Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಸಿನಿಮಾ ಮಾಡಿದ್ದ ದೀಪಿಕಾ ಪಡುಕೋಣೆಗೆ ಬಾಲಿವುಡ್ ಆಫರ್ ಸಿಕ್ಕಿದ್ದು ಹೇಗೆ?

Deepika Padukone Birthday: ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ‘ಓಂ ಶಾಂತಿ ಓಂ’ ಸಿನಿಮಾ. ಶಾರುಖ್ ಖಾನ್ ನಟನೆಯ ಈ ಚಿತ್ರ ಸೂಪರ್ ಹಿಟ್ ಆಯಿತು. ಇದು ದೀಪಿಕಾ ಅವರ ಮೊದಲ ಹಿಂದಿ ಸಿನಿಮಾ. ಆಡಿಷನ್ ಕೂಡ ಮಾಡದೇ ದೀಪಿಕಾ ಈ ಸಿನಿಮಾದಲ್ಲಿ ನಟಿಸೋ ಆಫರ್ ಸಿಕ್ಕಿತ್ತು.

ಕನ್ನಡ ಸಿನಿಮಾ ಮಾಡಿದ್ದ ದೀಪಿಕಾ ಪಡುಕೋಣೆಗೆ ಬಾಲಿವುಡ್ ಆಫರ್ ಸಿಕ್ಕಿದ್ದು ಹೇಗೆ?
ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 05, 2024 | 8:05 AM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರಿಗೆ ಇಂದು (ಜನವರಿ 5) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಕಳೆದ ವರ್ಷ ಅವರಿಗೆ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿದೆ. ಈ ವರ್ಷದ ಆರಂಭದಲ್ಲೇ (ಜನವರಿ 25) ಅವರ ನಟನೆಯ ‘ಫೈಟರ್’ ಸಿನಿಮಾ ರಿಲೀಸ್ ಆಗುತ್ತಿದೆ. ಇದು ದೀಪಿಕಾ ಖುಷಿ ಹೆಚ್ಚಿಸಿದೆ. ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್​ನ ಬೇಡಿಕೆಯ ನಟಿ. ಕನ್ನಡದಲ್ಲಿ ನಟಿಸಿದ ದೀಪಿಕಾಗೆ ಬಾಲಿವುಡ್ ಆಫರ್ ಬಂದಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ‘ಓಂ ಶಾಂತಿ ಓಂ’ ಸಿನಿಮಾ. ಶಾರುಖ್ ಖಾನ್ ನಟನೆಯ ಈ ಚಿತ್ರ ಸೂಪರ್ ಹಿಟ್ ಆಯಿತು. ಇದು ದೀಪಿಕಾ ಅವರ ಮೊದಲ ಹಿಂದಿ ಸಿನಿಮಾ. ಆಡಿಷನ್ ಕೂಡ ಮಾಡದೇ ದೀಪಿಕಾ ಈ ಸಿನಿಮಾದಲ್ಲಿ ನಟಿಸೋ ಆಫರ್ ಸಿಕ್ಕಿತು. ನಿರ್ದೇಶಕಿ ಫರಾ ಖಾನ್ ಅವರು ದೀಪಿಕಾ ಅವರಲ್ಲಿ ಸಾಕಷ್ಟು ನಂಬಿಕೆ ಹೊಂದಿದ್ದರು. ಈ ನಂಬಿಕೆಯನ್ನು ದೀಪಿಕಾ ಪಡುಕೋಣೆ ಉಳಿಸಿಕೊಂಡಿದ್ದರು.

2006ರಲ್ಲಿ ದೀಪಿಕಾ ಪಡುಕೋಣೆ ನಟನೆಯ ‘ಐಶ್ವರ್ಯಾ’ ಸಿನಿಮಾ ರಿಲೀಸ್ ಆಯಿತು. ಉಪೇಂದ್ರ ಅವರಿಗೆ ದೀಪಿಕಾ ಜೊತೆಯಾಗಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಇಂದ್ರಜಿತ್ ಲಂಕೇಶ್ ಅವರು. ಅದೇ ವರ್ಷ ಅವರು ‘ನಾಮ್ ಹೇ ತೆರಾ..’ ಹೆಸರಿನ ಹಿಂದಿ ಮ್ಯೂಸಿಕ್ ವಿಡಿಯೋದಲ್ಲಿ ದೀಪಿಕಾ ಕಾಣಿಸಿಕೊಂಡರು. ಇದು ಹಿಟ್ ಆಯಿತು. ಇದರಿಂದ ಬಾಲಿವುಡ್​ನಲ್ಲಿ ದೀಪಿಕಾ ಹೆಸರು ಚಾಲ್ತಿಗೆ ಬಂತು. ಈ ಸಂದರ್ಭದಲ್ಲಿ ದೀಪಿಕಾ ಅವರು ‘ಒಂ ಶಾಂತಿ ಓಂ’ಗೆ ನಟಿಯ ಹುಡುಕಾಟದಲ್ಲಿದ್ದರು. ದೀಪಿಕಾ ಬಗ್ಗೆ ಫರಾಗೆ ಮಾಹಿತಿ ನೀಡಿದ್ದು ಮಲೈಕಾ ಅರೋರಾ.

ದೀಪಿಕಾ ಅವರನ್ನು ಲುಕ್ ಟೆಸ್ಟ್​​ಗೆ ಕರೆಸಿದ್ದರು ಫರಾ ಖಾನ್. ಲುಕ್ ಟೆಸ್ಟ್ ಮಾಡಿದಾಗ ಫರಾಗೆ ದೀಪಿಕಾ ಇಷ್ಟ ಆದರು. ‘ಯಾವುದಾದರೂ ಜನಪ್ರಿಯ ನಟಿಯನ್ನು ಆಯ್ಕೆ ಮಾಡಿಕೊಳ್ಳಬಹುದಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ನಾನು ನೋ ಎಂದೆ. ನನಗೆ ಅವಳನ್ನು ಲಾಂಚ್ ಮಾಡಬೇಕು ಎಂದಿತ್ತು’ ಎಂದು ಸಂದರ್ಶನದಲ್ಲಿ ಫರಾ ಹೇಳಿಕೊಂಡಿದ್ದರು.

‘ಒಂ ಶಾಂತಿ ಓಂ’ ವಿಮರ್ಶೆ ಹಾಗೂ ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿತು. ಈ ಚಿತ್ರ ಹಲವು ಅವಾರ್ಡ್​ಗಳನ್ನು ಪಡೆದಿದೆ. ದೀಪಿಕಾ ಪಡುಕೋಣೆ ಅವರಿಗೆ ‘ಬೆಸ್ಟ್ ನ್ಯೂಕಮ್ಮರ್’ ಅವಾರ್ಡ್​ ಸಿಕ್ಕಿತು. ‘ನನ್ನನ್ನು ಏಕೆ ತಂಡಕ್ಕೆ ಸೇರಿಸಿಕೊಂಡಿರಿ’ ಎಂದು ದೀಪಿಕಾಗೆ ಕೇಳಿದ್ದರಂತೆ. ಇದಕ್ಕೆ ಫರಾ ಅವರು, ‘ನನಗೆ ನಂಬಿಕೆ ಇದೆ’ ಎಂದಿದ್ದರಂತೆ.

ಬಾಲಿವುಡ್​ನಲ್ಲಿ ನಟಿಸಿದ ಮೊದಲ ಸಿನಿಮಾದಲ್ಲೇ ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಳ್ಳೋ ಅವಕಾಶ ದೀಪಿಕಾಗೆ ಸಿಕ್ಕಿತ್ತು. ಇವರ ಕೆಮಿಸ್ಟ್ರಿ ಕೆಲಸ ಮಾಡಿತ್ತು. ‘ಓಂ ಶಾಂತಿ ಓಂ’ ಚಿತ್ರದಲ್ಲಿ ದೀಪಿಕಾ ಎರಡು ಶೇಡ್​ನ ಪಾತ್ರ ಮಾಡಿದ್ದಾರೆ. ಇದು ಮರುಜನ್ಮದ ಕಥೆ ಹೊಂದಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ದೀಪಿಕಾ ಹಾಗೂ ಶಾರುಖ್ ಖಾನ್, ‘ಚೆನ್ನೈ ಎಕ್ಸ್​ಪ್ರೆಸ್​’, ‘ಪಠಾಣ್’ ಮೊದಲಾದ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರದ್ದು ಸೂಪರ್ ಹಿಟ್ ಜೋಡಿ ಎನಿಸಿಕೊಂಡಿದೆ.

ಇದನ್ನೂ ಓದಿ: ಶೀಘ್ರವೇ ತಾಯಿ ಆಗಲಿದ್ದಾರೆ ದೀಪಿಕಾ ಪಡುಕೋಣೆ; ಹಿಂಟ್ ಕೊಟ್ಟ ನಟಿ

ದೀಪಿಕಾ ಪಡುಕೋಣೆ ಅವರು ಸದ್ಯ, ‘ಫೈಟರ್’ ಚಿತ್ರದ ರಿಲೀಸ್​ಗಾಗಿ ಕಾದಿದ್ದಾರೆ. ಹೃತಿಕ್​ ರೋಷನ್​ಗೆ ಅವರು ಜೊತೆಯಾಗಿದ್ದಾರೆ. ಸಿದ್ದಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದಲ್ಲದೆ, ‘ಕಲ್ಕಿ 2898 ಎಡಿ’ ಹಾಗೂ ‘ಸಿಂಗಂ ಅಗೇನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ