟಿಂಗ್ ಟ್ಯಾಲೆಂಟ್ನಿಂದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ನಿರ್ಮಾಪಕರೊಬ್ಬರ ಮಾತಿಗೆ ಇಂಪ್ರೆಸ್ ಆದ ಫ್ಯಾನ್ಸ್, ದಚ್ಚು ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.
ಕನ್ನಡಕ್ಕೆ ಹಿಟ್ ಸಿನಿಮಾಗಳನ್ನ ಕೊಟ್ಟ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ದರ್ಶನ್ ಬಗ್ಗೆ ಮಾತ್ನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಜತೆ ಚಿತ್ರ ಮಾಡೋ ಆಸೆ ವ್ಯಕ್ತಪಡಿಸಿದ್ದಾರೆ. ಕುದುರೆ ರೇಸ್ ಕುರಿತಾದ ಕ್ರೀಡೆ ಆಧಾರಿತ ಸಿನಿಮಾ ನಿರ್ಮಿಸೋ ಕನಸನ್ನ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಇದು ದಚ್ಚು ಅಭಿಮಾನಿಗಳನ್ನ ಪುಳಕಗೊಳಿಸಿದೆ.
ದರ್ಶನ್ಗೆ ಚಿತ್ರ ಮಾಡ್ತೀನಿ ಅಂತಾ ನಿರ್ಮಾಪಕ ಪುಷ್ಕರ್ ಟ್ವೀಟ್ ಮಾಡಿದ ಬಳಿಕ ದಾಸನ ಫ್ಯಾನ್ಸ್ ಟ್ವಿಟ್ಟರ್ನಲ್ಲಿ ಅಭಿಯಾನ ಸ್ಟಾರ್ಟ್ ಮಾಡಿದ್ದಾರೆ. ಹಾರ್ಸ್ ರೇಸಿಂಗ್ ಸ್ಟೋರಿಯಲ್ಲಿ ದಚ್ಚು ನೋಡಲು ಕಾತರರಾಗಿದ್ದೇವೆ ಅಂತಾ ಮನದಾಳ ಹಂಚಿಕೊಂಡಿದ್ದಾರೆ. ಅಲ್ಲದೆ, ತಮ್ಮ ಬೇಡಿಕೆ ಈಡೇರಿಸುವಂತೆ ದರ್ಶನ್ರನ್ನ ಕೇಳ್ತಿದ್ದಾರೆ.
Published On - 10:51 am, Tue, 19 November 19