‘ಆನಂದ್’ ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದಿತ್ತು ಫನ್ನಿ ಘಟನೆ; ವಿವರಿಸಿದ ಸುಧಾರಾಣಿ  

Anand Movie: ಸುಧಾರಾಣಿ ಅವರು ಆನಂದ್ ಚಿತ್ರದ ‘ನೀಲ ಮೇಘ..’ ಹಾಡಿನ ಚಿತ್ರೀಕರಣದ ವೇಳೆ ನಡೆದ ಒಂದು ಫನ್ನಿ ಘಟನೆಯನ್ನು ವಿವರಿಸಿದ್ದಾರೆ. ಶಿವರಾಜ್ ಕುಮಾರ್ ಅವರೊಂದಿಗಿನ ದೃಶ್ಯದಲ್ಲಿ ಅವರು ತಡವಾಗಿ ಅರ್ಥಮಾಡಿಕೊಂಡ ಒಂದು ವಿಷಯ ಮತ್ತು ನಿರ್ದೇಶಕರ ಸಹಾಯದ ಬಗ್ಗೆ ಮಾತನಾಡಿದ್ದಾರೆ.

‘ಆನಂದ್’ ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದಿತ್ತು ಫನ್ನಿ ಘಟನೆ; ವಿವರಿಸಿದ ಸುಧಾರಾಣಿ  
ಶಿವಣ್ಣ-ಸುಧಾರಾಣಿ
Updated By: ರಾಜೇಶ್ ದುಗ್ಗುಮನೆ

Updated on: Jun 25, 2025 | 8:19 AM

ನಟಿ ಸುಧಾರಾಣಿ (Sudharani) ಅವರು ಚಿತ್ರರಂಗಕ್ಕೆ ಹೀರೋಯಿನ್​ ಆಗಿ ಬಂದು ಬರೋಬ್ಬರಿ 39 ವರ್ಷಗಳು ಕಳೆದಿವೆ. ಅವರು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಬಾಲಕಲಾವಿದೆಯಾಗಿ, ನಟಿಯಾಗಿ, ಪೋಷಕ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದಾರೆ. ಸುಧಾರಾಣಿ ಅವರು ಈ ಮೊದಲು ‘ಆನಂದ್’ ಸಿನಿಮಾದ ಒಂದು ಫನ್ನಿ ಘಟನೆ ಬಗ್ಗೆ ವಿವರಿಸಿದ್ದರು. ಅವರಿಗೆ ಕಾಡಿದ ಅನುಮಾನದ ಬಗ್ಗೆ ಹೇಳಿದ್ದರು. ಕೊನೆಗೆ ನಿರ್ದೇಶಕರೇ ಬಂದು ಅನುಮಾನ ಬಗೆಹರಿಸಿದ್ದರು.

‘ಆನಂದ್’ ಸಿನಿಮಾ ಬಂದಿದ್ದು 1986ರಲ್ಲಿ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ಸುಧಾರಾಣಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಜೇಶ್, ತಾರಾ, ಜಯಂತಿ, ಉದಯ್ ಶಂಕರ್ ಮೊದಲಾದವರು ನಟಿಸಿದ್ದರು. ಈ ಸಿನಿಮಾಗೆ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಹಾಡಿನ ಶೂಟ್ ವೇಳೆ ನಡೆದ ಘಟನೆ ಬಗ್ಗೆ ಸುಧಾರಾಣಿ ಮಾತನಾಡಿದ್ದರು.

ಇದನ್ನೂ ಓದಿ
‘ಅದು ನಡೆದಿಲ್ಲ’; ಹಾರ್ದಿಕ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಇಶಾ ಮಾತು
ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಖಡಕ್ ಟೈಟಲ್
ಫಸ್ಟ್​ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

1986ರ ಜೂನ್ 19ರಂದು ‘ಆನಂದ್’ ಸಿನಿಮಾ ರಿಲೀಸ್ ಆಯಿತು. ಅಂದರೆ ಸುಧಾರಾಣಿ ವೃತ್ತಿ ಬದುಕಿಗೆ ಈಗ 39 ವರ್ಷ. ಅವರು ಚಿತ್ರದ ‘ನೀಲ ಮೇಘ..’ ಹಾಡಿನ ಶೂಟ್ ಬಗ್ಗೆ ವಿವರಿಸಿದ್ದರು. ‘ನೀಲ ಮೇಘ ಶ್ಯಾಮ ಸಾಂಗ್ ಶೂಟ್ ನಡೆಯುತ್ತಿತ್ತು. ಶಿವಣ್ಣ ಬಂದು ನನ್ನ ಭುಜದ ಮೇಲೆ ಕೈ ಇಡೋ ದೃಶ್ಯ. ಅದಕ್ಕೆ ನಾನು ಒಮ್ಮೆ ಮೈ ನಡುಗಿಸಬೇಕಿತ್ತು. ಆದರೆ, ಅದನ್ನು ಯಾಕೆ ಹಾಗೆ ಮಾಡಬೇಕು ಎಂದು ನನಗೆ ತಿಳಿಯಲಿಲ್ಲ. ನನಗೆ ಗೊತ್ತಾದಂತೆ ನಾನು ಮಾಡಿದೆ’ ಎಂದಿದ್ದರು ಅವರು.

ಇದನ್ನೂ ಓದಿ: ‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್

‘ಹಾಗೆ ಮಾಡಬಾರದು ಎಂದು ಡ್ಯಾನ್ಸ್ ಮಾಸ್ಟರ್ ಹೇಳಿಕೊಟ್ಟರು. ಸಿಂಗೀತಂ ಅವರು ದೂರದಿಂದ ಕುಳಿತು ನೋಡುತ್ತಿದ್ದರು. ಅವರು ಬಂದು ಹೇಗೆ ಎಂದು ಹೇಳಿಕೊಟ್ಟರು’ ಎಂದು ಅವರು ಹೇಳಿದ್ದರು. ಸುಧಾರಾಣಿ ಅವರಿಗೆ ಈಗಲೂ ಬೇಡಿಕೆ ಇದೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ತಮಗೆ ಹೊಂದುವಂಥ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಅವರಿಗೆ ಇಷ್ಟ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Wed, 25 June 25