ಪರ್ಫೆಕ್ಟ್ ಶೇಪ್ಗಾಗಿ ಈ ಕಾಲಿವುಡ್ ನಟಿ ಏನೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ?
ಈಕೆ ಕಾಲಿವುಡ್ ನಟಿ ಐಶ್ವರ್ಯ ರಾಜೇಶ್. ತನ್ನ ಅದ್ಭುತ ಅಭಿನಯದ ಮೂಲಕವೇ ಸೌತ್ ಸಿನಿರಂಗದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ ನಟಿ. ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಂಡ ಕಾಕಾ ಮುತೈ ಚಿತ್ರದಲ್ಲಿ ಮಿಂಚಿದ ಬೆಡಗಿ. ಈಕೆಯ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಫಿಟ್ನೆಸ್ಗೂ ಫಿದಾ ಆಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಫಿಟ್ ಮಾಡಿಕೊಳ್ಳುವ ಐಶ್ವರ್ಯ ಅವರ ಫಿಟ್ನೆಸ್ ಗುಟ್ಟು ಅವರು ಫಾಲೋ ಮಾಡುವ ವರ್ಕೌಟ್ ಅಂತೆ. ಬ್ಯೂಟಿಫುಲ್ ಐಶ್ವರ್ಯ ವಾರದಲ್ಲಿ ಮೂರು ದಿನ ಮಿಸ್ ಮಾಡದೇ […]
ಈಕೆ ಕಾಲಿವುಡ್ ನಟಿ ಐಶ್ವರ್ಯ ರಾಜೇಶ್. ತನ್ನ ಅದ್ಭುತ ಅಭಿನಯದ ಮೂಲಕವೇ ಸೌತ್ ಸಿನಿರಂಗದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ ನಟಿ. ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಂಡ ಕಾಕಾ ಮುತೈ ಚಿತ್ರದಲ್ಲಿ ಮಿಂಚಿದ ಬೆಡಗಿ. ಈಕೆಯ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಫಿಟ್ನೆಸ್ಗೂ ಫಿದಾ ಆಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಫಿಟ್ ಮಾಡಿಕೊಳ್ಳುವ ಐಶ್ವರ್ಯ ಅವರ ಫಿಟ್ನೆಸ್ ಗುಟ್ಟು ಅವರು ಫಾಲೋ ಮಾಡುವ ವರ್ಕೌಟ್ ಅಂತೆ.
ಬ್ಯೂಟಿಫುಲ್ ಐಶ್ವರ್ಯ ವಾರದಲ್ಲಿ ಮೂರು ದಿನ ಮಿಸ್ ಮಾಡದೇ ಒಂದು ಗಂಟೆಗಳ ಕಾಲ ಜಿಮ್ ವರ್ಕೌಟ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಜಿಮ್ನಲ್ಲಿ ಯಾವ ಎಕ್ಸ್ಸೈಜ್ಗೂ ಸ್ಟ್ರಿಕ್ಟಾಗಿ ಟೈಮ್ ಫಿಕ್ಸ್ ಮಾಡಿಲ್ವಂತೆ ಈ ಚೆಲುವೆ. ಇವರು ಜಿಮ್ನಲ್ಲಿ ವೇಟ್ ಟ್ರೇನಿಂಗ್ ಮತ್ತು ಫಂಕ್ಷನಲ್ ಟ್ರೇನಿಂಗ್ ಎಕ್ಸ್ಸೈಜ್ಗಳ ಕಡೆ ಹೆಚ್ಚು ಗಮನ ಹರಿಸ್ತಾರಂತೆ. ಅದರಲ್ಲಿ ಸ್ಕ್ವಾಟ್, ಡೆಡ್ ಲಿಫ್ಟ್, ಪುಶ್ಯಪ್ಸ್, ಡಂಬೆಲ್ಸ್, ಲೋವರ್ ಬಾಡಿ ಮತ್ತು ಅಪ್ಪರ್ ಬಾಡಿ ವ್ಯಾಯಾಮಗಳು ಇರುತ್ತೆ. ಈ ಎಲ್ಲಾ ಎಕ್ಸ್ಸೈಜ್ಗಳು ಕ್ಯಾಲೋರಿ ಬರ್ನ್ ಮಾಡಿ ಹೆಲ್ತಿ ಫಿಟ್ನೆಸ್ ಕಾಪಾಡಲು ಸಹಕಾರಿಯಾಗುತ್ತೆ ಅಂತಾರೆ ಫಿಟ್ನೆಸ್ ಪ್ರೀಕ್ ಐಶ್ವರ್ಯ.
ಇನ್ನು ಇವರ ಫಿಟ್ ಆ್ಯಂಡ್ ಫೈನ್ ಬಾಡಿಯ ಇನ್ನೊಂದು ಗುಟ್ಟು ಸ್ವಿಮ್ಮಿಂಗ್. ನಿತ್ಯ ಸ್ವಿಮ್ಮಿಂಗ್ ಫ್ಲೆಕ್ಸಿಬಲ್ ಬಾಡಿ ಮತ್ತು ಪರ್ಫೆಕ್ಟ್ ಶೇಪ್ಗೆ ಸಹಕಾರಿ ಆಗುತ್ತೆ ಅನ್ನೋದು ಇವರ ಮಾತು.
https://www.instagram.com/p/BgcndGMBbnv/?utm_source=ig_web_copy_link
Published On - 8:18 am, Fri, 18 October 19