ವಿಷ್ಣುವರ್ಧನ್​, ಶ್ರುತಿ, ಉಪೇಂದ್ರ ಜನ್ಮದಿನ; ಚಿತ್ರರಂಗದ ಸಾಧಕರಿಗೆ ಅಭಿಮಾನಿಗಳ ಶುಭಾಶಯ

Upendra Vishnuvardhan Shruthi Birthday: ‘ಸಾಹಸ ಸಿಂಹ’ ವಿಷ್ಣುವರ್ಧನ್​, ಹಿರಿಯ ನಟಿ ಶ್ರುತಿ, ‘ರಿಯಲ್​ ಸ್ಟಾರ್​’ ಉಪೇಂದ್ರ ಅವರಿಗೆ ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಎಲ್ಲರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ವಿಷ್ಣುವರ್ಧನ್​, ಶ್ರುತಿ, ಉಪೇಂದ್ರ ಜನ್ಮದಿನ; ಚಿತ್ರರಂಗದ ಸಾಧಕರಿಗೆ ಅಭಿಮಾನಿಗಳ ಶುಭಾಶಯ
ವಿಷ್ಣುವರ್ಧನ್, ಶ್ರುತಿ, ಉಪೇಂದ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 18, 2022 | 6:36 AM

ಕನ್ನಡ ಚಿತ್ರರಂಗದ ಪಾಲಿಗೆ ಸೆಪ್ಟೆಂಬರ್​ 18 ಎಂದರೆ ತುಂಬ ಸ್ಪೆಷಲ್​. ಯಾಕೆಂದರೆ, ಇಂದು ಉಪೇಂದ್ರ (Upendra), ವಿಷ್ಣುವರ್ಧನ್​, ಶ್ರುತಿ (Shruthi) ಅವರ ಜನ್ಮದಿನ. ಸ್ಯಾಂಡಲ್​ವುಡ್​ನಲ್ಲಿ ಈ ತಾರೆಯರು ಮಾಡಿದ ಸಾಧನೆ ಅಪಾರ. ಒಂದೇ ದಿನ ಈ ಮೂವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಕೂಡ ವಿಶ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಶುಭಾಶಯದ ಸಂದೇಶಗಳು ಹರಿದು ಬರುತ್ತಿವೆ. ಚಂದನವನದಲ್ಲಿ ವಿಷ್ಣುವರ್ಧನ್​ (Vishnuvardhan), ಉಪೇಂದ್ರ ಹಾಗೂ ಶ್ರುತಿ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆ ಮೂಲಕ ಅವರು ಹಲವರಿಗೆ ಸ್ಫೂರ್ತಿ ಆಗಿದ್ದಾರೆ.

ಉಪೇಂದ್ರ ಅವರ ಪಾಲಿಗೆ ಈ ವರ್ಷದ ಬರ್ತ್​ಡೇ ಹೆಚ್ಚು ವಿಶೇಷವಾಗಿದೆ. ಅವರ ನಟಿಸಿರುವ ‘ಕಬ್ಜ’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಜನ್ಮದಿನಕ್ಕಿಂತ ಒಂದು ದಿನ ಮುಂಚೆ ಬಿಡುಗಡೆ ಆಗಿರುವ ಈ ಟೀಸರ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ, ಅವರು ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ ಚಿತ್ರತಂಡದಿಂದ ಇಂದು ವಿಶೇಷ ವಿಡಿಯೋ ರಿಲೀಸ್​ ಆಗಲಿದೆ. ನಿರ್ದೇಶಕನಾಗಿ, ನಟನಾಗಿ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಮ್ಮ ಮನೆ ಎದುರು ಜಮಾಯಿಸುವ ಅಭಿಮಾನಿಗಳನ್ನು ಇಂದು ಉಪ್ಪಿ ಭೇಟಿ ಮಾಡಲಿದ್ದಾರೆ.

ಕನ್ನಡ ಚಿತ್ರರಂಗ ಎಂದಿಗೂ ಮರೆಯದಂತಹ ವ್ಯಕ್ತಿತ್ವ ವಿಷ್ಣುವರ್ಧನ್​ ಅವರದ್ದು. ‘ಸಾಹಸ ಸಿಂಹ’ ಎಂದೇ ಫೇಮಸ್​ ಆದ ಅವರು ಒಂದಕ್ಕಿಂತ ಒಂದು ಡಿಫರೆಂಟ್​ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡರು. ಇಂದು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಜನರು ಅವರ ಮೇಲೆ ಇಟ್ಟಿರುವ ಅಭಿಮಾನ ಶಾಶ್ವತ. ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿ ಅವರ ಸಮಾಧಿ ಇದೆ. ಹುಟ್ಟುಹಬ್ಬದ ಪ್ರಯುಕ್ತ ಅಲ್ಲಿ ವಿಷ್ಣುವರ್ಧನ್​ ಅವರ ಹಲವು ಕಟೌಟ್​ಗಳನ್ನು ನಿಲ್ಲಿಸಲಾಗಿದೆ. ಆ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

ಇದನ್ನೂ ಓದಿ
Image
Upendra: ‘ಈ ಕೆಲಸ ಮಾಡಿ, ನಮ್ಮ ಮನೆಗೆ ಬನ್ನಿ’; ಫ್ಯಾನ್ಸ್​ಗೆ ಆಹ್ವಾನ ನೀಡಿದ ಉಪೇಂದ್ರ: ಏನಿದು ಟಾಸ್ಕ್​?
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ
Image
‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​-ವಿಷ್ಣುವರ್ಧನ್​ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ
Image
‘ವಿಷ್ಣುವರ್ಧನ್​-ಸುಹಾಸಿನಿ ನಡುವೆ ನಡೆಯುತ್ತಿದ್ದ ಮಾತುಕತೆಯೇ ಬೇರೆ’: ನಾಗತಿಹಳ್ಳಿ ಚಂದ್ರಶೇಖರ್​

ಹಿರಿಯ ನಟಿ ಶ್ರುತಿ ಅವರು ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಎಮೋಷನಲ್​ ಸಿನಿಮಾಗಳ ಮೂಲಕ ಅವರು ಒಂದು ಕಾಲದಲ್ಲಿ ಇಡೀ ಕರುನಾಡಿನ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಹಾಗಂತ ಅವರು ಅಷ್ಟಕ್ಕೇ ಸೀಮಿತವಾಗಲಿಲ್ಲ. ಕಾಮಿಡಿ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡರು. ಈ ಅಪ್ಪಟ ಕಲಾವಿದೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಎಲ್ಲರೂ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಪೋಷಕ ಪಾತ್ರಗಳನ್ನು ಮಾಡುತ್ತ ಶ್ರುತಿ ಅವರು ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sun, 18 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ