ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ಗೆ ಕುಂಬ್ಲೆ ಹೊಸ ಚಾಲೆಂಜ್!
ಪ್ರತಿ ವರ್ಷ ಕನ್ನಡ ಹಬ್ಬ ಬಂದ್ರೆ ಸೆಲೆಬ್ರಿಟಿಗಳು ಭಿನ್ನ ವಿಭಿನ್ನವಾಗಿ ಆಚರಿಸುತ್ತಾರೆ. ಈ ಬಾರಿಯೂ ಕನ್ನಡದ ಘಟಾನುಘಟಿಗಳು ಭಿನ್ನವಾಗಿ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದು, ಕವನ ಓದುವುರ ಮೂಲಕ ಕನ್ನಡ ಪ್ರೇಮ ಸಾರುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಅಂದ್ರೆ, ಇಡೀ ಕರುನಾಡು ಹಬ್ಬದಂತೆ ಆಚರಿಸುತ್ತೆ. ಅದ್ರಲ್ಲೂ, ಕನ್ನಡ ಚಿತ್ರರಂಗದವರಂತೂ ಕನ್ನಡ ಭಾಷೆ. ನಾಡು ನುಡಿ ಬಗ್ಗೆ ಪುಂಕಾನುಪುಂಕವಾಗಿ ಡೈಲಾಗ್ ಹೊಡೆದು, ಕನ್ನಡರಿಗರ ಭಾಷಾಭಿಮಾನ ಬಡಿದೆಬ್ಬಿಸೋ ಹಾಡುಗಳ ಮೂಲಕ ಮಾತೃಭಾಷಾ ಪ್ರೇಮ ಮೆರೀತಿದ್ದಾರೆ. ಇಷ್ಟು ದಿನ ತೆರೆ ಮೇಲಷ್ಟೇ ಸೀಮಿತವಾಗಿದ್ದ ಕನ್ನಡ […]
ಪ್ರತಿ ವರ್ಷ ಕನ್ನಡ ಹಬ್ಬ ಬಂದ್ರೆ ಸೆಲೆಬ್ರಿಟಿಗಳು ಭಿನ್ನ ವಿಭಿನ್ನವಾಗಿ ಆಚರಿಸುತ್ತಾರೆ. ಈ ಬಾರಿಯೂ ಕನ್ನಡದ ಘಟಾನುಘಟಿಗಳು ಭಿನ್ನವಾಗಿ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದು, ಕವನ ಓದುವುರ ಮೂಲಕ ಕನ್ನಡ ಪ್ರೇಮ ಸಾರುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಅಂದ್ರೆ, ಇಡೀ ಕರುನಾಡು ಹಬ್ಬದಂತೆ ಆಚರಿಸುತ್ತೆ. ಅದ್ರಲ್ಲೂ, ಕನ್ನಡ ಚಿತ್ರರಂಗದವರಂತೂ ಕನ್ನಡ ಭಾಷೆ. ನಾಡು ನುಡಿ ಬಗ್ಗೆ ಪುಂಕಾನುಪುಂಕವಾಗಿ ಡೈಲಾಗ್ ಹೊಡೆದು, ಕನ್ನಡರಿಗರ ಭಾಷಾಭಿಮಾನ ಬಡಿದೆಬ್ಬಿಸೋ ಹಾಡುಗಳ ಮೂಲಕ ಮಾತೃಭಾಷಾ ಪ್ರೇಮ ಮೆರೀತಿದ್ದಾರೆ.
ಇಷ್ಟು ದಿನ ತೆರೆ ಮೇಲಷ್ಟೇ ಸೀಮಿತವಾಗಿದ್ದ ಕನ್ನಡ ಪ್ರೇಮ, ಈ ಬಾರಿ ಕನ್ನಡದ ಸೆಲೆಬ್ರಿಟಿಗಳು ವಿಶೇಷವಾಗಿ ಕನ್ನಡ ಹಬ್ಬ ಆಚರಿಸುವಂತೆ ಮಾಡಿದೆ. ಅದುವೇ ಚಾಲೆಂಜ್ ಸ್ವೀಕರಿಸೋ ಮೂಲಕ ಕನ್ನಡ ಕವನ ವಾಚನ ಮಾಡೋದು.
ಕುಂಬ್ಲೆಗೆ ಚಾಲೆಂಜ್ ಹಾಕಿದ್ದ ಗೋಲ್ಡನ್ ಸ್ಟಾರ್: ಕವನ ಓದುವ ಸವಾಲು ಇದೀಗ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಹತ್ತಿರ ಬಂದಿದ್ದು, ನಟ ಗಣೇಶ್, ಅನಿಲ್ ಕುಂಬ್ಳೆಗೆ ಈ ಸವಾಲು ಹಾಕಿದ್ರು. ಇದನ್ನು ಯಶಸ್ವಿಯಾಗಿ ಪೂರೈಸಿದ ಅನಿಲ್ ಕುಂಬ್ಳೆ, ಸುದೀಪ್, ಪುನೀತ್ ವಿಜಯ್ ಪ್ರಕಾಶ್ ರಿಗೆ ಚಾಲೆಂಜ್ ನೀಡಿದ್ದಾರೆ.
ಕುವೆಂಪು ಕವನ ವಾಚಿಸಿದ ಅನಿಲ್ ಕುಂಬ್ಲೆ: ಅನಿಲ್ ಕುಂಬ್ಳೆ ರಾಷ್ಟ್ರಕವಿ ಕುವೆಂಪು ಅವರ, ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು..’ ಸಾಲುಗಳನ್ನ ಹಾಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಚಾಲೆಂಜ್ ಅನ್ನು ಮುಂದುವರಿಸಬೇಕೆಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್ ಪುನೀತ್ ರಾಜ್ ಕುಮಾರ್ ಹಾಗೂ ವಿಜಯ್ ಪ್ರಕಾಶ್ ರಿಗೆ ಕೇಳಿಕೊಳ್ಳುತ್ತೇನೆಂದು ಸವಾಲ್ ಎಸೆದಿದ್ದಾರೆ.
#poetryreadingchallenge @Official_Ganesh. Hope you all like it. Passing this challenge to @KicchaSudeep @PuneethRajkumar @rvijayprakash ?? pic.twitter.com/N7JsMFKAec
— Anil Kumble (@anilkumble1074) November 15, 2019
ರಚನೆ : ಕುವೆಂಪು
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ!
ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ , ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ. ।।ಎಲ್ಲಾದರೂ ಇರು ।।
ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಪೆಂಪಿನ ಬನವಾಸಿಗೆ ಕರಗುವ ಮನ ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ ಜೋಗದ ಜಲಪಾತದಿ ಧುಮುಕುವ ಮನ ಮಲೆನಾಡಿಗೆ ಹೊಂಪುಳಿ ಹೋಗುವ ಮನ ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ, ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ ರಸರೋಮಂಚನಗೊಳುವ ತನುಮನ ಎಲ್ಲಿದ್ದರೆ ಏನ್ ಎಂತ್ತಿದ್ದರೆ ಏನ್ ಎಂದೆಂದಿಗೂ ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಇದಕ್ಕೂ ಮುಂಚೆ ಈ ಸವಾಲನ್ನ ನಟ ಯಶ್, ನಿರ್ದೇಶಕ ನಾಗಾಭರಣ, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ರಿಗೆ ನೀಡಿದ್ದರು. ಇದೀಗ ಈ ಚಾಲೆಂಜ್ ನ್ನು ಕುಂಬ್ಳೆ ಕಿಚ್ಚನಿಗೆ ನೀಡಿದ್ದು, ಅದನ್ನು ಕಿಚ್ಚು ಯಾವು ಕನ್ನಡ ಕವನ ಹೇಳುತ್ತಾರೆಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Published On - 7:27 am, Sat, 16 November 19