Vasanthi Nalidaga: ಡಿಸೆಂಬರ್ ತಿಂಗಳಲ್ಲಿ ಸಿನಿಮಾಗಳ ಭರಾಟೆ; ನಾಲ್ಕನೇ ವಾರದಲ್ಲೂ ‘ವಾಸಂತಿ ನಲಿದಾಗ’
ಹೊಸಬರ ಚಿತ್ರಕ್ಕೆ ಒಮ್ಮೆಲೇ ದೊಡ್ಡ ಓಪನಿಂಗ್ ಸಿಗುವುದು ಕಷ್ಟ. ನಿಧಾನವಾಗಿ ಸೆಳೆಯುವ ಗುಣ ಇಂಥ ಸಿನಿಮಾಗಳಿಗೆ ಇರುತ್ತವೆ. ಆ ಭರವಸೆಯೊಂದಿಗೆ ನಾಲ್ಕನೇ ವಾರಕ್ಕೆ ‘ವಾಸಂತಿ ನಲಿದಾಗ’ ಕಾಲಿಟ್ಟಿದೆ.
ಚಿತ್ರರಂಗದಲ್ಲಿ ಡಿಸೆಂಬರ್ ತಿಂಗಳು ಹಲವರ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದುಂಟು. ಅದೇ ಕಾರಣಕ್ಕೋ ಏನೋ ಹಲವಾರು ಸಿನಿಮಾಗಳು ಈ ತಿಂಗಳಲ್ಲೇ ತೆರೆಕಾಣಲು ಮುಗಿ ಬೀಳುತ್ತವೆ. ಅನೇಕ ಚಿತ್ರಗಳು ಒಮ್ಮೆಲೇ ರಿಲೀಸ್ ಆದರೆ ಯಾವುದನ್ನು ನೋಡೋದು ಯಾವುದನ್ನು ಬಿಡೋದು ಎಂಬ ಪರಿಸ್ಥಿತಿ ಪ್ರೇಕ್ಷಕನದ್ದು. ಸಿನಿಮಾ ಚೆನ್ನಾಗಿದ್ದರೂ ಚಿತ್ರಮಂದಿರದಲ್ಲಿ ಅದನ್ನು ಉಳಿಸಿಕೊಳ್ಳಲು ಹೊಸಬರು ಸಖತ್ ಕಷ್ಟಪಡಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡದ ‘ವಾಸಂತಿ ನಲಿದಾಗ’ (Vasanthi Nalidaga) ಸಿನಿಮಾ ಈಗ ನಾಲ್ಕನೇ ವಾರದಲ್ಲಿ ಪ್ರದರ್ಶನ ಮುಂದುವರಿಸಿದೆ. ಈ ಚಿತ್ರಕ್ಕೆ ಹೊಸ ನಟ ರೋಹಿತ್ ಶ್ರೀಧರ್ ಹೀರೋ. ಅವರ ಜೊತೆ ಸಾಧು ಕೋಕಿಲ (Sadhu Kokila), ಸುಧಾರಾಣಿ, ಸಾಯಿ ಕುಮಾರ್ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ.
ಡಿಸೆಂಬರ್ 2ರಂದು ತೆರೆಕಂಡ ‘ವಾಸಂತಿ ನಲಿದಾಗ’ ಚಿತ್ರ 2ನೇ ವೀಕೆಂಡ್ನಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಆದರೆ ಮೂರನೇ ವಾರದಲ್ಲಿ ಈ ಚಿತ್ರಕ್ಕೆ ನಿಜಕ್ಕೂ ಸವಾಲು ಎದುರಾಯಿತು. ಯಾಕೆಂದರೆ ಈ ಡಿ.16ರಂದು ಬಿಡುಗಡೆ ಆದ ಹಾಲಿವುಡ್ನ ದೈತ್ಯ ಸಿನಿಮಾ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ನೂರಾರು ಚಿತ್ರಮಂದಿಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿತು. ಅದರ ನಡುವೆಯೂ ಬೆಂಗಳೂರಿನ ಕೆಲವು ಥಿಯೇಟರ್ಗಳಲ್ಲಿ ‘ವಾಸಂತಿ ನಲಿದಾಗ’ ಸಿನಿಮಾ ಪ್ರದರ್ಶನ ಮುಂದುವರಿಸಿದೆ.
ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್ 2’ ಟಿಕೆಟ್ ಬೆಲೆ; ಆದ್ರೂ ಮುಗಿಬಿದ್ದು ಬುಕ್ ಮಾಡುತ್ತಿರುವ ಪ್ರೇಕ್ಷಕರು
ಹೊಸಬರ ಚಿತ್ರಕ್ಕೆ ಸಡನ್ ಆಗಿ ದೊಡ್ಡ ಓಪನಿಂಗ್ ಸಿಗುವುದು ಕಷ್ಟ. ನಿಧಾನವಾಗಿ ಸೆಳೆಯುವ ಗುಣ ಇಂಥ ಸಿನಿಮಾಗಳಿಗೆ ಇರುತ್ತವೆ. ಆ ಭರವಸೆಯೊಂದಿಗೆ ನಾಲ್ಕನೇ ವಾರಕ್ಕೆ ‘ವಾಸಂತಿ ನಲಿದಾಗ’ ಕಾಲಿಟ್ಟಿದೆ. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ. ಪಕ್ಕಾ ಕಾಲೇಜು ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್, ತರಲೆ-ತಮಾಷೆ ಸೇರಿದಂತೆ ಹತ್ತಾರು ವಿಚಾರಗಳು ಈ ಸಿನಿಮಾದಲ್ಲಿ ಮನರಂಜನೆ ನೀಡುತ್ತಿವೆ.
ಇದನ್ನೂ ಓದಿ: Avatar 2: ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಅದ್ದೂರಿ ರಿಲೀಸ್; ಆದರೆ ಮೊದಲ ದಿನವೇ ಪೈರಸಿ ಕಾಟ
‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ಹೊಸಬರು ಮತ್ತು ಹಳಬರ ಸಂಗಮ ಆಗಿದೆ. ಹೊಸ ಪ್ರತಿಭೆ ರೋಹಿತ್ ಶ್ರೀಧರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್ ಅವರಂತಹ ಅನುಭವಿ ಕಲಾವಿದರು ಸಾಥ್ ನೀಡಿದ್ದಾರೆ.
ಭಾವನಾ ಶ್ರೀನಿವಾಸ್, ಜೀವಿತಾ ವಸಿಷ್ಠ, ರಾಘು ರಾಮನಕೊಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೇನುಗೂಡು ಕೆ.ಎನ್. ಶ್ರೀಧರ್ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನ, ಶ್ರೀಗುರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.