ಅಭಿಮಾನಿಗಳಿಗೆ ಯಶ್​ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?

|

Updated on: Mar 22, 2025 | 2:22 PM

ರಾಕಿಂಗ್ ಸ್ಟಾರ್ ಯಶ್ ಅವರು ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ನಡೆಯಲಿದೆ. ಯಶ್ ಅವರ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.

ಅಭಿಮಾನಿಗಳಿಗೆ ಯಶ್​ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?
ಯಶ್
Follow us on

ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನು ಭೇಟಿ ಮಾಡೋದು ಅಷ್ಟು ಸುಲಭವಿಲ್ಲ. ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಿರುವಾಗ ಅಭಿಮಾನಿಗಳು ಅವರನ್ನು ದೂರದಿಂದ ನೋಡಿದರೂ ಸಾಕು ಎಂದುಕೊಳ್ಳುತ್ತಾ ಇರುತ್ತಾರೆ. ಅಂಥದ್ದೊಂದು ಅವಕಾಶ ಈಗ ಅಭಿಮಾನಿಗಳಿಗೆ ಸಿಗುತ್ತಿದೆ. ಅವರು ಸಿನಿಮಾ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಬರಳುತ್ತಿದ್ದಾರೆ. ಹೀಗಾಗಿ, ಅಭಿಮಾನಿಗಳಿಗೆ ಯಶ್ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಈ. ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ಭಾನುವಾರ (ಮಾರ್ಚ್​ 23) ಬೆಂಗಳೂರಿನ ಲುಲು ಮಾಲ್​ನ ಹೊರ ಭಾಗದಲ್ಲಿ ನಡೆಯಲಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಸಲ್ಮಾನ್ ಸಿಕಂದರ್​ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು
ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
ಬಂದ್ ವೇಳೆ ಥಿಯೇಟರ್​ನಲ್ಲಿ ಸಿನಿಮಾ ನೋಡೋ ಪ್ಲ್ಯಾನ್ ಬೇಡ; ಪ್ರದರ್ಶನ ಸಮಯ?

ಸ್ಟಾರ್ ಹೋಟೆಲ್​ಗಳಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಆದರೆ ಅಭಿಮಾನಿಗಳು ಒಳಗೆ ತೆರಳೋಕೆ ಸಾಧ್ಯವಾಗುವುದಿಲ್ಲ. ಆದರೆ, ‘ಮನದ ಕಡಲು’ ಟ್ರೇಲರ್ ಲಾಂಚ್​ನ ಆ ರೀತಿ ಮಾಡುತ್ತಾ ಇಲ್ಲ. ಲುಲು ಮಾಲ್ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ, ಅಭಿಮಾನಿಗಳಿಗೆ ಯಶ್ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.

2012ರಲ್ಲಿ ಯಶ್ ನಟನೆಯ ‘ಡ್ರಾಮಾ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಇತ್ತು. ಈ ಕಾರಣಕ್ಕೆ ಯಶ್ ಹಾಗೂ ಯೋಗರಾಜ್ ಭಟ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಹೀಗಾಗಿ ಯಶ್ ಅವರು ಯೋಗರಾಜ್ ಭಟ್ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಮನೆಗೆ ಯಶ್-ರಾಧಿಕಾ ಪಂಡಿತ್ ಭೇಟಿ, ಇಲ್ಲಿವೆ ನೋಡಿ ಚಿತ್ರ

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಅಲ್ಲದೆ, ಅವರು ‘ರಾಮಾಯಣ’ ಚಿತ್ರದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕನೂ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:21 pm, Sat, 22 March 25