ಮಹೇಶ್ ಬಾಬು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಪ್ರಿನ್ಸ್ ಮಹೇಶ್ ಫ್ಯಾನ್ಸ್ ಗರಂ ಆಗಿದ್ದಾರೆ. ಯಾವ ಯಾವ ವಿಚಾರಕ್ಕೋ ಸದ್ದು ಮಾಡೋ ರಶ್ಮಿಕಾ ವಿರುದ್ಧ ಈಗ ಮಹೇಶ್ ಫ್ಯಾನ್ಸ್ ಕೂಡ ಕೋಪಗೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಕ್ಲಿಕ್ ಆಗ್ತಿದಂತೆ ರಶ್ಮಿಕಾಗೆ ಪರಭಾಷೆಗಳಿಂದ ಆಫರ್ ಮೇಲೆ ಆಫರ್ಗಳು ಬಂದಿದ್ವು. ಸದ್ಯಕ್ಕೆ ರಶ್ಮಿಕಾ, ಕನ್ನಡದಲ್ಲಿ ಪೊಗರು ಸಿನಿಮಾ ಬಿಟ್ರೆ ಇತ್ತೀಚೆಗೆ ಮತ್ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದ್ರೆ ತೆಲುಗು. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. ಇಂತಾ ರಶ್ಮಿಕಾ ಮಂದಣ್ಣ ಮೇಲೆ ಪ್ರಿನ್ಸ್ ಮಹೇಶ್ ಬಾಬು […]
ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಪ್ರಿನ್ಸ್ ಮಹೇಶ್ ಫ್ಯಾನ್ಸ್ ಗರಂ ಆಗಿದ್ದಾರೆ. ಯಾವ ಯಾವ ವಿಚಾರಕ್ಕೋ ಸದ್ದು ಮಾಡೋ ರಶ್ಮಿಕಾ ವಿರುದ್ಧ ಈಗ ಮಹೇಶ್ ಫ್ಯಾನ್ಸ್ ಕೂಡ ಕೋಪಗೊಂಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಕ್ಲಿಕ್ ಆಗ್ತಿದಂತೆ ರಶ್ಮಿಕಾಗೆ ಪರಭಾಷೆಗಳಿಂದ ಆಫರ್ ಮೇಲೆ ಆಫರ್ಗಳು ಬಂದಿದ್ವು. ಸದ್ಯಕ್ಕೆ ರಶ್ಮಿಕಾ, ಕನ್ನಡದಲ್ಲಿ ಪೊಗರು ಸಿನಿಮಾ ಬಿಟ್ರೆ ಇತ್ತೀಚೆಗೆ ಮತ್ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದ್ರೆ ತೆಲುಗು. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. ಇಂತಾ ರಶ್ಮಿಕಾ ಮಂದಣ್ಣ ಮೇಲೆ ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.
ಸರಿಲೇರು ನೀಕೆವ್ವರು ಸಿನಿಮಾದಲ್ಲಿ, ಪ್ರಿನ್ಸ್ ಮಹೇಶ್ಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಸಿನಿಮಾ ರಿಲೀಸ್ಗೂ ರೆಡಿಯಾಗಿದೆ. ಜನವರಿ 12ಕ್ಕೆ ಮಹೇಶ್ ಬಾಬು ಸಿನಿಮಾ ತೆರೆ ಕಾಣಲಿದೆ. ಆದ್ರೆ ಸಿನಿಮಾದ ನಾಯಕಿ ರಶ್ಮಿಕಾ ಸಿನಿಮಾ ಬಗ್ಗೆ, ಮಹೇಶ್ ಬಾಬು ಬಗ್ಗೆ ಗಪ್ಚುಪ್ ಆಗಿರೋದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ದಸರಾ ಪ್ರಯುಕ್ತ ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಮಹೇಶ್ ಬಾಬು ಕೈಯಲ್ಲಿ ಕೊಡಲಿ ಹಿಡಿದು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ರು. ಈ ಪೋಸ್ಟರ್ ವೈರಲ್ ಆದ್ರೂ, ರಶ್ಮಿಕಾ ಮಾತ್ರ ಪೋಸ್ಟರ್ ಮತ್ತು ಮಹೇಶ್ ಕುರಿತು ಏನು ಮಾತನಾಡಿಲ್ಲ. ಆದರೆ ರಶ್ಮಿಕಾ ಮಾತ್ರ ಸಿನಿಮಾ ರಿಲೀಸ್ ಡೇಟ್ ಇರೋ ಪೋಸ್ಟರ್ ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ. ಹೀಗಾಗಿ ಮಹೇಶ್ ಬಾಬು ಬಗ್ಗೆ ಯಾಕೆ ಮಾತನಾಡ್ತಿಲ್ಲ ಅಂತಾ ಮಹೇಶ್ ಅಭಿಮಾನಿಗಳು ರಶ್ಮಿಕಾಳ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.