ನಮ್ಮ ನಾಡು-ನುಡಿಯ ಸಾರವ ಸಾರಿದ ಕನ್ನಡದ ಚಿತ್ರಗೀತೆಗಳಿವು..
ಕನ್ನಡ ರಾಜ್ಯೋತ್ಸವ 2023: ಕನ್ನಡ ನಾಡು, ನುಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಸಿನಿಮಾದಲ್ಲಿ ಹಾಡುಗಳು ಕೂಡ ಹೇರಳವಾಗಿ ಬಳಕೆ ಆಗಿದೆ. ಕನ್ನಡದ ಮಣ್ಣಿನ ವಿಶೇಷತೆ, ಕನ್ನಡದ ನುಡಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ರೀತಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಆ ರೀತಿಯ ಹಾಡುಗಳ ಬಗ್ಗೆ ಇಲ್ಲಿದೆ ವಿವರ.
ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆಗೆ ಎಲ್ಲ ಕಡೆಗಳಲ್ಲೂ ಸಿದ್ಧತೆ ನಡೆದಿದೆ. ನವೆಂಬರ್ ತಿಂಗಳಾದ್ಯಂತ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಕನ್ನಡ ನಾಡು, ನುಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಸಿನಿಮಾದಲ್ಲಿ ಹಾಡುಗಳು ಕೂಡ ಹೇರಳವಾಗಿ ಬಳಕೆ ಆಗಿದೆ. ಕನ್ನಡದ ಮಣ್ಣಿನ ವಿಶೇಷತೆ, ಕನ್ನಡದ ನುಡಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ರೀತಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಆ ರೀತಿಯ ಹಾಡುಗಳ ಬಗ್ಗೆ ಇಲ್ಲಿದೆ ವಿವರ.
ಕನ್ನಡ ನಾಡಿನ ಜೀವ ನದಿ..
ವಿಷ್ಣುವರ್ಧನ್, ಖುಷ್ಬೂ ನಟನೆಯ ‘ಜೀವನದಿ’ ಸಿನಿಮಾ 1996ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಬರುವ ‘ಕನ್ನಡ ನಾಡಿನ ಜೀವ ನದಿ..’ ಹಾಡು ಎಲ್ಲರ ಗಮನ ಸೆಳೆಯಿತು. ಕೇಳುಗರ ಫೇವರಿಟ್ ಸಾಲಿನಲ್ಲಿ ಈ ಹಾಡಿಗೆ ಈಗಲೂ ಸ್ಥಾನ ಇದೆ. ಕಾವೇರಿ ಹಾಗೂ ಕರ್ನಾಟಕದ ಮಣ್ಣಿನ ವಿಶೇಷತೆಯನ್ನು ಇದು ವಿವರಿಸುತ್ತದೆ.
ಕಲ್ಲಾದರೆ ನಾನು
ಕನ್ನಡ ನಾಡಿನ ಮಣ್ಣಿನ ವಿಶೇಷತೆ ತುಂಬಾನೆ ದೊಡ್ಡದು. ‘ಸಿಂಹಾದ್ರಿಯ ಸಿಂಹ’ ಸಿನಿಮಾದಲ್ಲಿ ಬರುವ ‘ಕಲ್ಲಾದರೆ ನಾನು..’ ಹಾಡನ್ನು ಯಾರೂ ಮಿಸ್ ಮಾಡಿಕೊಳ್ಳುವಂತಿಲ್ಲ. ಈ ಹಾಡು ವಿಶೇಷ ಎನಿಸಿಕೊಂಡಿದೆ. ಹೇಗಾದರೂ ಸರಿ ಕನ್ನಡ ನಾಡಲ್ಲಿ ಮತ್ತೆ ಹುಟ್ಟಬೇಕು ಎಂಬ ಬಯಕೆಯನ್ನು ನಾಯಕ ವ್ಯಕ್ತಪಡಿಸುತ್ತಾನೆ.
ಕನ್ನಡ ನಾಡಿನ ವೀರ ರಮಣಿಯ..
‘ನಾಗರಹಾವು’ ಸಿನಿಮಾದಲ್ಲಿ ಬರುವ ‘ಕನ್ನಡ ನಾಡಿನ ವೀರ ರಮಣಿಯ..’ ಹಾಡನ್ನು ಕನ್ನಡ ರಾಜ್ಯೋತ್ಸವದಂದು ಮಿಸ್ ಮಾಡಿಕೊಳ್ಳಲೇ ಬಾರದು. ಚಿತ್ರದುರ್ಗದ ಕಲ್ಲಿನ ಕೋಟೆತ ವಿಶೇಷತೆ ವಿವರಿಸುವಾಗ ಈ ಹಾಡು ಬರುತ್ತದೆ.
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..
‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..’ ಹಾಡು ಗಮನ ಸೆಳೆಯುವಂತಿದೆ. ‘ವಿಜಯನಗರ ವೀರಪುತ್ರ’ ಚಿತ್ರದ ಈ ಹಾಡಿಗೆ ಸಾಹಿತ್ಯ ನೀಡಿರುವವರು ಆರ್.ಎನ್ ಜಯಗೋಪಾಲ್ ಹಾಗೂ ಹಾಡಿದವರು ಪಿ.ಬಿ. ಶ್ರೀನಿವಾಸ್.
ಅವ್ವ ಕಣೋ ಕನ್ನಡ..
ಪ್ರೇಮ್ ನಟನೆಯ ‘ಪಲ್ಲಕ್ಕಿ’ ಚಿತ್ರದ ‘ಅವ್ವ ಕಣೋ ಕನ್ನಡ..’ ಸಾಂಗ್ ಅನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಹಾಡಿಗೆ, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.
ಕನ್ನಡದ ಮಾತು ಚೆನ್ನ..
‘ಸಮರ’ ಸಿನಿಮಾದ ‘ಕನ್ನಡದ ಮಾತು ಚೆನ್ನ..’ ಹಾಡು ರಾಜ್ಕುಮಾರ್ ಕಂಠದಲ್ಲಿ ಮೂಡಿ ಬಂದಿದೆ. ಶಿವರಾಜ್ಕುಮಾರ್ ಮೊದಲಾದವರು ‘ಸಮರ’ ಸಿನಿಮಾದಲ್ಲಿ ನಟಿಸಿದ್ದಾರೆ.
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ..
ಅಂಬರೀಷ್ ಅಭಿನಯದ ‘ತಿರುಗು ಬಾಣ’ ಚಿತ್ರದ ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ.. ’ಹಾಡಿಗೆ ದನಿ ನೀಡಿದವರು ಎಸ್.ಪಿ.ಬಾಲಸುಬ್ರಮಣ್ಯಂ. ಆರ್.ಎನ್ ಜಯಗೋಪಾಲ್ ಬರೆದ ಸಾಹಿತ್ಯಕ್ಕೆ, ಸತ್ಯಂರವರು ಸಂಗೀತ ನೀಡಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಕುಮಾರ್ ಪ್ರತಿಮೆ ವಿವಾದ; ಆಕ್ರೋಶ ಹೊರಹಾಕಿದ ಅಣ್ಣಾವ್ರ ಫ್ಯಾನ್ಸ್
‘ಕರುನಾಡೇ..
ರವಿಚಂದ್ರನ್ ನಟನೆಯ ‘ಮಲ್ಲ’ ಸಿನಿಮಾದ ‘ಕರುನಾಡೇ..’ ಹಾಡನ್ನು ಬಹುತೇಕರು ಕೇಳಿರುತ್ತಾರೆ. ಈ ಸಿನಿಮಾ ಬಂದು 19 ವರ್ಷಗಳ ಮೇಲಾಗಿದೆ. ಆದಾಗ್ಯೂ ಈ ಹಾಡು ಫೇವರಿಟ್ಲಿಸ್ಟ್ನಲ್ಲಿ ಇದೆ.
ಇದನ್ನೂ ಓದಿ: ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ
‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’
‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ರಾಜ್ಕುಮಾರ್ ಅವರ ಕಂಠದಲ್ಲಿ ಮೂಡಿ ಬಂದಿತ್ತು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಈ ಹಾಡನ್ನು ಶೂಟ್ ಮಾಡಲಾಯಿತು. ಈ ಹಾಡಿನ ಪ್ರತಿ ಸಾಲುಗಳು ಅರ್ಥಪೂರ್ಣವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ