AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲೆಂಜ್ ಹಾಕಿ ‘ಸ್ವಾತಿ ಮುತ್ತು’ ಚಿತ್ರ ಮಾಡಿದ್ದ ಸುದೀಪ್

Kichcha Sudeep: ಸ್ಟಾರ್ ಹೀರೋಗಳು ಸಾಮಾನ್ಯವಾಗಿ ಆಕ್ಷನ್, ರೊಮ್ಯಾನ್ಸ್ ಇರುವ ಸಿದ್ಧ ಸೂತ್ರದ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಟನೆಗೆ ಸವಾಲು ಎದುರಾಗುವ ಪಾತ್ರಗಳನ್ನು ಅಪ್ಪಿ ತಪ್ಪಿಯೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ಸುದೀಪ್ ಹಾಗಲ್ಲ. ಅವರು ಕಮರ್ಶಿಯಲ್ ಸಿನಿಮಾಗಳ ಜೊತೆಗೆ ನಟನೆಗೆ ಸವಾಲೆಸೆಯುವ ಪಾತ್ರಗಳನ್ನು ತಾವೇ ಹುಡುಕಿಕೊಂಡು ಹೋಗಿ ನಟಿಸುತ್ತಿದ್ದರು. ‘ಸ್ವಾತಿಮುತ್ತು’ ಸಿನಿಮಾ ಅದಕ್ಕೊಂದು ಉದಾಹರಣೆ.

ಚಾಲೆಂಜ್ ಹಾಕಿ ‘ಸ್ವಾತಿ ಮುತ್ತು’ ಚಿತ್ರ ಮಾಡಿದ್ದ ಸುದೀಪ್
Swathi Muthu
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Feb 17, 2025 | 8:00 AM

ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರನ್ನು ಆರಾಧಿಸುವ ಅನೇಕ ಕಲಾವಿದರಿದ್ದಾರೆ. ‘ಸ್ಪರ್ಶ’, ‘ಹುಚ್ಚ’ ಇಂದ ಹಿಡಿದು ‘ಮ್ಯಾಕ್ಸ್’ ಸಿನಿಮಾವರೆಗೆ ಸುದೀಪ್ ಅನೇಕ ಹಿಟ್ಗಳನ್ನು ನೀಡಿದ್ದಾರೆ. ಇದರಲ್ಲಿ ‘ಸ್ವಾತಿ ಮುತ್ತು’ ಚಿತ್ರ ಕೂಡ ಒಂದು. ಇದರ ಬಗ್ಗೆ ಸುದೀಪ್ ಅವರು ಒಂದು ಸ್ವಾರಸ್ಯಕರ ಘಟನೆ ಹೇಳಿದ್ದರು. ಚಾಲೆಂಜ್ ಆಗಿ ಸ್ವೀಕರಿಸಿ ಸುದೀಪ್ ಅವರು ಈ ಸಿನಿಮಾ ಮಾಡಿದ್ದರು ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

1986ರಲ್ಲಿ ತೆಲುಗಿನಲ್ಲಿ ಬಂದ ‘ಸ್ವಾತಿ ಮುತ್ಯಂ’ ಚಿತ್ರದ ರಿಮೇಕ್ ಆಗಿ ‘ಸ್ವಾತಿ ಮುತ್ತು’ ಸಿನಿಮಾ ಮೂಡಿ ಬಂತು. ಮೂಲ ಸಿನಿಮಾದಲ್ಲಿ ಕಮಲ್ ಹಾಸನ್ ಅವರು ನಟಿಸಿದ್ದರು. ಅವರ ನಟನೆಯನ್ನು ಮ್ಯಾಚ್ ಮಾಡಬೇಕು ಎಂದರೆ ನಿಜಕ್ಕೂ ಚಾಲೆಂಜಿಂಗ್. ಆದರೆ, ಈ ಚಾಲೆಂಜ್ನ ರಿಮೇಕ್ ಮಾಡುತ್ತೇನೆ ಎಂದಾಗ ಸುದೀಪ್ ಅವರು ಒಪ್ಪಿಕೊಂಡು ನಟಿಸಿದರು. ಈ ಮೂಲಕ ಭೇಷ್ ಎನಿಸಿಕೊಂಡರು.

View this post on Instagram

A post shared by CM (@cini_mad)

ಈ ಬಗ್ಗೆ ಮಾತನಾಡಿದ್ದ ಸುದೀಪ್, ‘ಒಂದು ಕಡೆ ಎಲ್ಲರೂ ಸೇರುತ್ತಾರೆ. ಆಗ ಕಮಲ್ ಹಾಸನ್ ಟಾಪಿಕ್ ಬರುತ್ತದೆ. ಕಮಲ್ ಹಾಸನ್ ಬಗ್ಗೆ ಹೊಗಳಿದಾಗ ಖುಷಿ ಆಗುತ್ತದೆ. ನಮ್ಮಲ್ಲಿ ಒಬ್ಬರೂ ಹುಟ್ಟಿಲ್ಲ ಎಂಬ ಸುದ್ದಿ ಬರುತ್ತದೆ. ನಮ್ಮಲ್ಲಿ ಇದಾರೆ. ಆದರೆ, ನೀವ್ಯಾಕೆ ಏಕೆ ಆ ರೀತಿಯ ಕಥೆ ಬರೆಯುವುದಿಲ್ಲ ಎಂದು ಕೇಳಲಾಯಿತು. ನಿಮ್ಮ ಕೈಯಲ್ಲಿ ಆಗುತ್ತದೆಯೇ ಎನ್ನುವ ಪ್ರಶ್ನೆ ಬಂತು. ಅದಕ್ಕೆ ನಾನು ಮಾಡುತ್ತೇನೆ ಎಂದೆ. ನಾವು ಚೂಸ್ ಮಾಡಿದ್ದನ್ನು ಮಾಡಬೇಕು ಎಂದು ಅಂದರು. ಓಕೆ ಎಂದೆ. ಆಗ ಅವರು ‘ಸ್ವಾತಿ ಮುತ್ತು’ ಆಯ್ಕೆ ಮಾಡಿದರು’ ಎಂದಿದ್ದರು ಸುದೀಪ್.

ಇದನ್ನೂ ಓದಿ:ಮ್ಯಾಚ್ ಮುಗಿಸಿ ಮೆಟ್ರೋದಲ್ಲಿ ಬಂದ ಕಿಚ್ಚ ಸುದೀಪ್ ಆ್ಯಂಡ್ ಟೀಂ; ಇಲ್ಲಿದೆ ವಿಡಿಯೋ

ಕಮಲ್ ಹಾಸನ್ ಅವರ ವಿಚಾರ ಬಂದಿದ್ದರಿಂದಲೇ ಅವರ ನಟನೆಯ ಸಿನಿಮಾ ಆಯ್ಕೆ ಮಾಡಲಾಯಿತು. ‘ಸ್ವಾಮಿ ಮುತ್ಯಂ’ ಚಿತ್ರವನ್ನು ತೆಗೆದುಕೊಂಡು ರಿಮೇಕ್ ಮಾಡಲಾಯಿತು. ‘ಸ್ವಾತಿ ಮುತ್ತು’ ಸಿನಿಮಾ 2003ರಲ್ಲಿ ರಿಲೀಸ್ ಆಯಿತು. ಸುದೀಪ್ ಅವರ ನಟನೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಕೇಳಿ ಬಂತು.

ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು. ಸುದೀಪ್ ಜೊತೆ ಮೀನಾ, ಕಿಶನ್ ಶ್ರೀಕಾಂತ್ ಮೊದಾದವರು ನಟಿಸಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗಿವೆ. ಸುದೀಪ್ ಅವರಿಗೆ ಈ ಚಿತ್ರದ ನಟನೆಗೆ ಫಿಲ್ಮ್ ಫೇರ್ ಸೌತ್ ಅವಾರ್ಡ್ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ