‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಇಂದು (ಜುಲೈ 28) ವಿಶ್ವಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾ ಫ್ಯಾನ್ಸ್ಗೆ ಇಷ್ಟವಾಗಿದೆ. ಸಿನಿಪ್ರಿಯರು ಮುಗಿಬಿದ್ದು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ ಎಂಬ ಲೆಕ್ಕಾಚಾರ ತಿಳಿಯಲು ಸುದೀಪ್ (Sudeep) ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಒಳ್ಳೆಯ ರೇಟಿಂಗ್ ಸಿಗುತ್ತಿದೆ. ಇದು ಅವರ ಫ್ಯಾನ್ಸ್ ಖುಷಿ ಹೆಚ್ಚಿಸಿದೆ.
ಸಿನಿಮಾ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ದಲ್ಲಿ ರೇಟಿಂಗ್ ನೀಡುವ ಅವಕಾಶ ಇದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಿದವರು ಈ ಆ್ಯಪ್ನಲ್ಲಿ ಒಳ್ಳೆಯ ರೇಟಿಂಗ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಶೇ. 91 ರೇಟಿಂಗ್ (ಜುಲೈ 28 ಸಂಜೆ 7 ಗಂಟೆಗೆ ಅನುಸಾರವಾಗಿ) ಸಿಕ್ಕಿದೆ. 3.7 ಸಾವಿರ ಜನರು ಈ ಸಿನಿಮಾಗೆ ರೇಟಿಂಗ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗಬಹುದು.
ಐಎಂಡಿಬಿ ವೆಬ್ಸೈಟ್ನಲ್ಲಿ ಎಲ್ಲಾ ಸಿನಿಮಾಗಳಿಗೆ ರೇಟಿಂಗ್ ನೀಡಲಾಗುತ್ತದೆ. ಇದಕ್ಕೆ ರೇಟಿಂಗ್ ನೀಡುವವರು ಪ್ರೇಕ್ಷಕರೇ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಐಎಂಡಿಬಿಯಲ್ಲಿ 9.3/10 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಚಿತ್ರದ ರೇಟಿಂಗ್ ಹೆಚ್ಚಿದರೆ ಸಿನಿಮಾಗೆ ಮತ್ತಷ್ಟು ಮೈಲೇಜ್ ಸಿಗಲಿದೆ.
ಬುಕ್ ಮೈ ಶೋ ಹಾಗೂ ಐಎಂಡಿಬಿ ರೇಟಿಂಗ್ ನೋಡಿ ಸಿನಿಮಾ ವೀಕ್ಷಿಸಲು ತೆರಳುವ ವರ್ಗವೇ ಇದೆ. ಎಲ್ಲ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಗುತ್ತಿರುವ ಕಾರಣ ವೀಕೆಂಡ್ನಲ್ಲಿ ಈ ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳುವ ಸಾಧ್ಯತೆ ಇದೆ. ಸೋಮವಾರ (ಆಗಸ್ಟ್ 1) ಈ ಚಿತ್ರ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡಲಿದೆ ಎಂಬುದು ತುಂಬಾನೇ ಮುಖ್ಯ ಆಗಲಿದೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರ ನೋಡುವಾಗ ಕಿರಿಕ್; ಥಿಯೇಟರ್ನಲ್ಲೇ ಝಳಪಿಸಿದ ಮಚ್ಚು, ಲಾಂಗ್
‘ವಿಕ್ರಾಂತ್ ರೋಣ’ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ರಂಗಿತರಂಗ’ದ ಅನೇಕ ತಂತ್ರಗಳನ್ನು ಇಲ್ಲಿಯೂ ಅಳವಡಿಕೆ ಮಾಡಿಕೊಂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.