‘ಯುಐ’ ಸಿನಿಮಾ ಅದ್ದೂರಿ ಬಿಡುಗಡೆ: ಚಿತ್ರದ ಫಸ್ಟ್ ಹಾಫ್‌ನಲ್ಲಿ ಏನೆಲ್ಲ ಇದೆ ನೋಡಿ..
ನಟ ಉಪೇಂದ್ರ ಅವರು ‘ಯುಐ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ ಕಾರಣದಿಂದ ಸಖತ್ ಹೈಪ್ ಸೃಷ್ಟಿ ಆಗಿದೆ. ಇಂದು (ಡಿಸೆಂಬರ್ 20) ಗ್ರ್ಯಾಂಡ್ ಆಗಿ ‘ಯುಐ’ ಸಿನಿಮಾ ಬಿಡುಗಡೆ ಆಗಿದೆ. ಸದಾ ಡಿಫರೆಂಟ್ ಆಗಿ ಸಿನಿಮಾ ಮಾಡುವ ಉಪೇಂದ್ರ ಅವರು ಈ ಬಾರಿ ಕೆಲವು ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಎದುರು ಬಂದಿದ್ದಾರೆ. ಸಿನಿಮಾದ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ..
Upendra
Follow us on
ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ಖಂಡಿತವಾಗಿಯೂ ಡಿಫರೆಂಟ್ ಆಗಿರುತ್ತದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಮೊದಲ ಸಿನಿಮಾದಿಂದಲೂ ಉಪೇಂದ್ರ ಆ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಯುಐ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಇಂದಿನ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂಬ ಸುಳಿವನ್ನು ಟ್ರೇಲರ್ ಮೂಲಕ ನೀಡಲಾಗಿತ್ತು. ಇಂದು (ಡಿ.20) ಮುಂಜಾನೆಯೇ ಅಭಿಮಾನಿಗಳು ‘ಯುಐ’ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಈ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಹೈಲೈಟ್ ಆಗಿರುವ ಅಂಶಗಳ ಬಗ್ಗೆ ಇಲ್ಲಿದೆ ವಿವರ..
A, ಶ್ ರೀತಿ ‘ಯುಐ’ನಲ್ಲೂ ಸಿನಿಮಾದೊಳಗೊಂದು ಸಿನಿಮಾ ತೋರಿಸುತ್ತಿರುವ ಉಪೇಂದ್ರ. ಓಪನಿಂಗ್ ಸೀನ್ ತುಂಬ ಡಿಫರೆಂಟ್ ಆಗಿದೆ.
ನಿರ್ದೇಶಕನಾಗಿಯೇ ಉಪೇಂದ್ರ ಪಾತ್ರ ಪರಿಚಯ. ‘ನೀವು ದಡ್ಡರಾಗಿದ್ರೆ ಮಾತ್ರ ಪೂರ್ತಿ ಸಿನಿಮಾ ನೋಡಿ’ ಎಂದು ಸವಾಲು ಹಾಕಿದ ಉಪೇಂದ್ರ.
ಫ್ಯಾನ್ಸ್ ನಿರೀಕ್ಷಿಸೋದಕ್ಕಿಂತ ಡಿಫರೆಂಟ್ ಆಗಿ ಎಂಟ್ರಿ ನೀಡುವ ಹೀರೋ. ಪ್ರೇಕ್ಷಕರು ಆ್ಯಕ್ಷನ್ ಬಯಸುವಂತಹ ಸೀನ್‌ನಲ್ಲಿ ಶಾಂತಿ ಪಾಠ ಮಾಡುವ ಹೀರೋ.
ಎರಡು ಬೇರೆ ಬೇರೆ ಶೇಡ್‌ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಸತ್ಯ ಮತ್ತು ಕಲ್ಕಿ ಭಗವಾನ್ ಪಾತ್ರದಲ್ಲಿ ಉಪೇಂದ್ರ ನಟನೆ ಮಾಡಿದ್ದಾರೆ.
ಅಸಮಾನತೆ, ಬಡತನ ಇತ್ಯಾದಿ ಸಮಸ್ಯೆಗಳ ಹಿನ್ನೆಲೆಯಲ್ಲಿ ‘ಯುಐ’ ಸಿನಿಮಾ ಕಥೆ ಸಾಗುತ್ತದೆ. ಅಲ್ಲಲ್ಲಿ ಪ್ರೇಕ್ಷಕರಿಗೆ ಗೊಂದಲವನ್ನೂ ಮೂಡಿಸುತ್ತದೆ.
ಚಿಕ್ಕದೊಂದು ಪಾತ್ರದಲ್ಲಿ ‘ಮಠ’ ಗುರುಪ್ರಸಾದ್ ನಟಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ಹೀರೋಯಿನ್ ರೀಷ್ಮಾ ನಾಣಯ್ಯ ಪಾತ್ರ ಹೆಚ್ಚು ಹೈಲೈಟ್ ಆಗಿಲ್ಲ.
ಉಪೇಂದ್ರ ಅವರ ಪ್ರಜಾಕೀಯದ ವಿಚಾರಗಳೇ ‘ಯುಐ’ ಕಥೆ ಆದಂತಿದೆ. ಪ್ರಸ್ತುತ ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ಫಿಲ್ಮೀ ಟಚ್ ನೀಡಿದ ಉಪೇಂದ್ರ.
ಮನರಂಜನೆಗಿಂತಲೂ ಗಂಭೀರವಾದ ವಿಷಯಗಳ ಮಂಡನೆಗೆ ಉಪೇಂದ್ರ ಹೆಚ್ಚು ಗಮನ ನೀಡಿದ್ದಾರೆ. ಹಾಗಾಗಿ ಇದು ಮಾಮೂಲಿ ಸಿನಿಮಾಗಳಿಗಿಂತ ಭಿನ್ನವಾಗಿದೆ.
ಮಾಮೂಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್, ರೊಮ್ಯಾನ್ಸ್ ಹೊರತುಪಡಿಸಿ ಬೇರೆ ರೀತಿಯಲ್ಲಿ ಸಿನಿಮಾ ಕಟ್ಟಿಕೊಡಲು ಉಪೇಂದ್ರ ಪ್ರಯತ್ನಿಸಿದ್ದಾರೆ.
‘ಯುಐ’ ಎಂದರೆ ಏನು ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಆದರೆ ಫಸ್ಟ್‌ಹಾಫ್‌ನಲ್ಲಿ ಅದಕ್ಕೆ ಉತ್ತರ ಸಿಗಲ್ಲ. ಉತ್ತರ ಸಿಗಬೇಕಿದ್ದರೆ ಸೆಕೆಂಡ್ ಹಾಫ್‌ಗೆ ಕಾಯಬೇಕು.