ಫ್ಯಾಮಿಲಿ ಪ್ರೇಕ್ಷಕರು ಮೆಚ್ಚಿದ ‘ತ್ರಿವಿಕ್ರಮ’ ಸಿನಿಮಾ; ಹೌಸ್​ಫುಲ್​ ಆಗಿದ್ದಕ್ಕೆ ಚಿತ್ರತಂಡ​ ಹ್ಯಾಪಿ

| Updated By: ಮದನ್​ ಕುಮಾರ್​

Updated on: Jun 30, 2022 | 7:15 AM

Vikram Ravichandran | Trivikrama: ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಸ್ಪಂದನೆ ಕಂಡು ವಿಕ್ರಮ್​ ರವಿಚಂದ್ರನ್​ ಖುಷಿ ಆಗಿದ್ದಾರೆ. ಗೆಲುವಿನ ಬಗ್ಗೆ ನಿರ್ದೇಶಕ ಸಹನಮೂರ್ತಿ, ನಿರ್ಮಾಪಕ ಸೋಮಣ್ಣ ಮಾತನಾಡಿದ್ದಾರೆ.

ಫ್ಯಾಮಿಲಿ ಪ್ರೇಕ್ಷಕರು ಮೆಚ್ಚಿದ ‘ತ್ರಿವಿಕ್ರಮ’ ಸಿನಿಮಾ; ಹೌಸ್​ಫುಲ್​ ಆಗಿದ್ದಕ್ಕೆ ಚಿತ್ರತಂಡ​ ಹ್ಯಾಪಿ
ಆಕಾಂಕ್ಷಾ ಶರ್ಮಾ. ವಿಕ್ರಮ್​, ಸೋಮಣ್ಣ, ಸಹನಮೂರ್ತಿ
Follow us on

ನಟ ರವಿಚಂದ್ರನ್​ (Ravichandran) ಅವರು ಹಲವಾರು ಸಿನಿಮಾಗಳಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದುಂಟು. ಈಗ ಅದೇ ಹಾದಿಯಲ್ಲಿ ಅವರ ಪುತ್ರ ವಿಕ್ರಮ್​ ರವಿಚಂದ್ರನ್​ ಕೂಡ ಸಾಗುತ್ತಿದ್ದಾರೆ. ಹೌದು, ವಿಕ್ರಮ್​ ನಟನೆಯ ‘ತ್ರಿವಿಕ್ರಮ’ ಸಿನಿಮಾ ನೋಡಿದ ಫ್ಯಾಮಿಲಿ ಆಡಿಯನ್ಸ್​ ಮೆಚ್ಚಿಕೊಂಡಿದ್ದಾರೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ವಿಕ್ರಮ್​ ರವಿಚಂದ್ರನ್​ (Vikram Ravichandran) ನಟನೆಯ ಮೊದಲ ಸಿನಿಮಾ ಇದು. ಚೊಚ್ಚಲ ಚಿತ್ರದಲ್ಲೇ ಅವರು ಪ್ರೇಕ್ಷಕರ ಮನೆಮಗನಾಗಲು ಪ್ರಯತ್ನಿಸಿದ್ದಾರೆ. ಜೂನ್​ 24ರಂದು ‘ತ್ರಿವಿಕ್ರಮ’ ಬಿಡುಗಡೆ ಆಯಿತು. ಹಲವು ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರು ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿರುವುದರಿಂದ ‘ತ್ರಿವಿಕ್ರಮ’ (Trivikrama) ಬಳಗದವರ ಮುಖದಲ್ಲಿ ನಗು ಮೂಡಿದೆ.

ಈ ಸಿನಿಮಾಗೆ ‘ಸೋಮಣ್ಣ ಟಾಕೀಸ್​’ ಮೂಲಕ ರಾಮ್ಕೋ ಸೋಮಣ್ಣ ಅವರು ಬಂಡವಾಳ ಹೂಡಿದ್ದಾರೆ. ಸಹನಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಸೋಮಣ್ಣ ಮಾಹಿತಿ ನೀಡಿದ್ದಾರೆ. ‘ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಮೂರು ದಿನ ನಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಕಲೆಕ್ಷನ್​ ಆಗಿದೆ. ಶೋಗಳ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ವಿಕ್ರಮ್​ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ಸಹನಮೂರ್ತಿ ಅವರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ‘ಸಿನಿಮಾ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದಲ್ಲಿ ಎಲ್ಲ ಎಮೋಷನ್ಸ್​ ಇರುವುದಕ್ಕೆ ಜನರು ಎಂಜಾಯ್​ ಮಾಡುತ್ತಿದ್ದಾರೆ. ಪ್ರೀತಿಗಾಗಿ ಹಂಬಲಿಸುವ ಎಲ್ಲ ಮನಸ್ಸುಗಳಿಗೆ ನಮ್ಮ ಸಿನಿಮಾ ಇಷ್ಟ ಆಗಿದೆ’ ಎಂದು ಸಹನಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ
ಕ್ರೇಜಿಸ್ಟಾರ್ ರವಿಚಂದ್ರನ್​ಗೆ ಡಾಕ್ಟರೇಟ್ ಘೋಷಣೆ ಮಾಡಿದ ಬೆಂಗಳೂರು ನಗರ ವಿವಿ
ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..
‘ಮೆಗಾ ಸ್ಟಾರ್’​ ಚಿರಂಜೀವಿ ಮತ್ತು ರವಿಚಂದ್ರನ್​ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು
ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!

ಆಕಾಂಕ್ಷಾ ಶರ್ಮಾ ಮತ್ತು ವಿಕ್ರಮ್​ ರವಿಚಂದ್ರನ್​ ಅವರು ಜೋಡಿಯಾಗಿ ನಟಿಸಿದ ಈ ಚಿತ್ರದಲ್ಲಿ ಹಲವು ಕಲಾವಿದರು ಅಭಿನಯಿಸಿದ್ದಾರೆ. ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಸ್ಪಂದನೆ ಕಂಡು ವಿಕ್ರಮ್​ ಅವರು ಖುಷಿ ಆಗಿದ್ದಾರೆ. ‘ನಿರ್ದೇಶಕರು ಹೇಳಿದ ರೀತಿಯಲ್ಲಿ ಪಾತ್ರ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಸುದೀಪ್​ ಅವರು ಟ್ವೀಟ್​ ಮಾಡಿ ಬೆಂಬಲ ನೀಡಿದ್ದಾರೆ. ಅದರಿಂದ ತುಂಬ ಖುಷಿ ಆಗಿದೆ. ಹಲವು ಸೆಲೆಬ್ರಿಟಿಗಳು ಸಿನಿಮಾ ನೋಡುತ್ತೇನೆ ಅಂತ ಹೇಳಿದ್ದಾರೆ. ನಮಗೆಲ್ಲ ಇದು ಹೊಸದು. ಯಾವುದನ್ನೂ ತಲೆಗೆ ತೆಗೆದುಕೊಳ್ಳಲು ನನಗೆ ಇಷ್ಟ ಇಲ್ಲ. ಮಾಡುವಂತಹ ಕೆಲಸ ಇನ್ನೂ ಇದೆ’ ಎಂದು ವಿಕ್ರಮ್​ ರವಿಚಂದ್ರನ್​ ಹೇಳಿದ್ದಾರೆ.

ಇದನ್ನೂ ಓದಿ: ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ

ರವಿಚಂದ್ರನ್​ ಮಗನ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೊಸ ನಟಿಯ ಹೆಸರು? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ