Vikrant Rona Collection: ಗರಗರ ಗಗ್ಗರ; ಎರಡನೇ ದಿನವೂ ಮುಂದುವರಿದ ‘ವಿಕ್ರಾಂತ್ ರೋಣ’ ಅಬ್ಬರ
‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ದಿನ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಕರ್ನಾಟಕ ಒಂದರಲ್ಲೇ ಈ ಚಿತ್ರ 16 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ವಿಶೇಷ.
ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದ ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಎರಡನೇ ದಿನವಾದ ಶುಕ್ರವಾರ (ಜುಲೈ 29) ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಅಬ್ಬರ ಎರಡನೇ ದಿನವೂ ಮುಂದುವರಿದಿದೆ. ಸುದೀಪ್ (Sudeep) ಅವರು ಈ ಚಿತ್ರದ ಮೂಲಕ ಒಂದು ದೊಡ್ಡ ಗೆಲುವು ಕಂಡಿದ್ದಾರೆ. ‘ರಂಗಿತರಂಗ’ ಚಿತ್ರದ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಅವರು ಮತ್ತೆ ಗೆಲುವಿನ ನಗು ಬೀರಿದ್ದಾರೆ. ಶನಿವಾರ (ಜುಲೈ 30) ಹಾಗೂ ಭಾನುವಾರ (ಜುಲೈ 31) ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು.
‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ದಿನ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಕರ್ನಾಟಕ ಒಂದರಲ್ಲೇ ಈ ಚಿತ್ರ 16 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ವಿಶೇಷ. ಉಳಿದಂತೆ ಕಾಲಿವುಡ್, ಟಾಲಿವುಡ್ನಿಂದ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಯಿತು. ಹಿಂದಿ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಎರಡನೇ ದಿನದ ಲೆಕ್ಕಾಚಾರ ಸಿಕ್ಕಿದೆ.
ಮೊದಲ ದಿನ ಸಾಕಷ್ಟು ಕಡೆಗಳಲ್ಲಿ ಮುಂಜಾನೆಯಿಂದಲೇ ಫ್ಯಾನ್ ಶೋ ಇತ್ತು. ಶುಕ್ರವಾರ ನಾರ್ಮಲ್ ಶೋಗಳು ಮಾತ್ರ ಇದ್ದವು. ಅಲ್ಲದೆ, ಅಂದು ಯಾವುದೇ ರಜೆ ಇರಲಿಲ್ಲ. ಈ ಕಾರಣಕ್ಕೆ ಮೊದಲ ದಿನಕ್ಕಿಂತ ಕೊಂಚ ಕಡಿಮೆ ಗಳಿಕೆ ಆಗಿದೆ. ಈ ಚಿತ್ರ ಶುಕ್ರವಾರ 20-25 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಮೊದಲ ವೀಕೆಂಡ್ ಕಳೆಯುವುದರೊಳಗೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ರೇಟಿಂಗ್? ಇಲ್ಲಿದೆ ಪೂರ್ಣ ವಿವರ
ಸುದೀಪ್ ವೃತ್ತಿ ಜೀವನದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ವಿಶೇಷವಾಗಿದೆ. ಅವರು ನಟಿಸಿದ ಸಿನಿಮಾಗಳ ಪೈಕಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ವೀಕೆಂಡ್ ಗಳಿಕೆಯನ್ನೂ ಸೇರಿಸಿದರೆ ಈ ಸಿನಿಮಾ ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ‘ರಂಗಿತರಂಗ’ ಚಿತ್ರದ ಶೇಡ್ನಲ್ಲಿದೆ ಎನ್ನುವ ಮಾತುಗಳು ಕೇಳಿ ಬಂದವು. ಆದರೆ, ಪ್ರೇಕ್ಷಕರು ಇದನ್ನು ನೆಗೆಟಿವ್ ರೀತಿಯಲ್ಲಿ ಸ್ವೀಕರಿಸಿಲ್ಲ. ಈ ಚಿತ್ರದಲ್ಲಿ ಸುದೀಪ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.
Published On - 9:27 am, Sat, 30 July 22