ನಿಮ್ಮ ನೆಚ್ಚಿನ ಸಿನಿಮಾ ನಟ-ನಟಿಯರು ಇಂದು ಎಲ್ಲೆಲ್ಲಿ ಮತಚಲಾಯಿಸಲಿದ್ದಾರೆ ಇಲ್ಲಿ ತಿಳಿಯಿರಿ

| Updated By: ರಾಜೇಶ್ ದುಗ್ಗುಮನೆ

Updated on: May 10, 2023 | 11:20 AM

Karnataka Assembly Election 2023: ಕನ್ನಡ ಚಿತ್ರರಂಗದ ಯಾವ ತಾರೆಯರು ಇಂದು ಯಾವ ಯಾವ ಕ್ಷೇತ್ರಕ್ಕೆ ಯಾವ ಯಾವ ಏರಿಯಾದಿಂದ ಮತಚಲಾವಣೆ ಮಾಡುತ್ತಾರೆ? ಮಾಹಿತಿ ಇಲ್ಲಿ ತಿಳಿಯಿರಿ.

ನಿಮ್ಮ ನೆಚ್ಚಿನ ಸಿನಿಮಾ ನಟ-ನಟಿಯರು ಇಂದು ಎಲ್ಲೆಲ್ಲಿ ಮತಚಲಾಯಿಸಲಿದ್ದಾರೆ ಇಲ್ಲಿ ತಿಳಿಯಿರಿ
ಮತದಾನ
Follow us on

ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Election) ಮತದಾನ ಇಂದು ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಸಂಜೆ 6 ರವರೆಗೆ ಮತದಾನ ನಡೆಯುತ್ತಿರುತ್ತದೆ. ಮತದಾನ ಕಡ್ಡಾಯವಾಗಿದ್ದು ಚಿತ್ರರಂಗದವರು ಕೆಲವು ಕ್ರೀಡಾಪಟುಗಳು ಈಗಾಗಲೇ ಮತದಾನ ಜಾಗೃತಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಚುನಾವಣೆಯು ಪ್ರಜಾಪ್ರಭುತ್ವದ ಮುಖ್ಯ ಹಬ್ಬವಾಗಿದ್ದು ಈ ದಿನ ಯಾವ ಯಾವ ನಟ-ನಟಿಯರು (Movie Celebrities) ಎಲ್ಲೆಲ್ಲಿ ಮತಚಲಾಯಿಸಲಿದ್ದಾರೆ ಇಲ್ಲಿದೆ ನೋಡಿ ಮಾಹಿತಿ.

ನಟ ಸುದೀಪ್ (Sudeep) – ಬೊಮ್ಮನಹಳ್ಳಿ ಕ್ಷೇತ್ರ, ಓಟ್ ಮಾಡುವ ಸ್ಥಳ, ಪುಟ್ಟೇನಹಳ್ಳಿ ವಾರ್ಡ್ ಮತಗಟ್ಟೆ ಸಂಖ್ಯೆ 175
ನಟ ಯಶ್ (Yash), ಕತ್ರಿಗುಪ್ಪೆ. ಉಪೇಂದ್ರ ಸಹ ಕತ್ರಿಗುಪ್ಪೆ, ಸೃಜನ್ ಲೋಕೇಶ್ ಕತ್ರಿಗುಪ್ಪೆ, ಶಿವರಾಜ್ ಕುಮಾರ್-ಬ್ಯಾಟರಾಯನ ಪುರ ಕ್ಷೇತ್ರ (ರಾಚೇನಹಳ್ಳಿ) ಮಾನ್ಯಾತ ಟೆಕ್ ಪಾರ್ಕ್​​ನಲ್ಲಿರುವ ಲೋಯರ್ ಪ್ರೈಮರಿ ಸ್ಕೂಲ್ ನಲ್ಲಿ ಮತಚಲಾವಣೆ ಮಾಡಲಿದ್ದಾರೆ.

ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ನಟ ರವಿಚಂದ್ರನ್ ರಾಜಾಜಿನಗರ, ಧ್ರುವ ಸರ್ಜಾ ತ್ಯಾಗರಾಜನಗರ, ರಾಘವೇಂದ್ರ ರಾಜ್ ಕುಮಾರ್ ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್, ನೆನಪಿರಲಿ ಪ್ರೇಮ್ ಆರ್ ಆರ್ ನಗರ, ಅಮೂಲ್ಯ ಆರ್ ಆರ್ ನಗರ, ರಚಿತಾ ರಾಮ್ ಆರ್ ಆರ್ ನಗರ, ಕಾರುಣ್ಯ ರಾಮ್ ಆರ್ ಆರ್ ನಗರ, ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರ, ಅವಿನಾಶ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡುವವರಿದ್ದಾರೆ.

ಜಗ್ಗೇಶ್ ಮಲ್ಲೇಶ್ವರಂ, ಅನಂತ್ ನಾಗ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ರಿಗುಪ್ಪೆ, ಸಾಧು ಕೋಕಿಲ ನಾಗರಭಾವಿ, ಚಂದನ್ ಶೆಟ್ಟಿ ನಾಗರಬಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರ, ಶ್ರುತಿ ಹೊಸಕೆರೆ ಹಳ್ಳಿ, ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ಮತಚಲಾವಣೆ ಮಾಡಲಿದ್ದಾರೆ.

ಇನ್ನು ನಟ ರಕ್ಷಿತ್ ಶೆಟ್ಟಿ ಕುಂದಾಪುರ, ರಿಷಬ್ ಶೆಟ್ಟಿ ಕುಂದಾಪುರ, ರಾಜ್ ಬಿ ಶೆಟ್ಟಿ ಕುಂದಾಪುರ, ನಿಖಿಲ್ ಕುಮಾರಸ್ವಾಮಿ ಬಿಡದಿ, ಡಾಲಿ ಧನಂಜಯ್ ಅರಸಿಕೆರೆ, ಆಶಿಕಾ ರಂಗನಾಥ್ ತುಮಕೂರು, ಹಾಸ್ಯನಟ ಚಿಕ್ಕಣ್ಣ ಮೈಸೂರು, ಹಿರಿಯ ನಟಿ ಲೀಲಾವತಿ ಸೋಲದೇವನಹಳ್ಳಿಯಲ್ಲಿ ಈಗಾಗಲೇ ಮತ ಚಲಾಯಿಸಿದ್ದಾರೆ. ದೊಡ್ಡಣ್ಣ ಬಿದುರು ಕಲ್ಲು, ವಿನೋದ್ ರಾಜ್ ಸೋಲದೇವನಹಳ್ಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:00 am, Wed, 10 May 23