ಸದ್ದು ಮಾಡುತ್ತಿದೆ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್​; ಭರವಸೆ ಮೂಡಿಸಿದ ಹೊಸ ಸಿನಿಮಾ ತಂಡ

ಟ್ರೇಲರ್​ ಮೂಲಕ ಸಿನಿಪ್ರಿಯರ ಗಮನ ಸೆಳೆದ ‘ಫ್ಯಾಮಿಲಿ ಡ್ರಾಮಾ’ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೆ ಹೊಸ ಡೈರೆಕ್ಟರ್​ ಆಕರ್ಷ್​ ಅವರು ನಿರ್ದೇಶನ ಮಾಡಿದ್ದಾರೆ. ಸಿಂಧು ಶ್ರೀನಿವಾಸ್​ ಮೂರ್ತಿ, ಅಭಯ್​, ಪೂರ್ಣಚಂದ್ರ ಮೈಸೂರು, ಅನನ್ಯಾ ಅಮರ್​, ಮಹದೇವ್​ ಹಡಪದ್​ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಸದ್ದು ಮಾಡುತ್ತಿದೆ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್​; ಭರವಸೆ ಮೂಡಿಸಿದ ಹೊಸ ಸಿನಿಮಾ ತಂಡ
ಫ್ಯಾಮಿಲಿ ಡ್ರಾಮಾ
Follow us
ಮದನ್​ ಕುಮಾರ್​
|

Updated on: Apr 29, 2024 | 6:02 PM

ಕನ್ನಡ ಚಿತ್ರರಂಗದಲ್ಲಿ (Sandalwood) ಬೇರೆ ಬೇರೆ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಅಂಥ ಡಿಫರೆಂಟ್​ ಪ್ರಯತ್ನ ಯಾವಾಗಲೂ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಈಗ ‘ಫ್ಯಾಮಿಲಿ ಡ್ರಾಮಾ’ (Family Drama) ಚಿತ್ರತಂಡ ತಮ್ಮ ಹೊಸ ಬಗೆಯ ಕಹಾನಿ ಮತ್ತು ಟ್ರೇಲರ್​ ಮೂಲಕ ಸುದ್ದಿ ಆಗುತ್ತಿದೆ. ಇದೊಂದು ಹೊಸಬರ ತಂಡ ಮಾಡಿದ ಸಿನಿಮಾ. ಅದೇ ಕಾರಣಕ್ಕೆ ಇದರಲ್ಲಿ ಹೊಸತನ ಕಾಣಿಸುತ್ತಿದೆ. ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್​ (Family Drama Trailer) ನೋಡಿ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಈ ಹೊಸ ಟೀಮ್​ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ…

ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸುವಲ್ಲಿ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್​ ಯಶಸ್ವಿ ಆಗಿದೆ. ಬಹಳ ಕ್ರಿಯೇಟಿವ್​ ಆಗಿ ಈ ಟ್ರೇಲರ್​ ಮೂಡಿಬಂದಿದೆ. ಇದರ ಮೇಕಿಂಗ್​ ಕೂಡ ಗಮನ ಸೆಳೆಯುತ್ತಿದೆ. ಹೊಸ ನಿರ್ದೇಶಕ ಆಕರ್ಷ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಸಿದ್ಧವಾದ ಮೊದಲ ಸಿನಿಮಾ. ಈ ಮೊದಲು ಕೆಲವು ಕಿರುಚಿತ್ರಗಳನ್ನು ಅವರು ಮಾಡಿದ್ದಾರೆ. ರಿಷಬ್ ಶೆಟ್ಟಿಯ ತಂಡದಲ್ಲಿ ಕೆಲಸ ಮಾಡಿದ ಅನುಭವ ಆಕರ್ಷ್​ ಅವರಿಗೆ ಇದೆ. ಬಿಡುಗಡೆ ಸಿದ್ಧವಾಗಿರುವ ‘ಲಾಫಿಂಗ್ ಬುದ್ದ’ ಚಿತ್ರತಂಡದಲ್ಲಿ ಆಕರ್ಷ್ ಅವರು ಕೆಲಸ ಮಾಡಿದ್ದಾರೆ.

‘ಫ್ಯಾಮಿಲಿ ಡ್ರಾಮಾ’ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ‘ಆಚಾರ್ ಆ್ಯಂಡ್ ಕೋ’ ಸಿನಿಮಾಗೆ ನಿರ್ದೇಶನ ಮಾಡಿ ನಟಿಸಿದ್ದ ಸಿಂಧೂ ಶ್ರೀನಿವಾಸ ಮೂರ್ತಿ ಹಾಗೂ ‘ಡೇರ್​ಡೆವಿಲ್ ಮುಸ್ತಾಫ’ ಚಿತ್ರದಲ್ಲಿ ಅಭಿನಯಿಸಿದ್ದ ಅಭಯ್, ಪೂರ್ಣಚಂದ್ರ ಮೈಸೂರು ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ಆಶಿತ್​, ಮಹದೇವ್​ ಹಡಪದ್​ ಮುಂತಾದವರು ಕೂಡ ‘ಫ್ಯಾಮಿಲಿ ಡ್ರಾಮಾ’ ಸಿನಿಮಾದಲ್ಲಿ ನಟಿಸಿದ್ದಾರೆ.

‘ಫ್ಯಾಮಿಲಿ ಡ್ರಾಮಾ’ ಟ್ರೇಲರ್:​

‘ಆಚಾರ್ ಆ್ಯಂಡ್ ಕೋ’ ಬಳಿಕ ಸಿಂಧೂ ಶ್ರೀನಿವಾಸ​ ಮೂರ್ತಿ ಒಪ್ಪಿಕೊಂಡ ಸಿನಿಮಾ ‘ಫ್ಯಾಮಿಲಿ ಡ್ರಾಮ’. ಇದು ಡಾರ್ಕ್ ಕಾಮಿಡಿ ಕಥಾಹಂದರವನ್ನು ಹೊಂದಿದೆ. ಮುಗ್ಧ ಫ್ಯಾಮಿಲಿಯೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಹಾನಿ ಇದರಲ್ಲಿದೆ. ಆ ಕಥೆಯನ್ನು ಪೂರ್ತಿಯಾಗಿ ನೋಡಿ ಎಂಜಾಯ್​ ಮಾಡಲು ಪ್ರೇಕ್ಷಕರು ಕಾದಿದ್ದಾರೆ. ಟ್ರೇಲರ್​ ನೋಡಿದ ಬಳಿಕ ಈ ಚಿತ್ರತಂಡದ ಮೇಲೆ ಭರವಸೆ ಮೂಡಿದೆ.

ಇದನ್ನೂ ಓದಿ: Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್​ ಆ್ಯಂಡ್​ ಕೋ’

ಕೇವಲ ಟ್ರೇಲರ್​ ಮಾತ್ರವಲ್ಲದೇ, ‘ಫ್ಯಾಮಿಲಿ ಡ್ರಾಮಾ’ ಸಿನಿಮಾದ ಪೋಸ್ಟರ್​ಗಳು ಕೂಡ ಗಮನ ಸೆಳೆಯುತ್ತಿವೆ. ಬಹಳ ಕ್ರಿಯೇಟಿವ್​ ಆಗಿ ಪೋಸ್ಚರ್ ವಿನ್ಯಾಸ ಮಾಡಿಸಲಾಗಿದೆ. ವಿದೇಶದ ಪೋಸ್ಟರ್​ ಡಿಸೈನರ್​ಗಳು ಇದರ ಹಿಂದೆ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಮ್ಯೂಸಿಕ್​ ಕೂಡ ರೆಟ್ರೋ ಶೈಲಿಯಲ್ಲಿದೆ. ಚೇತನ್ ಅಮಯ್ಯ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ