ಅಭಿಮಾನಿಗಳ ಜತೆ ಮಧ್ಯರಾತ್ರಿ ಬರ್ತ್​​ಡೇ ಆಚರಿಸಿಕೊಂಡ ಉಪೇಂದ್ರ: ಸಾಹಸ ಸಿಂಹನನ್ನು ನೆನೆದ ರಿಯಲ್ ಸ್ಟಾರ್​

ಉಪೇಂದ್ರ ಅವರು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿವಾಸ ಹೊಂದಿದ್ದಾರೆ. ಉಪ್ಪಿ ನಿವಾಸಕ್ಕೆ ತಡರಾತ್ರಿಯೇ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ನೆಚ್ಚಿನ ನಟನಿಗೆ ಎಲ್ಲರೂ ಬರ್ತ್​​​ಡೇ ವಿಶ್ ತಿಳಿಸಿದ್ದಾರೆ.

ಅಭಿಮಾನಿಗಳ ಜತೆ ಮಧ್ಯರಾತ್ರಿ ಬರ್ತ್​​ಡೇ ಆಚರಿಸಿಕೊಂಡ ಉಪೇಂದ್ರ: ಸಾಹಸ ಸಿಂಹನನ್ನು ನೆನೆದ ರಿಯಲ್ ಸ್ಟಾರ್​
ಉಪೇಂದ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 18, 2022 | 7:08 AM

ನಟ ಉಪೇಂದ್ರ (Upendra) ಅವರಿಗೆ ಇಂದು (ಸೆಪ್ಟೆಂಬರ್ 18) ಬರ್ತ್​ಡೇ ಸಂಭ್ರಮ. ಅವರು ತಮ್ಮ 54ನೇ ಜನ್ಮದಿನವನ್ನು ಅಭಿಮಾನಿಗಳ ಜತೆ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷ ಕೊವಿಡ್ ಕಾರಣದಿಂದ ಸರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕೊವಿಡ್ ಕಡಿಮೆಯಾಗಿದೆ. ಈ ಕಾರಣದಿಂದ ಉಪೇಂದ್ರ (Upendra Birthday) ಅವರು ಅಭಿಮಾನಿಗಳ ಜತೆಗೂಡಿ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾರೆ. ಉಪೇಂದ್ರ ಅವರಿಗೆ ಅನೇಕ ಸೆಲೆಬ್ರಿಟಿಗಳು ಬರ್ತ್​ಡೇ ವಿಶ್ ಮಾಡುತ್ತಿದ್ದಾರೆ.

ಉಪೇಂದ್ರ ಅವರು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿವಾಸ ಹೊಂದಿದ್ದಾರೆ. ಉಪ್ಪಿ ನಿವಾಸಕ್ಕೆ ತಡರಾತ್ರಿಯೇ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ನೆಚ್ಚಿನ ನಟನಿಗೆ ಎಲ್ಲರೂ ಬರ್ತ್​​​ಡೇ ವಿಶ್ ತಿಳಿಸಿದ್ದಾರೆ. ಅಭಿಮಾನಿಗಳಿಗೆ ಉಪೇಂದ್ರ ಸಿಹಿ ಹಂಚಿದ್ದಾರೆ. ಈ ವೇಳೆ ಫ್ಯಾನ್ಸ್ ಸಂಭ್ರಮ ಮುಗಿಲುಮುಟ್ಟಿತ್ತು.

ಇದನ್ನೂ ಓದಿ
Image
Upendra: ‘ಈ ಕೆಲಸ ಮಾಡಿ, ನಮ್ಮ ಮನೆಗೆ ಬನ್ನಿ’; ಫ್ಯಾನ್ಸ್​ಗೆ ಆಹ್ವಾನ ನೀಡಿದ ಉಪೇಂದ್ರ: ಏನಿದು ಟಾಸ್ಕ್​?
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ
Image
‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​-ವಿಷ್ಣುವರ್ಧನ್​ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ
Image
‘ವಿಷ್ಣುವರ್ಧನ್​-ಸುಹಾಸಿನಿ ನಡುವೆ ನಡೆಯುತ್ತಿದ್ದ ಮಾತುಕತೆಯೇ ಬೇರೆ’: ನಾಗತಿಹಳ್ಳಿ ಚಂದ್ರಶೇಖರ್​

ಉಪೇಂದ್ರ ಅವರಿಗೆ ಅನೇಕ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ನೆಚ್ಚಿನ ನಟನ ಜತೆ ಇರುವ ಫೋಟೋ ಪೋಸ್ಟ್​ ಮಾಡಿ ಅಭಿಮಾನಿಗಳು ಉಪ್ಪಿಗೆ ಹ್ಯಾಪಿ ಬರ್ತ್​ಡೇ ಎನ್ನುತ್ತಿದ್ದಾರೆ. ಅಭಿಮಾನಿಗಳ ಜತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕಾರಣದಿಂದಲೂ ಉಪೇಂದ್ರ ಅವರಿಗೆ ಬರ್ತ್​ಡೇ ವಿಶೇಷ ಎನಿಸಿದೆ.

ಟೀಸರ್ ಗಿಫ್ಟ್:

ಸೆಲೆಬ್ರಿಟಿಗಳ ಬರ್ತ್​ಡೇ ಸಂದರ್ಭದಲ್ಲಿ ಸಿನಿಮಾ ತಂಡದ ಕಡೆಯಿಂದ ಫ್ಯಾನ್ಸ್​​ಗೆ ಗಿಫ್ಟ್ ಸಿಗುತ್ತದೆ. ಅದೇ ರೀತಿ, ‘ಕಬ್ಜ’ ತಂಡದವರು ಟೀಸರ್ ರಿಲೀಸ್ ಮಾಡಿದ್ದಾರೆ. ಈ ಟೀಸರ್ ನೋಡಿದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದು, ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಕಾರಣದಿಂದಲೂ ಫ್ಯಾನ್ಸ್​ಗೆ ಉಪ್ಪಿ ಬರ್ತ್​ಡೇ ವಿಶೇಷ ಎನಿಸಿದೆ. ಆರ್​.ಚಂದ್ರು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಕಾದಿದೆ ಮತ್ತೊಂದು ಗಿಫ್ಟ್?

‘ಯುಐ’ ಚಿತ್ರದಲ್ಲಿ ಉಪೇಂದ್ರ ಅವರು ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಹಲವು ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಮರಳಿದ್ದಾರೆ. ಈ ಸಿನಿಮಾ ತಂಡದ ಕಡೆಯಿಂದ ಉಪ್ಪಿ ಜನ್ಮದಿನಕ್ಕೆ ವಿಶೇಷ ಉಡುಗೊರೆ ಸಿಗುವ ಸಾಧ್ಯತೆ ಇದೆ. ಹೊಸ ಪೋಸ್ಟರ್​ ಅನ್ನು ತಂಡ ಹಂಚಿಕೊಳ್ಳಲಿದೆ ಎನ್ನಲಾಗುತ್ತಿದೆ.

ವಿಷ್ಣುವರ್ಧನ್​ ಅವರನ್ನು ನೆನೆದ ಉಪ್ಪಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್​ ಅವರ ಜನ್ಮದಿನ ಕೂಡ ಹೌದು. ಈ ಕಾರಣಕ್ಕೆ ಉಪೇಂದ್ರ ಅವರು ಟ್ವಿಟರ್​​ನಲ್ಲಿ ವಿಷ್ಣು ಜತೆ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಸಾಹಸ ಸಿಂಹನನ್ನು ಅವರು ನೆನಪಿಸಿಕೊಂಡಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ