Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಬಿಟ್ಟು, ಹಳ್ಳಿಯಲ್ಲಿ ಬಿಡುಗಡೆ ಆಯ್ತು ‘ಉದಯ ಸೂರ್ಯ’ ಸಿನಿಮಾದ ಟ್ರೇಲರ್

ಎಲ್ಲ ಸಿನಿಮಾಗಳ ಟ್ರೇಲರ್​ಗಳನ್ನು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಇಲ್ಲೊಂದು ಹೊಸಬರ ತಂಡ ಹಳ್ಳಿ ಹಾದಿ ಹಿಡಿದಿದೆ. ಹೌದು, ಇತ್ತೀಚೆಗೆ ಭದ್ರಾವತಿಯ ಗ್ರಾಮವೊಂದರಲ್ಲಿ ‘ಉದಯ ಸೂರ್ಯ’ ಸಿನಿಮಾದ ಟ್ರೇಲರ್ ಅನಾವರಣ ಮಾಡಲಾಗಿದೆ. ಬಳಿಕ ಸಿನಿಮಾದ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದರು.

ಬೆಂಗಳೂರು ಬಿಟ್ಟು, ಹಳ್ಳಿಯಲ್ಲಿ ಬಿಡುಗಡೆ ಆಯ್ತು ‘ಉದಯ ಸೂರ್ಯ’ ಸಿನಿಮಾದ ಟ್ರೇಲರ್
Udaya Surya Movie Poster
Follow us
ಮದನ್​ ಕುಮಾರ್​
|

Updated on: Apr 01, 2025 | 9:54 PM

ಕನ್ನಡ ಸಿನಿಮಾ ಕೆಲಸಗಳಿಗೆ ಬೆಂಗಳೂರು ಕೇಂದ್ರ ಸ್ಥಾನ. ಎಲ್ಲ ಸಿನಿಮಾಗಳ ಸಮಾರಂಭಗಳು ಹೆಚ್ಚಾಗಿ ಬೆಂಗಳೂರಲ್ಲೇ ನಡೆಯುತ್ತವೆ. ಅದರಲ್ಲೂ ಟ್ರೇಲರ್​ (Trailer), ಸಾಂಗ್, ಟೀಸರ್​ ಬಿಡುಗಡೆಯಂತಹ ಕಾರ್ಯಕ್ರಮಗಳನ್ನು ರಾಜಧಾನಿಯಲ್ಲೇ ಮಾಡುವುದು ವಾಡಿಕೆ. ಅದು ಬಿಟ್ಟರೆ ಜಿಲ್ಲಾಕೇಂದ್ರಗಳಲ್ಲಿ ಇಂಥ ಕಾರ್ಯಕ್ರಮಗಳು ಅಪರೂಪಕ್ಕೆ ನಡೆಯುತ್ತಿವೆ. ಡಿಫರೆಂಟ್ ಏನೆಂದರೆ, ‘ಉದಯ ಸೂರ್ಯ’  (Udaya Surya) ಚಿತ್ರತಂಡದವರು ಗ್ರಾಮೀಣ ಭಾಗದಲ್ಲಿ ತಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಭದ್ರಾವತಿ (Bhadravathi) ತಾಲೂಕಿನ ಆನವೇರಿ ಗ್ರಾಮದಲ್ಲಿ ಟ್ರೇಲರ್ ಅನಾವರಣ ಮಾಡಲಾಗಿದೆ.

ಮೊದಲೇ ಹೇಳಿದಂತೆ ಹೊಸಬರೇ ಸೇರಿಕೊಂಡು ‘ಉದಯ ಸೂರ್ಯ’ ಸಿನಿಮಾ ಸಿದ್ಧಪಡಿಸಿದ್ದಾರೆ. ‘ಶ್ರೀ ಸಿದ್ದೇಶ್ವರ ಫಿಲ್ಮ್’ ಲಾಂಚನದಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಹಂಚಿನ ಸಿದ್ದಾಪುರ ಗ್ರಾಮದ ಮಂಜುನಾಥ್ ಎಸ್.ಪಿ, ಟೆಕ್ಕಿ ಸುನಿಲ್ ಎಂ, ಹರೀಶ್ ಎಚ್.ಎಸ್ ಅವರು ನಿರ್ಮಾಣ ಮಾಡಿದ್ದಾರೆ. ಅನೇಕ ವರ್ಷಗಳಿಂದ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಎಸ್.ಎಸ್. ಪ್ರಕಾಶ್ ರಾಜ್ ಅವರು ‘ಉದಯ ಸೂರ್ಯ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನೂ ಬರೆದಿದ್ದಾರೆ.

ಚಿತ್ರತಂಡ ಹೇಳಿಕೊಂಡಿರುವಂತೆ ಇದು ಪ್ರೀತಿಯಲ್ಲಿ ಮೋಸ ಹೋದ ಇಬ್ಬರ ಸ್ನೇಹಿತರ ಕಥೆ. ‘ಸತ್ಯ ಘಟನೆಯನ್ನು ಒಳಗೊಂಡು ಸಿನಿಮಾ ನಿರ್ಮಾಣವಾಗಿದೆ. ಹಳ್ಳಿಯಲ್ಲಿ ವ್ಯಾಘ್ರ ಉಗ್ರಪ್ಪನ ಅಟ್ಟಹಾಸದ ಕಹಾನಿ ಇದರಲ್ಲಿ ಇದೆ. ಮಾಸ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಪಕ್ಕಾ ಹಳ್ಳಿ ಸೊಗಡಿನ ಕನ್ನಡವನ್ನು ಬಳಸಲಾಗಿದೆ’ ಎಂದು ಚಿತ್ರತಂಡದವರು ಹೇಳಿದ್ದಾರೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಎಸ್.ಎಸ್. ಪ್ರಕಾಶ್‌ ರಾಜ್, ಗೌಡಿ ಹುಳಿಯಾರ್, ಜೈರಾಜ್, ಜೀವ ಮಹೇಶ್, ಪ್ರಶಾಂತ್‌ ಜೈ, ಅಶೋಕ್‌ ನಾಯ್ಕ್, ತನು ಪ್ರಸಾದ್, ತ್ರಿವೇಣಿ ಕೆ, ವೈಷ್ಣವಿ, ಲಾವಣ್ ಯಗಂಗಾಧರಯ್ಯ, ಶಿವಮೊಗ್ಗ ರಾಮಣ್ಣ, ಮಣಿ ಮೈದೊಳಲು, ಪ್ರಶಾಂತ್‌ ಪವರ್, ತನುಜಾ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ 7 ಹಾಡುಗಳಿಗೆ ಯಶವಂತ ಭೂಪತಿ ಅವರು ಸಂಗೀತ ನೀಡಿದ್ದಾರೆ. ಸಚಿತ್ ಫಿಲಂಸ್‌ ಮೂಲಕ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಧಮ್ ಇದ್ರೆ ನನ್ನ ಬ್ಯಾನ್ ಮಾಡಿ: ಮಾಧ್ಯಮಗಳಿಗೆ ಸವಾಲು ಹಾಕಿದ ನಿರ್ಮಾಪಕ

ಸಾಮ್ರಾಟ್ ನಾಗರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಲ್ಲಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವೈಲೆಂಟ್ ವೇಲು ಸಾಹಸ, ಸ್ಟಾರ್ ನಾಗಿ ಅವರ ನೃತ್ಯ ನಿರ್ದೇಶನ, ನವೀನ್ ಹಾಡೋಹಳ್ಳಿ, ಸಚ್ಚಿನ್ ಗೌಡ ಹಾಸನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

Udaya Surya Movie Team

Udaya Surya Movie Team

‘ಎ2 ಮ್ಯೂಸಿಕ್’ ಸಂಸ್ಥೆಯು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಶಿವಮೊಗ್ಗ, ಹೊನ್ನಾಳಿ, ನ್ಯಾಮತಿ, ಹಂಚಿನ ಸಿದ್ದಾಪುರ, ಆನವೇರಿ, ಬಸವಪುರ, ತಿಂಲ್ಲಾಪುರ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು