‘ಅಪ್ಪನಂತೆ ಕಾಣಿಸಿದರು’; ಅಚ್ಯುತ್​ ಕುಮಾರ್​ನ ಹಾಡಿ ಹೊಗಳಿದ ನಟಿ ನಯನತಾರಾ

ಅಚ್ಯುತ್ ಕುಮಾರ್ ಅವರು ನಿರ್ವಹಿಸುವ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುತ್ತಾರೆ. ಸದಾ ಸಿಂಪಲ್ ಆಗಿ ಇರೋಕೆ ಇಷ್ಟಪಡುತ್ತಾರೆ. ಅವರು ಸೆಟ್​ನಲ್ಲಿ ಇರುತ್ತಿದ್ದ ರೀತಿ, ಅವರ ನಟನೆ ಎಲ್ಲವೂ ನಟಿ ನಯನತಾರಾಗೆ ಇಷ್ಟ ಆಗಿದೆ.

‘ಅಪ್ಪನಂತೆ ಕಾಣಿಸಿದರು’; ಅಚ್ಯುತ್​ ಕುಮಾರ್​ನ ಹಾಡಿ ಹೊಗಳಿದ ನಟಿ ನಯನತಾರಾ
ನಯನತಾರಾ-ಅಚ್ಯುತ್ ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on:Jan 05, 2024 | 11:11 AM

ನಯನತಾರಾ (Nayanthara) ಅವರು ಪಾತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಬಯಸುತ್ತಾರೆ. ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿ, ಅದು ಹಿಟ್ ಆದ ಬಳಿಕವೂ ಹೊಸಬರ ಜೊತೆ ನಯನತಾರಾ ಕೆಲಸ ಮಾಡುತ್ತಾರೆ. ಇದು ಅವರ ಸ್ಪೆಷಾಲಿಟಿ.ಸಡಿಸೆಂಬರ್​ನಲ್ಲಿ ಅವರ ನಟನೆಯ ‘ಅನ್ನಪೂರ್ಣಿ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಒಟಿಟಿಯಲ್ಲೂ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಹಾಗೂ ನಯನತಾರಾ ಅಪ್ಪ-ಮಗಳ ಪಾತ್ರ ಮಾಡಿದ್ದಾರೆ. ಅವರ ನಟನೆಯನ್ನು ನಯನತಾರಾ ಹೊಗಳಿದ್ದಾರೆ.

ಅಚ್ಯುತ್ ಕುಮಾರ್ ಅವರು ಹಲವು ವರ್ಷಗಳಿಂದ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ನಿರ್ವಹಿಸುವ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುತ್ತಾರೆ. ಸದಾ ಸಿಂಪಲ್ ಆಗಿ ಇರೋಕೆ ಇಷ್ಟಪಡುತ್ತಾರೆ. ಅವರು ಸೆಟ್​ನಲ್ಲಿ ಇರುತ್ತಿದ್ದ ರೀತಿ, ಅವರ ನಟನೆ ಎಲ್ಲವೂ ನಟಿ ನಯನತಾರಾಗೆ ಇಷ್ಟ ಆಗಿದೆ. ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಅನ್ನಪೂರ್ಣಿ’ ಚಿತ್ರದಲ್ಲಿ ನಯನತಾರಾ ತಂದೆ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ನಿರ್ದೇಶಕರಿಗೆ ಗೊಂದಲ ಇತ್ತು. ದೊಡ್ಡ ಸ್ಟಾರ್​​ಗಳ ಹೆಸರು ಲಿಸ್ಟ್​ನಲ್ಲಿ ಇತ್ತು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ನಿರ್ದೇಶಕರು ಫೈನಲ್ ಮಾಡಿದರು. ‘ಈ ಮೊದಲ ಸಿನಿಮಾಗಳಲ್ಲಿ ನನ್ನ ತಂದೆಯ ಪಾತ್ರವನ್ನು ಅವರು ಮಾಡಿರಬಾರದು. ಅಂಥ ಕಲಾವಿದರನ್ನು ಹುಡುಕುತ್ತಿದ್ದೆವು. ಕೊನೆಗೆ ಅಚ್ಯುತ್​ ಕುಮಾರ್ ಹೆಸರನ್ನು ಫೈನಲ್ ಮಾಡಿದೆವು’ ಎಂದರು ನಯನತಾರಾ.

View this post on Instagram

A post shared by VSV Cinemas (@vsvcinemas)

ಇದನ್ನೂ ಓದಿ: ನಯನತಾರಾ ಬರ್ತ್​ಡೇಗೆ ಉಡುಗೊರೆಯಾಗಿ ಸಿಕ್ತು 3 ಕೋಟಿ ರೂಪಾಯಿ ಕಾರು; ಕೊಟ್ಟಿದ್ದು ಯಾರು?

‘ಸಿನಿಮಾದಲ್ಲಿ ತಂದೆ ಪಾತ್ರ ಯಾವ ರೀತಿ ಇದೆಯೋ ಅದೇ ರೀತಿ ಅಚ್ಯುತ್ ಅವರು ಸಿನಿಮಾ ಸೆಟ್​​ನಲ್ಲೂ ಇರುತ್ತಿದ್ದರು. ತುಂಬಾನೇ ಗಂಭೀರವಾಗಿ ಇರುತ್ತಿದ್ದರು. ಊಟ ಆಯ್ತಾ ಎಂದು ಕೇಳಿದರೆ ಹೌದು ಎಂದು ಕೂಡ ಹೇಳುತ್ತಿರಲಿಲ್ಲ. ಮುಖದಲ್ಲೇ ಸನ್ನೆ ಮಾಡುತ್ತಿದ್ದರು. ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಅವರಿಗೆ ತಮಿಳು ಬರುವುದಿಲ್ಲ. ಆದರೆ, ಅವರ ಪರ್ಫಾರ್ಮೆನ್ಸ್ ಮಾಡಿದ್ದು ಅದ್ಭುತವಾಗಿತ್ತು. ನನಗೆ ತಂದೆ ರೀತಿಯೇ ಫೀಲ್ ಆಯಿತು’ ಎಂದಿದ್ದಾರೆ ನಯನತಾರಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Fri, 5 January 24